ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ತನ್ನ ಅಂತಿಮ ಹಂತ ತಲುಪಿದೆ. ಹೌದು ಸ್ಪರ್ಧಿಗಳ ಪೈಪೋಟಿ ತೀವ್ರವಾಗಿತ್ತು. ಈ ಪೈಪೋಟಿಯಲ್ಲಿ ಸ್ಪರ್ಧಿ ಧನುಷ್ ಅವರು ತನ್ನದೇ ಆದ ಶೈಲಿಯಲ್ಲಿ ಗಮನ ಸೆಳೆದಿದ್ದರು. ಟಾಸ್ಕ್‌ಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆ, ಧನುಷ್ ಅವರು ತಮ್ಮ ವ್ಯಕ್ತಿತ್ವದ ಮೂಲಕ ಮನರಂಜನೆ ನೀಡುವ ಪ್ರಯತ್ನ ಮಾಡಿದರು. “ಟಾಸ್ಕ್ ವಿಷಯ ಅಂತ ಬಂದರೆ ಧನುಷ್ ಅವರೇ ಕಿಂಗ್” ಎನ್ನುವಂತೆ ಆಟವಾಡಿ ಗುರುತಿಸಿಕೊಂಡಿದ್ದರು.
ಧನುಷ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದಾಗ, ಅವರು ಹೆಚ್ಚು ಚರ್ಚೆಗೆ ಒಳಪಡುವ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅವರ ನೇರ ಮಾತು, ಧೈರ್ಯ ಮತ್ತು ನಿರ್ಧಾರಾತ್ಮಕತೆ ವೀಕ್ಷಕರ ಗಮನ ಸೆಳೆಯಿತು. ಕೆಲವೊಮ್ಮೆ ಟಾಸ್ಕ್‌ಗಳಲ್ಲಿ ತೊಡಗಿಸಿಕೊಳ್ಳಲಿಕ್ಕೆ ಅವಕಾಶ ಸಿಗದ ವೇಳೆ ಧನುಷ್, ತಮ್ಮ ಸ್ನೇಹ, ನಿಷ್ಠೆ ಮತ್ತು ಭಾವನಾತ್ಮಕ ಸಂಬಂಧಗಳ ಮೂಲಕ ಮನಸ್ಸು ಗೆಲ್ಲಲು ಪ್ರಯತ್ನಿಸಿದರು. ಆದರೆ, ಫಿನಾಲೆ ಹಂತದಲ್ಲಿ ಮತದಾನದ ಆಧಾರದ ಮೇಲೆ ಅವರು ಆರನೇ ಸ್ಥಾನದಲ್ಲಿ ಹೊರಬಿದ್ದಿದ್ದಾರೆ ಎಂದು ಕೇಳಿ ಬಂದಿದೆ. ಆದ್ರೆ ಇದು ಎಷ್ಟು ಸತ್ಯವೋ ಗೊತ್ತಿಲ್ಲ. ಎಪಿಸೋಡ್ ಮುಗಿಯುವವರೆಗೂ ಗೊತ್ತಾಗುವುದಿಲ್ಲ. ಇದು ಅವರ ಅಭಿಮಾನಿಗಳಿಗೆ ನಿರಾಸೆಯ ಸಂಗತಿಯಾದರೂ, ಧನುಷ್ ಬಿಗ್ ಬಾಸ್ ಪಯಣವು ಸ್ಮರಣೀಯವಾಗಿದ್ದು, ಅವರ ವ್ಯಕ್ತಿತ್ವವನ್ನು ಕನ್ನಡದ ಕಿರುತೆರೆ ಪ್ರೇಕ್ಷಕರು ಗುರುತಿಸಿದ್ದಾರೆ.
ಅವರ ಪಯಣದಲ್ಲಿ ಹಲವಾರು ಹಂತಗಳು, ಗೆಲುವು-ತೊಡಕುಗಳು, ಸ್ನೇಹ ಮತ್ತು ಭಿನ್ನಾಭಿಪ್ರಾಯಗಳೂ ಇದ್ದವು. ಧನುಷ್ ತಮ್ಮದೇ ಆದ ಶೈಲಿಯಲ್ಲಿ ಬಿಗ್ ಬಾಸ್ ಮನೆಯೊಳಗೆ ಬದುಕಿದ ರೀತಿಯು, ಮುಂದಿನ ದಿನಗಳಲ್ಲಿ ಅವರ ಅಭಿಮಾನಿ ಬಳಗವನ್ನು ಇನ್ನಷ್ಟು ವಿಸ್ತರಿಸಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಒಂದು ವೇಳೆ ಧನುಷ್ ಆರನೇ ಸ್ಥಾನ ಪಡೆದರೆ, ಇವರು ಸಹ ಮನಸ್ಸು ಗೆದ್ದ ಸ್ಪರ್ಧಿಯಾಗಿ ಹೊರಹೊಮ್ಮಲಿದ್ದಾರೆ. ಧನುಷ್ ಅವರ ಪಯಣವು ಬಿಗ್ ಬಾಸ್ ಶೋಗೆ ವಿಭಿನ್ನ ಆಯಾಮ ನೀಡಿದ್ದು, ಕನ್ನಡ ರಿಯಾಲಿಟಿ ಶೋಗಳ ಇತಿಹಾಸದಲ್ಲಿ ಒಂದು ವಿಶಿಷ್ಟ ಅಧ್ಯಾಯವಾಗಿ ಉಳಿಯಲಿದೆ.