Jan 25, 2026 Languages : ಕನ್ನಡ | English

ಗಿಲ್ಲಿ ಗೆಲುವಿನ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಧ್ರುವಂತ್ - ಇದಕ್ಕೆ ಧ್ರುವಂತ್ ಇಷ್ಟ ಆಗೋದು!!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಗಮನ ಸೆಳೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ನಿನ್ನೆಯಷ್ಟೇ ಮುಕ್ತಾಯವಾಗಿದೆ. ಹೌದು ಸೀಸನ್ 12ರ ವಿಜೇತರಾಗಿ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಗಿಲ್ಲಿ ಹೊರ ಹೊಮ್ಮಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಗಿಲ್ಲಿ ನಟ ಅವರು ಅವರದೇ ಆದ ವಿಶಿಷ್ಟ ಶೈಲಿಯ ಆ ಆಟ ಹಲವರಿಗೆ ಸಕ್ಕತ್ ಇಷ್ಟವಾಗಿತ್ತು. ಗಿಲ್ಲಿ ನಟನ ಆಟದ ಶೈಲಿಗೆ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿದು, ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡಿ ಗಿಲ್ಲಿಯೇ ಗೆಲ್ಲಬೇಕು ಎನ್ನುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಇಟ್ತಚಿಗೆ ಹೆಚ್ಚು ಕಂಡು ಬಂದವು. ಅಷ್ಟೇ ಅದ್ಭುತವಾಗಿ ಆಟ ಆಡಿದ್ದಾರೆ ಗಿಲ್ಲಿ ಸಹ ಎನ್ನಬಹುದು. 

ಗಿಲ್ಲಿ ಬಗ್ಗೆ ಧ್ರುವಂತ್ ಹೇಳಿದ ಮಾತುಗಳು
ಗಿಲ್ಲಿ ಬಗ್ಗೆ ಧ್ರುವಂತ್ ಹೇಳಿದ ಮಾತುಗಳು

ಗಿಲ್ಲಿ ನಟ ವಿನ್ನರ್ ಆದ ಬಳಿಕ ಅವರ ಊರಿನತ್ತ ಮುಖ ಮಾಡಿದ್ದಾರೆ. ಅವರ ಅಭಿಮಾನಿಗಳ ಸಂಭ್ರಮ ಸಡಗರದಲ್ಲಿ ತೇಲಾಡುತ್ತಿದ್ದಾರೆ. ಇಷ್ಟು ಜನರು ನಮಗೆ ಪ್ರೋತ್ಸಾಹ ನೀಡುತ್ತಾರೆ ಎಂದು ಅವರ ಅಂದುಕೊಂಡಿರಲಿಲ್ಲವಂತೆ. ಅಷ್ಟು ಜನರ ಪ್ರೀತಿ ನೋಡಿ ಅವರೇ ಒಂದು ಕ್ಷಣ ಶಾಕ್ ಆಗಿದ್ದು ನಿಜ. ಹೌದು ಗಿಲ್ಲಿ ನಟನ ಗೆಲುವಿನ ಬಗ್ಗೆ ಅಶ್ವಿನಿ ಅವರು ಈಗಾಗಲೇ ಕೆಲ ವಿಚಾರಗಳನ್ನು ಹಂಚಿಕೊಂಡರು. ಬಡವ ಬೇರೆ ಬಡತನದ ಹೆಸರು ಹೇಳಿಕೊಂಡು ಗೆಲ್ಲುವುದೇ ಬೇರೆ ಎನ್ನುವ ಮಾತುಗಳು ವೈರಲಾಗುತ್ತಿವೆ.

ಇದರ ನಡುವೆ ಧ್ರುವಂತ್ ಕೂಡ ಒಬ್ಬ ಒಳ್ಳೆಯ ಆಟಗಾರ. ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ಚಾಪು ಮೂಡಿಸಿದಂತಹ ಸ್ಪರ್ಧಿ. ಧ್ರುವಂತ್ ಅವರ ಆಟದ ಶೈಲಿ ಸಹ  ಆಗಿತ್ತು. ಒನ್ ಮ್ಯಾನ್ ಆರ್ಮಿ ಜೈ ಮಹಾಕಾಲ್ ಹೀಗೆ ಸಾಕಷ್ಟು ಹೆಸರುಗಳಿಂದ ಅವರನ್ನು ಕೂಡ ಹೊರಗಡೆ ತುಂಬಾ ಜನರು ಪ್ರೀತಿಯಿಂದ ಕರೆಯುತ್ತಾ ಫ್ಯಾನ್ ಆಗಿದ್ದಾರೆ. ಅವರಿಗೆ ಅಷ್ಟೇ ಸಾಕು ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಹೌದು, ಧ್ರುವಂತ್ ಅವರಿಗೆ ಗಿಲ್ಲಿ ಗೆದ್ದಿದ್ದು ಸಂತೃಪ್ತಿ ಇಲ್ಲ ನಿಮಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ ನಾವು ನೋಡುವ ನೋಟ ಒಳಗಡೆ ಬೇರೆ ಹೊರಗಡೆ ಬೇರೆ ಇರುತ್ತದೆ. ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಗಿಲ್ಲಿಯವರು ವಿನ್ ಆಗಿದ್ದಾರೆ. ನಾನು ಶೋ ಗೆದ್ದಿದ್ದೇನೆ ನನಗೂ ಕೂಡ ಖುಷಿ ಇದೆ. ಕಿಚ್ಚ ಸುದೀಪ್ ಅವರ ಸೀಸನ್ ಚಪ್ಪಾಳೆ ಸಿಗುವುದು ಸುಲಭದ ಮಾತಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಹಾಗೆ ಅಷ್ಟು ಅಭಿಮಾನಿ ಬಳಗ ಹೊಂದಿರುವ ಗಿಲ್ಲಿಯವರು, ಅದನ್ನು ಪಡೆದುಕೊಳ್ಳುವುದು ತುಂಬಾನೇ ಕಷ್ಟ ಅವರು ಪಡೆದುಕೊಂಡಿದ್ದಾರೆ, ಅವ್ರನ್ನ ಕಾಯ್ದುಕೊಳ್ಳಲಿ ಎಂದು ಆಶಿಸಿದರು. 

Latest News