ನರ್ತಕಿ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಸ್ಟಾರ್‌ಗಳು - ಕೆಡಿ ಸಿನಿಮಾ ನೋಡಿದ ಪ್ರೇಕ್ಷಕರು ರೆಸ್ಪಾನ್ಸ್ ಹೇಗಿತ್ತು ಗೊತ್ತಾ!!

ಬೆಂಗಳೂರಿನ ಕೆ.ಜಿ. ರಸ್ತೆಯ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ಶುರುವಾಗಿದೆ. ಅದಕ್ಕೆ ಕಾರಣ ಮತ್ಯಾರು ಅಲ್ಲ, ನಮ್ಮ 'ಮಾರ್ಟಿನ್' ಬೆನ್ನಲ್ಲೇ ಮಾಸ್ ಅವತಾರದಲ್ಲಿ ಬಂದಿರೋ ಧ್ರುವ ಸರ್ಜಾ ಅವರ 'ಕೆಡಿ' ಸಿನಿಮಾ. ಬೆಂಗಳೂರಿನ ಪ್ರಖ್ಯಾತ ನರ್ತಕಿ ಥಿಯೇಟರ್‌ನಲ್ಲಿ ಕೆಡಿ ಚಿತ್ರತಂಡ ಮಾಡಿರೋ ಹಂಗಾಮಾ ಅಷ್ಟಿಷ್ಟಲ್ಲ.

ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ ಧ್ರುವ | Photo Credit: KvnProductions
ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ ಧ್ರುವ | Photo Credit: KvnProductions

ಸಿನಿಮಾ ರಿಲೀಸ್ ಆದ ಸಂಭ್ರಮದಲ್ಲಿ ಚಿತ್ರದ ಪ್ರಮುಖ ಆಕರ್ಷಣೆಗಳಾದ ರಾಣಾ, ಕೊರಿಯೋಗ್ರಾಫರ್ ರಾಹುಲ್ ಮಾಸ್ಟರ್ ಮತ್ತು ಇಡೀ ಕೆಡಿ ಚಿತ್ರತಂಡ ನರ್ತಕಿ ಥಿಯೇಟರ್‌ಗೆ ಭೇಟಿ ನೀಡಿದ್ದರು. ಸ್ಟಾರ್‌ಗಳು ಬಾಲ್ಕನಿಯಲ್ಲಿ ಈ ಚಿತ್ರ ತಂಡ ಅಭಿಮಾನಿಗಳ ಜೊತೆ ಕುಳಿತು ಶಿಳ್ಳೆ-ಚಪ್ಪಾಳೆಗಳ ಮಧ್ಯೆ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಜೊತೆ ಬೆರೆತು ಸಿನಿಮಾ ನೋಡಿದ ಆ ಕ್ಷಣಗಳು ನಿಜಕ್ಕೂ ರೋಮಾಂಚನಕಾರಿಯಾಗಿದ್ದವು.

ಆಕ್ಷನ್ ಪ್ರಿನ್ಸ್ ಇನ್ಮೇಲೆ ಆಕ್ಷನ್ ಟೈಗರ್!

ಮಾರ್ನಿಂಗ್ ಶೋ ಮುಗಿಸಿಕೊಂಡು ಹೊರಬಂದ ಅಭಿಮಾನಿಗಳ ಮುಖದಲ್ಲಿ ಖುಷಿ ಇತ್ತು. ಧ್ರುವ ಸರ್ಜಾ ಅವರನ್ನ ಸ್ಕ್ರೀನ್ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಅವರ ಆಕ್ಟಿಂಗ್ ಮತ್ತು ಎನರ್ಜಿ ಸಖತ್ ಇಷ್ಟವಾಗಿದೆ.

