ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಕೆಡಿ: ದ ಡೆವಿಲ್’ ಈಗ ರಾಜ್ಯಾದ್ಯಂತ ಬಾಕ್ಸ್ ಆಫೀಸ್ ಧೂಳಿಪಟ ಮಾಡುತ್ತಿದೆ. ಸಿನಿಮಾ ರಿಲೀಸ್ ಆದ ದಿನದಿಂದಲೇ ಗಾಂಧಿನಗರದಿಂದ ಹಿಡಿದು ಹಳ್ಳಿ-ಹಳ್ಳಿಗಳವರೆಗೆ ಕೆಡಿ ಕ್ರೇಜ್ ಮನೆ ಮಾಡಿದೆ. ಬರೀ ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕ ಈಗ ಧ್ರುವ ಸರ್ಜಾ ಅವರ ಮಾಸ್ ಅವತಾರಕ್ಕೆ ಫಿದಾ ಆಗಿದೆ.
ಮದ್ದೂರಿನಿಂದ ಮೈಸೂರುವರೆಗೆ ಹೌಸ್‌ಫುಲ್ ಬೋರ್ಡ್
ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ ಹವಾ ಹೇಗಿದೆ ಅಂದ್ರೆ, ಮದ್ದೂರು, ಮಂಡ್ಯ, ಮೈಸೂರು ಸೇರಿದಂತೆ ಗ್ರಾಮೀಣ ಭಾಗದ ಪ್ರತಿಯೊಂದು ಚಿತ್ರಮಂದಿರಗಳ ಮುಂದೆ ‘ಹೌಸ್‌ಫುಲ್’ ಬೋರ್ಡ್‌ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸೀಟಿ ಹೊಡೆಯುವವರ ಮತ್ತು ಡ್ಯಾನ್ಸ್ ಮಾಡುವವರ ಸಂಖ್ಯೆ ಕಡಿಮೆಯಿಲ್ಲ. ಬಿ ಮತ್ತು ಸಿ ಸೆಂಟರ್‌ಗಳಲ್ಲಂತೂ ಸಿನಿಮಾ ನೋಡಲು ಜನ ಮುಗಿಬೀಳುತ್ತಿದ್ದು, ಥಿಯೇಟರ್‌ಗಳು ಅಕ್ಷರಶಃ ಜಾತ್ರೆಯಂತೆ ಕಂಗೊಳಿಸುತ್ತಿವೆ.
ಎರಡನೇ 'ಸಕ್ಸಸ್ ಟೂರ್' ಶುರು ಮಾಡಿದ ದ ಡೆವಿಲ್
ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆದ ವಾರದ ನಂತರ ತಂಡದವರು ಪ್ರವಾಸ ಮಾಡುತ್ತಾರೆ. ಆದರೆ 'ಕೆಡಿ' ಚಿತ್ರಕ್ಕೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ನೋಡಿ, ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಅವರು ಎರಡನೇ ದಿನವೇ ‘ಸಕ್ಸಸ್ ಟೂರ್’ ಆರಂಭಿಸಿದ್ದಾರೆ. ತಂಡದವರು ವಿವಿಧ ಜಿಲ್ಲೆಗಳ ಥಿಯೇಟರ್‌ಗಳಿಗೆ ಭೇಟಿ ನೀಡುತ್ತಿದ್ದು, ಹೋದಲ್ಲೆಲ್ಲಾ ಅಭಿಮಾನಿಗಳು ಹೂವಿನ ಮಳೆ ಸುರಿಸಿ, ಅದ್ದೂರಿಯಾಗಿ ಸ್ವಾಗತ ಕೋರುತ್ತಿದ್ದಾರೆ. ಧ್ರುವ ಸರ್ಜಾ ಅವರನ್ನು ಹತ್ತಿರದಿಂದ ನೋಡಲು ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ.
DAY 2 of the #KDTheDevil Success Tour 🔥#BlockbusterKDTheDevil running successfully in cinemas near you🎬
— KVN Productions (@KvnProductions) May 10, 2026
Book your tickets now!
Book now: https://t.co/eyfnbt3evs
Book now: https://t.co/7JZywkQE5w#KD #Dhruvasarja #Prems #KichasudeepInKDTheDevil #BlockbusterKDTheDevil… pic.twitter.com/XqsCwhGkeV
ಮಾಸ್ ಸೀನ್‌ಗಳಿಗೆ ಅಭಿಮಾನಿಗಳ ಘರ್ಜನೆ!
ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಎಂಟ್ರಿ ಸೀನ್, ಆ ಖಡಕ್ ಡೈಲಾಗ್ಸ್ ಮತ್ತು ಆಕ್ಷನ್ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಥಿಯೇಟರ್ ಒಳಗೆ ಕೇಕೆ ಹಾಕುತ್ತಿದ್ದಾರೆ. ಪ್ರೇಮ್ ಅವರ ಮೇಕಿಂಗ್ ಮತ್ತು ಧ್ರುವ ಅವರ ಮ್ಯಾನರಿಸಂ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. "ದ ಡೆವಿಲ್ ಈಸ್ ಬ್ಯಾಕ್" ಎಂದು ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಿನಿಮಾದ ಕ್ಲಿಪ್‌ಗಳು ಸಖತ್ ವೈರಲ್ ಆಗುತ್ತಿವೆ.
ಸಿನಿಮಾ ಪಂಡಿತರ ಪ್ರಕಾರ 'ಕೆಡಿ' ಈ ವರ್ಷದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗುವುದು ಗ್ಯಾರಂಟಿ. ಮೊದಲ ವಾರವೇ ಕೋಟಿ ಕೋಟಿ ಹಣ ಬಾಚುತ್ತಿರುವ ಈ ಸಿನಿಮಾ, ಮುಂದಿನ ದಿನಗಳಲ್ಲಿ ಇನ್ನೆಷ್ಟು ದಾಖಲೆಗಳನ್ನು ಪುಡಿಪುಡಿ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಧ್ರುವ ಸರ್ಜಾ ಅವರ 'ಕೆಡಿ' ಸಿನಿಮಾ ಕನ್ನಡಿಗರ ಮನಗೆದ್ದಿದೆ. ನೀವಿನ್ನೂ ಸಿನಿಮಾ ನೋಡಿಲ್ಲ ಅಂದ್ರೆ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಬೇಗ ಭೇಟಿ ಕೊಡಿ, ಯಾಕಂದ್ರೆ ಟಿಕೆಟ್ ಸಿಗೋದು ಸ್ವಲ್ಪ ಕಷ್ಟ ಇದೆ ಗುರು.