ಬಾಲಿವುಡ್ ಅಂದ್ರೆ ಅಲ್ಲಿ ಗಾಸಿಪ್‌ಗಳಿಗೆ ಪಂಜವೇ ಇಲ್ಲ. ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2' 500 ಕೋಟಿ ಬಜೆಟ್‌ನಲ್ಲಿ ತಯಾರಾಗಿ ಈಗ ವಿಶ್ವದಾದ್ಯಂತ ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ ಇಷ್ಟು ದೊಡ್ಡ ಹಿಟ್ ಆಗಿದ್ರೂ ಪತ್ನಿ ದೀಪಿಕಾ ಪಡುಕೋಣೆ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಪತಿಯ ಬಗ್ಗೆ ಒಂದು ಪೋಸ್ಟ್ ಕೂಡ ಹಾಕಿಲ್ಲ ಎಂದು ನೆಟ್ಟಿಗರು "ಏನೋ ಸರಿ ಇಲ್ಲ" ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ದೀಪಿಕಾ ಸುಮ್ಮನೆ ಕೂರುವವರಲ್ಲ, ಟೀಕಾಕಾರರ ಬಾಯಿ ಮುಚ್ಚಿಸಲು ಒಂದೇ ಒಂದು ಕಾಮೆಂಟ್ ಮೂಲಕ ಭರ್ಜರಿ ತಿರುಗೇಟು ನೀಡಿದ್ದಾರೆ.
ಸಿನಿಮಾ ಸುದ್ದಿಗಳ ಪೇಜ್ ಒಂದರಲ್ಲಿ ದೀಪಿಕಾ ಅವರ ಈ ಮೌನದ ಬಗ್ಗೆ ಒಂದು ಪೋಲ್ ನಡೆಸಲಾಗಿತ್ತು. ದೀಪಿಕಾ ಅವರು 500 ಕೋಟಿ ಬಜೆಟ್‌ನ ಧುರಂಧರ್ 2 ಸಿನಿಮಾಗೆ ಸೈಲೆಂಟ್ ಟ್ರೀಟ್‌ಮೆಂಟ್ ನೀಡುತ್ತಿದ್ದಾರಾ? ಅಥವಾ ಜನರು ಇದನ್ನು ಓವರ್ ಅನಲೈಸಿಂಗ್ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಹೆಚ್ಚಿನ ಜನ ಇದು ತಿರಸ್ಕಾರ ಎಂದೇ ವೋಟ್ ಮಾಡಿದ್ದರು. ಅಂದರೆ ಪತಿಯ ಸಿನಿಮಾವನ್ನು ದೀಪಿಕಾ ಬೇಕಂತಲೇ ಇಗ್ನೋರ್ ಮಾಡುತ್ತಿದ್ದಾರೆ ಎಂದು ಜನರು ಅಂದುಕೊಂಡಿದ್ದರು.
ಈ ಪೋಸ್ಟ್ ನೋಡಿದ ದೀಪಿಕಾ ಪಡುಕೋಣೆ ಅವರು ತಡಮಾಡದೆ ಅಲ್ಲೇ ಕಾಮೆಂಟ್ ಮಾಡಿದ್ದಾರೆ. "ನನ್ನ ಗೆಳೆಯರೇ, ಇದು ಕ್ಯಾಲ್ಕುಲೇಟೆಡ್ ಸ್ನಬ್ ಅಲ್ಲ.. ಅಂದಹಾಗೆ, ಈ ಸಿನಿಮಾವನ್ನು ನೀವೆಲ್ಲರೂ ನೋಡುವ ಮೊದಲೇ ನಾನು ನೋಡಿದ್ದೇನೆ, ಈಗ ಜೋಕ್ ಯಾರ ಮೇಲೆ ಆಯ್ತು?" ಎಂದು ನಗುಮುಖದ ಎಮೋಜಿ ಹಾಕಿ ಕಾಲೆಳೆದಿದ್ದಾರೆ.
ದೀಪಿಕಾ ಅವರ ಈ ಉತ್ತರ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಅಂದರೆ ಸಿನಿಮಾದ ಶೂಟಿಂಗ್ ಹಂತದಿಂದಲೇ ತಮಗೆ ಎಲ್ಲವೂ ಗೊತ್ತು ಮತ್ತು ಪತಿಯ ಸಕ್ಸಸ್‌ನಲ್ಲಿ ತಾವೂ ಭಾಗಿಯಾಗಿದ್ದೇವೆ, ಕೇವಲ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕದಿದ್ದರೆ ಪ್ರೀತಿ ಇಲ್ಲ ಅಂತ ಅರ್ಥವಲ್ಲ ಅನ್ನೋದನ್ನ ಅವರು ಪರೋಕ್ಷವಾಗಿ ತಿಳಿಸಿದ್ದಾರೆ.
ದೀಪಿಕಾ ಅವರ ಈ ಖಡಕ್ ಉತ್ತರವನ್ನ ನೋಡಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. "ರಿಯಲ್ ಲೈಫ್‌ನಲ್ಲಿ ಖುಷಿಯಾಗಿದ್ರೆ ಸಾಕು, ಇನ್‌ಸ್ಟಾಗ್ರಾಮ್‌ನಲ್ಲಿ ತೋರಿಸಿಕೊಳ್ಳೋದು ಅವಶ್ಯಕತೆ ಇಲ್ಲ" ಅಂತ ಫ್ಯಾನ್ಸ್ ದೀಪಿಕಾ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಣವೀರ್ ಮತ್ತು ದೀಪಿಕಾ ನಡುವೆ ಎಲ್ಲವೂ ಚೆನ್ನಾಗಿದೆ, ವಿನಾಕಾರಣ ಗಾಸಿಪ್ ಹಬ್ಬಿಸಬೇಡಿ ಎಂದು ಟ್ರೋಲರ್ಸ್‌ಗೆ ಬಿಸಿ ಮುಟ್ಟಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ 'ಧುರಂಧರ್ 2' ಈಗ ಗ್ಲೋಬಲ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ರಣವೀರ್ ಸಿಂಗ್ ಅವರ ಆಕ್ಷನ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮನೆಯಲ್ಲಿ ದೀಪಿಕಾ ಸಪೋರ್ಟ್ ಇದೆ, ಹೊರಗಡೆ ಜನರ ಸಪೋರ್ಟ್ ಇದೆ, ರಣವೀರ್ ಸಿಂಗ್‌ಗೆ ಈಗ ಹಬ್ಬವೋ ಹಬ್ಬ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ನಾವು ಎಷ್ಟು ಕಡಿಮೆ ತಲೆ ಕೆಡಿಸಿಕೊಂಡರೆ ಅಷ್ಟು ಒಳ್ಳೆಯದು ಅಲ್ವಾ? ದೀಪಿಕಾ ಅವರ ಈ ಖಡಕ್ ಉತ್ತರ ನಿಮಗೆ ಇಷ್ಟ ಆಯ್ತಾ? ಕಾಮೆಂಟ್ ಮಾಡಿ ತಿಳಿಸಿ.