ಸಿನಿಮಾ ನೋಡಿ ಹೊರಬಂದ ಅಭಿಮಾನಿಯೊಬ್ಬರು ಕ್ಯಾಮೆರಾ ಮುಂದೆ ಬಂದು ಫುಲ್ ಜೋಶ್‌ನಲ್ಲಿ ಹೇಳಿದ್ದು ಹೀಗೆ

ಗುರು, ಇದರಲ್ಲಿರೋ ಆಕ್ಷನ್ ಸೀನ್ಸ್ ನೋಡಿದ್ರೆ ಮೈ ರೋಮಾಂಚನ ಆಗುತ್ತೆ. ಧ್ರುವಣ್ಣ ಫೈಟ್ ಮಾಡ್ತಿದ್ರೆ ಎದುರಾಳಿಗಳು ಹಾರಾಡೋ ರೀತಿ ನೋಡೋಕೆ ಎರಡು ಕಣ್ಣು ಸಾಲದು. ಆಕ್ಷನ್ ಪ್ರಿನ್ಸ್ ಅನ್ನೋದು ಹಳೇದು, ಈಗಿರೋದು ಕೇವಲ 'ಆಕ್ಷನ್ ಟೈಗರ್' ಅಬ್ಬರ ಮಾತ್ರ.

ಥಿಯೇಟರ್ ಮುಂದೆ ಭರ್ಜರಿ ಕ್ರೇಜ್

ಧ್ರುವ ಸರ್ಜಾ ಅವರನ್ನ ಒಮ್ಮೆ ನೋಡಬೇಕು, ಅವರ ಜೊತೆ ಒಂದೆರಡು ಮಾತು ಆಡಬೇಕು ಅಂತ ಅಭಿಮಾನಿಗಳು ಕಿಲೋಮೀಟರ್ ದೂರದಿಂದ ಬಂದು ಕಾಯುತ್ತಿದ್ದರು. ಥಿಯೇಟರ್ ಆವರಣದಲ್ಲಿ ಧ್ರುವ ಪರವಾಗಿ ಘೋಷಣೆಗಳು ಮೊಳಗುತ್ತಿದ್ದವು. ಫೈಟ್ ಸೀನ್‌ಗಳು ಬಂದಾಗಲಂತೂ ಥಿಯೇಟರ್ ಒಳಗೆ ಶಿಳ್ಳೆ, ಚಪ್ಪಾಳೆ ಜೋರಾಗಿದ್ದವು. ಧ್ರುವ ಸರ್ಜಾ ಅವರ ಬಾಡಿ ಲಾಂಗ್ವೇಜ್ ಮತ್ತು ಆ ರೌದ್ರಾವತಾರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದೆ.

ಸಿನಿಮಾದ ಬಗ್ಗೆ ಕೇಳಿಬಂದ ಕೆಲವು ಹೈಲೈಟ್ಸ್

ಧ್ರುವ ಸರ್ಜಾ ಪರ್ಫಾರ್ಮೆನ್ಸ್ - ಧ್ರುವ ಅವರ ನಟನೆ ಹಿಂದೆಂದಿಗಿಂತಲೂ ಪವರ್‌ಫುಲ್ ಆಗಿದೆ.

ಮೇಕಿಂಗ್ - ಸಿನಿಮಾ ಟೆಕ್ನಿಕಲ್ ಆಗಿ ಸಖತ್ ರಿಚ್ ಆಗಿದೆ.

ಸಂಗೀತ ಮತ್ತು ನೃತ್ಯ - ರಾಹುಲ್ ಮಾಸ್ಟರ್ ಹಾಗೂ ಮೋಹನ್ ಮಾಸ್ಟರ್ ಅವರ ನೃತ್ಯ ನಿರ್ದೇಶನಕ್ಕೆ ಪ್ರೇಕ್ಷಕರು ಸ್ಟೆಪ್ ಹಾಕುತ್ತಿದ್ದಾರೆ.

'ಕೆಡಿ' ಚಿತ್ರತಂಡಕ್ಕೆ ಅಭಿಮಾನಿಗಳು ಭರ್ಜರಿ ರೆಸ್ಪಾನ್ಸ್ ಕೊಟ್ಟಿದ್ದಾರೆ. ಮೊದಲ ದಿನವೇ ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಬಂದಿರೋದು ತಂಡಕ್ಕೆ ದೊಡ್ಡ ಶಕ್ತಿ ತುಂಬಿದೆ. ನೀವಿನ್ನು ಸಿನಿಮಾ ನೋಡಿಲ್ಲ ಅಂದ್ರೆ, ಧ್ರುವ ಸರ್ಜಾ ಅವರ ಈ 'ಟೈಗರ್' ಅವತಾರವನ್ನ ಒಮ್ಮೆ ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ!

Latest News