Jan 25, 2026 Languages : ಕನ್ನಡ | English

ಬಿಗ್ ಬಾಸ್ ಫಿನಾಲೆಯಲ್ಲಿ ಎಡವಿದ ಕಾವ್ಯ - 4 ನೇ ಸ್ಥಾನದ ಬಿಗ್ಬಾಸ್ ಫಲಿತಾಂಶ ಔಟ್!!

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಕಾವ್ಯ ಅವರು ತಮ್ಮ ನೈಜ ವ್ಯಕ್ತಿತ್ವ, ಶ್ರದ್ಧೆ ಮತ್ತು ಶಾಂತ ಸ್ವಭಾವದಿಂದ ವೀಕ್ಷಕರ ಮನ ಗೆದ್ದ ಸ್ಪರ್ಧಿಯಾಗಿದ್ದಾರೆ. ಹೌದು ಆರಂಭದಲ್ಲಿ ಹೆಚ್ಚು ಚರ್ಚೆಗೆ ಒಳಗಾಗದ ಕಾವ್ಯ ಅವರ ದಿನಗಳು ಸಾಗುತ್ತಿದ್ದಂತೆ ತಮ್ಮ ಶೈಲಿಯಲ್ಲಿ ಬದಲಾಗುತ್ತಾ, ಮನೆಯಲ್ಲಿ ಪ್ರಭಾವ ಬೀರುವ ವ್ಯಕ್ತಿಯಾಗಿ ಹೊರಹೊಮ್ಮಿದರು.ಹಾಗೇನೇ ಕಾವ್ಯ ಅವರ ಆಟದ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ಇವರು ಇಲ್ಲಿಯವರೆಗೆ ಬಂದಿದ್ದು ಗಿಲ್ಲಿಯಿಂದ ಎಂದು ಹೇಳುತ್ತಿದ್ದರು. ಇವರ ಆಟ ಬಿಗ್ಬಾಸ್ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗಿರಲಿಲ್ಲ ಆದ್ರೂ ಇಲ್ಲಿಯವರೆಗೆ ಬಂದಿದ್ದು ಮಾತ್ರ ಗ್ರೆಟ್ ಎನ್ನುತ್ತಾರೆ ಇನ್ನು ಕೆಲವರು. 

ಬಿಗ್ ಬಾಸ್ 12: ನಾಲ್ಕನೇ ಸ್ಥಾನದಲ್ಲಿ ಮನ ಗೆದ್ದ ಕಾವ್ಯ
ಬಿಗ್ ಬಾಸ್ 12: ನಾಲ್ಕನೇ ಸ್ಥಾನದಲ್ಲಿ ಮನ ಗೆದ್ದ ಕಾವ್ಯ

ಕಾವ್ಯ ಅವರು ಟಾಸ್ಕ್‌ಗಳಲ್ಲಿ ತೋರಿದ ತಾಳ್ಮೆ, ಸಮತೋಲನ ಮತ್ತು ಶ್ರದ್ಧೆ, ಮನೆಯವರೊಂದಿಗೆ ಬೆಸೆದ ಆತ್ಮೀಯತೆ, ಮತ್ತು ತಮ್ಮ ನಿಗದಿತ ನಿಲುವುಗಳು ವೀಕ್ಷಕರ ಗಮನ ಸೆಳೆಯುವಲ್ಲಿ ಕೆಲವುಗಳು ಯಶಸ್ವಿಯಾಗಿದ್ದವು ಎನ್ನಬಹುದು. ಹೌದು ಕಾವ್ಯ ಅವರು ಯಾವಾಗಲೂ ಶಾಂತವಾಗಿ, ಆದರೆ ದೃಢವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಈ ಗುಣವೇ ಅವರನ್ನು ಬಿಗ್ ಬಾಸ್ ಮನೆಯೊಳಗಿನ ಬದ್ಧತೆಯ ಪ್ರತೀಕವನ್ನಾಗಿ ಮಾಡಿತು. ಕಾವ್ಯ ಅವರು ತಮ್ಮ ಸಂವೇದನೆಗಳನ್ನು ತೋರಿದ ರೀತಿಯು, ಸ್ನೇಹಿತರೊಂದಿಗೆ ಬೆಸೆದ ಸಂಬಂಧಗಳು ಮತ್ತು ಮನೆಯಲ್ಲಿ ತೋರಿದ ನೈಜತೆಯು ವೀಕ್ಷಕರಿಗೆ ಇಷ್ಟ ಆಗಿದ್ದು ನಿಜ.

ಕಾವ್ಯ ಬಿಗ್ ಬಾಸ್ ಪಯಣವು ಕೇವಲ ಆಟವಲ್ಲ, ಅದು ಭಾವನೆಗಳ, ಆತ್ಮೀಯತೆಯ ಮತ್ತು ನೈಜತೆಯ ಪ್ರತಿಬಿಂಬ. ಅಂತಿಮ ಹಂತದಲ್ಲಿ ಕಾವ್ಯ ಅವರು ನಾಲ್ಕನೇ ಸ್ಥಾನದಲ್ಲಿ ಹೊರ ಬಿದ್ದಿದ್ದಾರೆ ಎಂದು ಕೇಳಿ ಬಂದಿದೆ. ಆದ್ರೆ ಇದು ಇಷ್ಟು ಸತ್ಯ ಎಂದು ಯಾವ ವರದಿ ಅಧಿಕೃತವಾಗಿ ಹೊರ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವ್ರು ಈ ಎಲಿಮಿನೇಟ್ ನಿಜ ಎನ್ನುತ್ತಿದ್ದಾರೆ. ಕಾವ್ಯ ಅವರು ಈ ಮೂಲಕ ಮನಸ್ಸು ಗೆದ್ದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಅವರ ಪಯಣವು ಕನ್ನಡದ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ದಿಟ್ಟ ಗುರುತು ಬರೆದಿದ್ದು, ಮುಂದಿನ ದಿನಗಳಲ್ಲಿ ಅವರ ಅಭಿಮಾನಿ ಬಳಗವನ್ನು ಇನ್ನಷ್ಟು ವಿಸ್ತರಿಸಲಿದೆ. ಹೌದು ಕಾವ್ಯ ಅವರು ಬಿಗ್ ಬಾಸ್ ಮನೆಯೊಳಗೆ ತಂದುಕೊಟ್ಟ ಶಾಂತಿ, ನಗು ಮತ್ತು ನಿಷ್ಠೆ, ಈ ಶೋಗೆ ವಿಭಿನ್ನ ಆಯಾಮ ನೀಡಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿ ಹೊರ ಬಂದಿದ್ದಾರೆ ಎಂದು ಹೇಳಬಹುದು. 

Latest News