ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಟ ಧನುಷ್ ಮತ್ತು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಅವರ ವಿವಾಹದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳು ಕೊನೆಗೂ ಸುಳ್ಳೆಂದು ಇದೀಗ ಸ್ಪಷ್ಟಗೊಂಡಿವೆ. ಹೌದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಈ ಸುದ್ದಿಯನ್ನು ಧನುಷ್ ಅವರ ಆಪ್ತರು “ನಕಲಿ ಮತ್ತು ಆಧಾರರಹಿತ” ಎಂದು ಖಂಡಿಸಿದ್ದಾರೆ ಎನ್ನಲಾಗುತ್ತಿದೆ. ಈ ವಾರದ ಆರಂಭದಲ್ಲಿ ಕೆಲವು ಮಾಧ್ಯಮಗಳು “ಧನುಷ್ ಮತ್ತು ಮೃಣಾಲ್ ಫೆಬ್ರವರಿಯಲ್ಲಿ ಆತ್ಮೀಯ, ಖಾಸಗಿ ವಿವಾಹಕ್ಕೆ ಒಪ್ಪಿಕೊಂಡಿದ್ದಾರೆ” ಎಂಬ ವರದಿಗಳನ್ನು ಪ್ರಕಟಿಸಿದ್ದವು.
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿತು. ರೆಡ್ಡಿಟ್ ಮತ್ತು ಎಕ್ಸ್‌ನಲ್ಲಿ ಅಭಿಮಾನಿಗಳು ಅವರ ಇತ್ತೀಚಿನ ಸಾರ್ವಜನಿಕ ಹಾಜರಾತಿಗಳಲ್ಲಿ ಸುಳಿವುಗಳನ್ನು ಹುಡುಕಲು ಆರಂಭಿಸಿದರು. ವದಂತಿ ವ್ಯಾಪಕವಾಗಿ ಹರಡಿದ ಕಾರಣ, ಕೆಲವು ಸಾಮಾಜಿಕ ಮಾಧ್ಯಮದ ನ್ಯೂಸ್ ಚಾನೆಲ್ ಸೇರಿದಂತೆ ಹಲವಾರು ಮಾಧ್ಯಮಗಳು ಧನುಷ್ ಅವರ ಆಪ್ತರನ್ನು ಸಂಪರ್ಕಿಸಿದವು. ನಟ ಧನುಷ್ ಅವರ ಆತ್ಮೀಯ ಸ್ನೇಹಿತರೊಬ್ಬರು, “ಇದು ಸಂಪೂರ್ಣವಾಗಿ ನಕಲಿ ಮತ್ತು ಆಧಾರರಹಿತ. ದಯವಿಟ್ಟು ಇದಕ್ಕೆ ಬಲಿಯಾಗಬೇಡಿ” ಎಂದು ಸ್ಪಷ್ಟಪಡಿಸಿದರು. ಮೃಣಾಲ್ ಠಾಕೂರ್ ಅವರ ವೃತ್ತಿಜೀವನ ತುಂಬಾ ಬ್ಯುಸಿಯಾಗಿದ್ದು, ಫೆಬ್ರವರಿ ಮತ್ತು ಮಾರ್ಚ್ 2026ರಲ್ಲಿ *ದೋ ದಿವಾನೆ ಸೆಹರ್ ಮೇ* ಸೇರಿದಂತೆ ಹಲವು ದೊಡ್ಡ ಚಿತ್ರಗಳ ಬಿಡುಗಡೆಯನ್ನು ನಿಗದಿಪಡಿಸಲಾಗಿದೆ.
ಹೀಗಾಗಿ ಈ ಸಮಯದಲ್ಲಿ ಮದುವೆ ದಿನಾಂಕ ನಿಗದಿಯಾಗುವುದು ಅಸಾಧ್ಯವೆಂದು ಅಭಿಮಾನಿಗಳೂ ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ವದಂತಿ ಹರಿದಾಡುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಕೆಲವರು “ಇದು ನಿಜವಾಗಿದ್ದರೆ ದೊಡ್ಡ ಅಚ್ಚರಿ” ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು “ಇದು ಕೇವಲ ಪ್ರಚಾರದ ಭಾಗ” ಎಂದು ವಾದಿಸಿದರು. ಆದರೆ ಈಗ ಅಧಿಕೃತವಾಗಿ ಸುಳ್ಳು ಎಂದು ದೃಢಪಟ್ಟಿರುವುದರಿಂದ ಅಭಿಮಾನಿಗಳು ಧನುಷ್ ಅವರ ಮುಂದಿನ ಚಿತ್ರಗಳತ್ತ ಹಾಗೂ ಮೃಣಾಲ್ ಅವರ ಬಾಲಿವುಡ್ ಯೋಜನೆಗಳತ್ತ ಗಮನ ಹರಿಸುತ್ತಿದ್ದಾರೆ.
ಒಟ್ಟಿನಲ್ಲಿ ಹೇಳ್ಬೇಕು ಅಂದರೆ ನಟ ಧನುಷ್ ಮತ್ತು ಮೃಣಾಲ್ ಠಾಕೂರ್ ವಿವಾಹದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳು ಕೇವಲ ಊಹಾಪೋಹಗಳಾಗಿದ್ದು, ನಟರಿಬ್ಬರ ವೃತ್ತಿಜೀವನ ಈಗ ತುಂಬಾ ಬ್ಯುಸಿಯಾಗಿರುವುದರಿಂದ ಮದುವೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಭಿಮಾನಿಗಳು ಈ ವದಂತಿಗಳಿಗೆ ಬಲಿಯಾಗದೆ, ಅವರ ಕಲಾತ್ಮಕ ಸಾಧನೆಗಳತ್ತ ಗಮನ ಹರಿಸುವುದು ಸೂಕ್ತ.