May 9, 2026 Languages : ಕನ್ನಡ | English

‘ಸರ್ಸೆ ಸರ್ಸೆ’ ಹಾಡಿನ ಕಿರಿಕ್: ಮಹಿಳಾ ಆಯೋಗದ ಮುಂದೆ ನೋರಾ ಫತೇಹಿ ಕ್ಷಮೆಯಾಚನೆ - ಅಸಲಿಗೆ ಹೇಳಿದ್ದೆ ಬೇರೆ!!

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸುದ್ದಿಯಲ್ಲಿದೆ. ಆದರೆ ಇತ್ತೀಚೆಗೆ ಈ ಚಿತ್ರದ ‘ಸರ್ಸೆ ಸರ್ಸೆ’ ಹಾಡು ಬಿಡುಗಡೆಯಾದ ಮೇಲೆ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಈ ಹಾಡಿನಲ್ಲಿ ನೋರಾ ಫತೇಹಿ ಅವರ ನೃತ್ಯ ಮತ್ತು ಉಡುಗೆ-ತೊಡುಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈಗ ಈ ವಿವಾದಕ್ಕೆ ಸಂಬಂಧಿಸಿದಂತೆ ನೋರಾ ಫತೇಹಿ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ.

‘ಕೆಡಿ’ ಸಿನಿಮಾದ ಸರ್ಸೆ ಸರ್ಸೆ ಹಾಡು ವಿವಾದ;
‘ಕೆಡಿ’ ಸಿನಿಮಾದ ಸರ್ಸೆ ಸರ್ಸೆ ಹಾಡು ವಿವಾದ;

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೆಡಿ' (KD) ಈಗ ಸುದ್ದಿಯಲ್ಲಿರೋದು ಧ್ರುವ ಸರ್ಜಾ ಅವರ ಆಕ್ಷನ್‌ನಿಂದಲ್ಲ, ಬದಲಾಗಿ ಐಟಂ ಸಾಂಗ್‌ನ ವಿವಾದದಿಂದ! ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಹೆಜ್ಜೆ ಹಾಕಿರೋ 'ಸರ್ಸೆ ಸರ್ಸೆ' ಹಾಡು ಈಗ ರಾಷ್ಟ್ರೀಯ ಮಹಿಳಾ ಆಯೋಗದ ಮೆಟ್ಟಿಲೇರಿದೆ. ಅಷ್ಟೇ ಅಲ್ಲ, ನೋರಾ ಅವರು ಖುದ್ದಾಗಿ ಹಾಜರಾಗಿ ಕ್ಷಮೆ ಕೂಡ ಕೇಳಿದ್ದಾರೆ!

ಏನಿದು ಸೆರಗು ವಿವಾದ?

ಜೋಗಿ ಪ್ರೇಮ್ ಅಂದ್ರೆ ಅಲ್ಲಿ ಗ್ಲಾಮರ್ ಅಬ್ಬರ ಇದ್ದೇ ಇರುತ್ತೆ. ಆದರೆ ಈ 'ಸರ್ಸೆ ಸರ್ಸೆ' ಹಾಡಿನಲ್ಲಿ ನೋರಾ ಅವರ ಡ್ಯಾನ್ಸ್ ಸ್ಟೆಪ್ಸ್‌ಗಳು ಸ್ವಲ್ಪ ಅತಿರೇಕವಾಯಿತು ಎಂಬುದು ನೆಟ್ಟಿಗರ ದೂರು. ಲೈಂಗಿಕ ಪ್ರಚೋದಕವಾಗಿ ನೃತ್ಯ ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಅಬ್ಬರಿಸಿದ್ದರು. ಜನಸಾಮಾನ್ಯರ ಆಕ್ರೋಶ ನೋಡಿ ಮಹಿಳಾ ಆಯೋಗವೇ ಸುಮ್ಮನಿರದೆ ಸ್ವಯಂಪ್ರೇರಿತ ಕೇಸ್ ದಾಖಲಿಸಿತ್ತು.

"ನನ್ನಿಂದ ತಪ್ಪಾಗಿದೆ" ಎಂದ ನೋರಾ

ಈ ಹಿಂದೆ ಆಯೋಗ ನೀಡಿದ್ದ ನೋಟಿಸ್‌ಗೆ ಸರಿಯಾಗಿ ಸ್ಪಂದಿಸಿದ ನೋರಾ ಫತೇಹಿ, ದೆಹಲಿಯಲ್ಲಿ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದರು. ಅಲ್ಲಿ ಅವರು ಹೇಳಿದ್ದೇನು ಗೊತ್ತಾ?

"ನಾನು ಒಬ್ಬ ಕಲಾವಿದೆ, ನಿರ್ದೇಶಕರು ಹೇಳಿದಂತೆ ನಟಿಸುವುದು ನನ್ನ ಕೆಲಸ. ಆದರೆ ಒಬ್ಬ ಕಲಾವಿದೆಯಾಗಿ ನನಗೂ ಸಮಾಜದ ಬಗ್ಗೆ ಜವಾಬ್ದಾರಿ ಇರಬೇಕಿತ್ತು. ಈ ಹಾಡಿನ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ." ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇಂತಹ 'ಬೋಲ್ಡ್' ಸಿನಿಮಾಗಳಲ್ಲಿ ನಟಿಸುವಾಗ ಸಾಮಾಜಿಕ ಕಾಳಜಿಯನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ರಿಯಾಕ್ಷನ್ ಹೇಗಿದೆ?

ಒಂದು ವರ್ಗದ ಮಾತು: "ನೋರಾ ಅವರು ಕೇವಲ ಕಲಾವಿದೆ, ಅವರಿಗೆ ಯಾಕೆ ನೋಟಿಸ್? ನಿರ್ದೇಶಕರನ್ನು ಕೇಳಬೇಕು" ಎನ್ನುತ್ತಿದ್ದಾರೆ.

ಇನ್ನೊಂದು ವರ್ಗದ ಮಾತು: "ಯಾವುದೇ ಹಾಡು ಕುಟುಂಬದ ಜೊತೆ ಕುಳಿತು ನೋಡುವಂತಿರಬೇಕು, ಇಂತಹ ಅಶ್ಲೀಲತೆಗೆ ಬ್ರೇಕ್ ಬೇಕೇ ಬೇಕು" ಎಂದು ಆಯೋಗದ ಕ್ರಮವನ್ನು ಸ್ವಾಗತಿಸಿದ್ದಾರೆ.

ಸಿನಿಮಾ ಅಂದಮೇಲೆ ಮನರಂಜನೆ ಇರಬೇಕು ನಿಜ, ಆದರೆ ಅದು ಸಭ್ಯತೆಯ ಮಿತಿಯಲ್ಲಿರಲಿ ಎಂಬುದು ಸಾರ್ವಜನಿಕರ ಒತ್ತಾಯ. ಕೆಡಿ ಚಿತ್ರತಂಡಕ್ಕೆ ಈಗ ಈ ವಿವಾದ ದೊಡ್ಡ ಪಾಠವಾಗಿದೆ. ಇನ್ಮುಂದೆ ಸಿನಿಮಾದಲ್ಲಿ ಬರೀ 'ಸೆರಗು' ಮಾತ್ರವಲ್ಲ, 'ಸೆನ್ಸಿಬಿಲಿಟಿ' ಕೂಡ ಇರುತ್ತೆ ಅಂತ ಭಾವಿಸೋಣ!  

Latest News