Apr 29, 2026 Languages : ಕನ್ನಡ | English

ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ ಧ್ರುವ ಸರ್ಜಾ!! 'ಡಿ ಬಾಸ್' ಫೋಟೋ ಶೇರ್ ಮಾಡಿ ಆಕ್ಷನ್ ಪ್ರಿನ್ಸ್ ಕೊಟ್ಟ ಸಂದೇಶವೇನು?

ಸ್ಯಾಂಡಲ್‌ವುಡ್‌ನಲ್ಲಿ ಸದ್ಯದ ಹಾಟ್ ಟಾಪಿಕ್ ಅಂದ್ರೆ ಅದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವಿನ ಸ್ನೇಹ. ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ, ವೈಮನಸ್ಸು ಮೂಡಿದೆ ಅನ್ನೋ ಗಾಸಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಎದ್ದೇ ಇರ್ತವೆ. ಆದರೆ, ಈಗ ಧ್ರುವ ಸರ್ಜಾ ಮಾಡಿರೋ ಒಂದು ಕೆಲಸ ಈ ಎಲ್ಲಾ ಸುದ್ದಿಗಳಿಗೂ ಫುಲ್ ಸ್ಟಾಪ್ ಇಟ್ಟಿದೆ.

ದರ್ಶನ್ ಫೋಟೋ ಶೇರ್ ಮಾಡಿದ ಧ್ರುವ ಸರ್ಜಾ | Photo Credit: DhruvaSarja
ದರ್ಶನ್ ಫೋಟೋ ಶೇರ್ ಮಾಡಿದ ಧ್ರುವ ಸರ್ಜಾ | Photo Credit: DhruvaSarja

ಏನಿದು ಧ್ರುವ ಶೇರ್ ಮಾಡಿದ ವಿಡಿಯೋ?

ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಅಣ್ಣ-ತಮ್ಮಂದಿರ ಮತ್ತು ಆಪ್ತ ಜೋಡಿಗಳ ಫೋಟೋಗಳನ್ನು ಸೇರಿಸಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಶೇಷ ಅಂದ್ರೆ, ಈ ವಿಡಿಯೋದಲ್ಲಿ ನಟ ದರ್ಶನ್ ಮತ್ತು ದಿನಕರ್ ಅವರ ಫೋಟೋ ಕೂಡ ಇದೆ. ಧ್ರುವ ಅವರ ಈ ಪೋಸ್ಟ್ ಕಂಡ ದರ್ಶನ್ ಅಭಿಮಾನಿಗಳು ಈಗ ಫುಲ್ ಖುಷಿಯಾಗಿದ್ದು, "ನಮ್ಮವರ ನಡುವೆ ಯಾವತ್ತೂ ಭಿನ್ನಾಭಿಪ್ರಾಯ ಇಲ್ಲ" ಅಂತ ಸಂಭ್ರಮಿಸುತ್ತಿದ್ದಾರೆ.

View this post on Instagram

A post shared by Dhruva Sarja (@dhruva_sarjaa)

ಈ ವಿಡಿಯೋದಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜ ಜೋಡಿಗಳಾದ:

  • ಶಂಕರ್ ನಾಗ್ - ಅನಂತ್ ನಾಗ್
  • ಡಾ. ರಾಜಕುಮಾರ್ - ಎಸ್.ಪಿ. ವರದರಾಜು
  • ಶಿವರಾಜ್ ಕುಮಾರ್ - ರಾಘವೇಂದ್ರ - ಪುನೀತ್ ರಾಜ್‌ಕುಮಾರ್
  • ದರ್ಶನ್ - ದಿನಕರ್ ತೂಗುದೀಪ
  • ಜಗ್ಗೇಶ್ - ಕೋಮಲ್
  • ವಿಜಯ್ ರಾಘವೇಂದ್ರ - ಶ್ರೀಮುರಳಿ
  • ಧ್ರುವ - ಚಿರಂಜೀವಿ ಸರ್ಜಾ

ಹೀಗೆ ಅನೇಕ ಸ್ಟಾರ್ ಜೋಡಿಗಳ ಫೋಟೋಗಳನ್ನು ಹಾಕಿ, ಹಿನ್ನೆಲೆಯಲ್ಲಿ ತಮ್ಮದೇ ಚಿತ್ರದ 'ಜೋಡೆತ್ತು' ಹಾಡನ್ನು ಬಳಸಿಕೊಂಡಿದ್ದಾರೆ. ಈ ಮೂಲಕ "ನಾವೆಲ್ಲರೂ ಒಂದೇ" ಅನ್ನೋ ಪವರ್‌ಫುಲ್ ಸಂದೇಶ ರವಾನಿಸಿದ್ದಾರೆ.

'ಕೆಡಿ' ರಿಲೀಸ್‌ಗೆ ಮುಹೂರ್ತ ಫಿಕ್ಸ್: ಅಭಿಮಾನಿಗಳಿಗೆ ಹಬ್ಬ

ಇನ್ನು ಧ್ರುವ ಸರ್ಜಾ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 'ಕೆಡಿ' (KD) ಸಿನಿಮಾ ನಾಳೆ ಅಂದ್ರೆ ಏಪ್ರಿಲ್ 30ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಭೂಗತ ಲೋಕದ ಕಥೆಯನ್ನೇ ಸಿನಿಮಾ ಮಾಡಿ ಪ್ರೇಮ್ ಈ ಬಾರಿ ಯಾವ ಮ್ಯಾಜಿಕ್ ಮಾಡ್ತಾರೋ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ಈ ಸಿನಿಮಾದ ಸ್ಪೆಷಾಲಿಟಿಗಳೇನು?

ಕಿಚ್ಚನ ಎಂಟ್ರಿ: ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 'ಕಾಲಭೈರವ' ಅನ್ನೋ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರೀಷ್ಮಾ ನಾಣಯ್ಯ: ಧ್ರುವ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಮಿಂಚಿದ್ದಾರೆ.

ಕನ್ನಡದಲ್ಲೇ ಮೊದಲು: ಕೆಡಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿದ್ದರೂ, ಪ್ರೇಮ್ ಅವರು ಈಗ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಮೊದಲು ಈ ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಲಿದೆ. ಆ ನಂತರವಷ್ಟೇ ಬೇರೆ ಭಾಷೆಗಳಿಗೆ ಸಿನಿಮಾ ಬರಲಿದೆ.

ಧ್ರುವ ಸರ್ಜಾ ಅವರು ದರ್ಶನ್ ಫೋಟೋ ಶೇರ್ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಪಾಸಿಟಿವ್ ವೈಬ್ಸ್ ಹರಿಸಿದ್ದಾರೆ. ಒಂದೆಡೆ ದರ್ಶನ್ ಫ್ಯಾನ್ಸ್ ಖುಷಿ, ಇನ್ನೊಂದೆಡೆ 'ಕೆಡಿ' ಸಿನಿಮಾ ರಿಲೀಸ್ ಸಂಭ್ರಮ - ಅಕ್ಷರಶಃ ಸ್ಯಾಂಡಲ್‌ವುಡ್‌ನಲ್ಲಿ ಈಗ ಹಬ್ಬದ ವಾತಾವರಣ ಇದೆ. ನಾಳೆ ಬೆಳ್ಳಿತೆರೆಯ ಮೇಲೆ 'ಕೆಡಿ' ಯಾವ ರೀತಿ ಆರ್ಭಟಿಸ್ತಾನೆ ಅನ್ನೋದನ್ನ ಕಾದು ನೋಡಬೇಕಿದೆ.

Latest News