Mar 17, 2026 Languages : ಕನ್ನಡ | English

ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಹವಾ - ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ!! ಎಷ್ಟು ಗಳಿಸಿದೆ ಗೊತ್ತೇ?

ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದ 'ಧುರಂಧರ್ 2' ಅಬ್ಬರ ಶುರುವಾಗಿದೆ. ಚಿತ್ರಮಂದಿರಗಳಿಗೆ ಬರುವ ಮೊದಲೇ ಈ ಸಿನಿಮಾ ಇತಿಹಾಸದ ಪುಟ ಸೇರುತ್ತಿದೆ. ಅಧಿಕೃತ ಬಿಡುಗಡೆ ಮಾರ್ಚ್ 19ಕ್ಕಿದ್ದರೂ, ಕ್ರೇಜ್ ಹೆಚ್ಚಾದ ಕಾರಣ ಡಿಸೆಂಬರ್ 18ಕ್ಕೇ ವಿಶೇಷ ಶೋಗಳನ್ನು ಹಾಕಲಾಗಿದೆ. ರಣವೀರ್ ಸಿಂಗ್ ಅವರನ್ನು ತೆರೆಯ ಮೇಲೆ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದು, ಅಡ್ವಾನ್ಸ್ ಬುಕ್ಕಿಂಗ್ ಅಕ್ಷರಶಃ ಧೂಳೆಬ್ಬಿಸುತ್ತಿದೆ.

ಅಡ್ವಾನ್ಸ್ ಬುಕ್ಕಿಂಗ್ ದಾಖಲೆ – 15 ಲಕ್ಷ ಟಿಕೆಟ್ ಮಾರಾಟ!!
ಅಡ್ವಾನ್ಸ್ ಬುಕ್ಕಿಂಗ್ ದಾಖಲೆ – 15 ಲಕ್ಷ ಟಿಕೆಟ್ ಮಾರಾಟ!!

ಈ ಚಿತ್ರದಲ್ಲಿ ಕೇವಲ ರಣವೀರ್ ಸಿಂಗ್ ಮಾತ್ರವಲ್ಲದೆ, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಅವರಂತಹ ದಿಗ್ಗಜ ಕಲಾವಿದರು ನಟಿಸಿದ್ದಾರೆ. ಇಷ್ಟು ದೊಡ್ಡ ತಾರಾಬಳಗ ಒಂದೇ ಸಿನಿಮಾದಲ್ಲಿ ಇರುವುದು ಪ್ರೇಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನ ಹಳೆಯ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂದು ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ.

ಈ ಸಿನಿಮಾದ ಒಂದು ವಿಶೇಷತೆ ಎಂದರೆ ಅದರ ಅವಧಿ. ವರದಿಗಳ ಪ್ರಕಾರ ಧುರಂಧರ್ 2 ಸುಮಾರು ನಾಲ್ಕು ಗಂಟೆಗಳಷ್ಟು ಸುದೀರ್ಘವಾಗಿದೆ. ಇಷ್ಟು ಉದ್ದದ ಸಿನಿಮಾವನ್ನ ದಿನಕ್ಕೆ ಹೆಚ್ಚು ಬಾರಿ ಪ್ರದರ್ಶಿಸುವುದು ಚಿತ್ರಮಂದಿರಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ಬೇಡಿಕೆಯನ್ನ ಪೂರೈಸಲು ಮುಂಬೈ, ಪುಣೆ ಮತ್ತು ಅಹಮದಾಬಾದ್‌ನಂತಹ ನಗರಗಳಲ್ಲಿ ದಿನದ 24 ಗಂಟೆಯೂ ಸಿನಿಮಾ ಪ್ರದರ್ಶಿಸಲು ಚಿತ್ರಮಂದಿರಗಳು ಸಜ್ಜಾಗಿವೆ. ಮುಂಬೈನ ಕೆಲವು ಕಡೆಗಳಲ್ಲಿ ಮುಂಜಾನೆ 1:50 ಕ್ಕೂ ಶೋಗಳು ಇರುವುದು ಈ ಸಿನಿಮಾದ ಮೇಲಿರುವ ಹುಚ್ಚು ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಸಿನಿಮಾ ಬಿಡುಗಡೆಗೂ ಮುನ್ನವೇ ಸುಮಾರು 15 ಲಕ್ಷ ಟಿಕೆಟ್‌ಗಳು ಅಡ್ವಾನ್ಸ್ ಬುಕ್ಕಿಂಗ್ ಮೂಲಕ ಮಾರಾಟವಾಗಿವೆ. ಇದು ಚಿತ್ರಕ್ಕೆ ಸಿಕ್ಕ ಭರ್ಜರಿ ಓಪನಿಂಗ್ ಸಂಕೇತವಾಗಿದೆ. ಚಿತ್ರಮಂದಿರಗಳ ಮಾಲೀಕರು ಪ್ರೇಕ್ಷಕರ ಒತ್ತಡಕ್ಕೆ ಮಣಿದು, ಒಂದು ಶೋ ಮುಗಿದ ತಕ್ಷಣ ಮತ್ತೊಂದು ಶೋ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೇವಲ ಪ್ರೀಮಿಯರ್ ಶೋಗಳಿಂದಲೇ ಈ ಸಿನಿಮಾ ಈಗಾಗಲೇ ₹35 ಕೋಟಿ ಗಳಿಸಿದೆ ಎನ್ನಲಾಗುತ್ತಿದ್ದು, ಇದು ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು.

ಈ ಸಿನಿಮಾದ ಅಬ್ಬರ ಎಷ್ಟಿದೆಯೆಂದರೆ, ಮುಂಬೈನ ಮರಾಠಾ ಮಂದಿರದಲ್ಲಿ ಕಳೆದ 30 ವರ್ಷಗಳಿಂದ ಸತತವಾಗಿ ಪ್ರದರ್ಶನಗೊಳ್ಳುತ್ತಿದ್ದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' (DDLJ) ಸಿನಿಮಾದ ಸಮಯವನ್ನೂ ಬದಲಾಯಿಸಲಾಗಿದೆ. 'ಧುರಂಧರ್ 2' ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ವಿಶೇಷ. ಭಾರಿ ಪ್ರಚಾರ ಮತ್ತು ದೊಡ್ಡ ತಾರಾಗಣದೊಂದಿಗೆ ಬರುತ್ತಿರುವ 'ಧುರಂಧರ್ 2' ಸಿನಿಮಾ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗುವುದರಲ್ಲಿ ಸಂಶಯವಿಲ್ಲ. ಈ ಚಿತ್ರವು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಟ್ರೆಂಡ್ ಅನ್ನೇ ಬದಲಿಸಲಿದೆ ಎಂದು ನಿರೀಕ್ಷಿಸಲಾಗಿದೆ. 

Latest News