Jan 25, 2026 Languages : ಕನ್ನಡ | English

'ಗೆದ್ದು ಬಾ ಗಿಲ್ಲಿ' ಎಂದು ರಸ್ತೆಯಲ್ಲೇ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ಆಟೋ - ವಿಡಿಯೋ ವೈರಲ್

ಹೌದು ರಾಜ್ಯದಲ್ಲಿ ಇದೀಗ ಕೆಲವರು ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ಕುರಿತಾಗಿ ಹೆಚ್ಚು ಅಭಿಮಾನ ತೋರುತ್ತಿದ್ದಾರೆ. ಗಿಲ್ಲಿ ಪ್ರಚಾರ ಈಗ ಹೊಸ ಟ್ರೆಂಡ್ ಆಗಿ ಪರಿಣಮಿಸಿದೆ. ಗಲ್ಲಿಯಿಂದ ದೊಡ್ಡ ಮನೆವರೆಗೂ ಎಲ್ಲೆಡೆ “ಗೆದ್ದು ಬಾ ಗಿಲ್ಲಿ” ಎಂಬ ಘೋಷಣೆ ಮೊಳಗುತ್ತಿದೆ ಎನ್ನಬಹುದು. ಅಭಿಮಾನಿಗಳ ಉತ್ಸಾಹ, ಅವರ ಪ್ರಚಾರ ಶೈಲಿ, ಜನಮನ ಸೆಳೆಯುತ್ತಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ತೋರಿಸಿರುವ ಆಟ, ಸರಳತೆ ಮತ್ತು ನೇರ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿವೆ. 

ಬಿಗ್ ಬಾಸ್ ಸ್ಪರ್ಧಿ ಗಿಲ್ಲಿಗೆ ಮತ ಹಾಕುವಂತೆ ಅಭಿಮಾನಿಗಳ ಕೋರಿಕೆ
ಬಿಗ್ ಬಾಸ್ ಸ್ಪರ್ಧಿ ಗಿಲ್ಲಿಗೆ ಮತ ಹಾಕುವಂತೆ ಅಭಿಮಾನಿಗಳ ಕೋರಿಕೆ

ಇದರಿಂದಾಗಿ ಬೀದಿ ಬೀದಿಯಲ್ಲಿ ಗಿಲ್ಲಿ ಪರ ಪ್ರಚಾರ ಜೋರಾಗಿದೆ. ಕೆಲವರು ತಮ್ಮ ಮನೆಗಳ ಮುಂದೆ ಪೋಸ್ಟರ್ ಅಂಟಿಸುತ್ತಿದ್ದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್‌ಟ್ಯಾಗ್‌ಗಳ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಉತ್ಸಾಹದ ಮಟ್ಟವನ್ನು ನೋಡಿದರೆ, ಇದು ಕೇವಲ ಟಿವಿ ಶೋಗೆ ಸೀಮಿತವಾಗಿಲ್ಲ. ಆಟೋಗಳಿಗೆ ಸ್ಪೀಕರ್ ಕಟ್ಟಿಕೊಂಡು ಬೀದಿ ಬೀದಿ ಸುತ್ತುತ್ತಿರುವ ಅಭಿಮಾನಿಗಳು “ಗಿಲ್ಲಿಗೆ ಮತ ಹಾಕಿ, ಗೆದ್ದು ಬಾ ಗಿಲ್ಲಿ” ಎಂದು ಘೋಷಣೆ ಮಾಡುತ್ತಿದ್ದಾರೆ. ಈ ದೃಶ್ಯಗಳು ಸ್ಥಳೀಯ ಜನರಲ್ಲಿ ಕುತೂಹಲ ಮೂಡಿಸುತ್ತಿವೆ. 

ಗಿಲ್ಲಿ ಪರ ಪ್ರಚಾರದಲ್ಲಿ ಯುವಕರು, ಮಹಿಳೆಯರು, ಹಿರಿಯರು ಎಲ್ಲರೂ ಭಾಗಿಯಾಗಿದ್ದಾರೆ. “ಗಿಲ್ಲಿ ನಮ್ಮ ಹೃದಯದ ಆಟಗಾರ. ಅವನು ಗೆಲ್ಲಲೇಬೇಕು” ಎಂಬ ಅಭಿಮಾನಿಗಳ ಮಾತುಗಳು ಅವರ ನಿಷ್ಠೆಯನ್ನು ತೋರಿಸುತ್ತವೆ. ಕೆಲವರು ತಮ್ಮ ಸ್ವಂತ ಹಣ ಖರ್ಚು ಮಾಡಿ ಪ್ರಚಾರ ವಾಹನಗಳನ್ನು ಸಿದ್ಧಪಡಿಸಿದ್ದು, ಇದು ಅಭಿಮಾನಿಗಳ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ. ಹೌದು ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಗಿಲ್ಲಿ ಈಗ ಜನಮನ ಸೆಳೆದ ಪ್ರಮುಖ ಹೆಸರು.

 “ಅವನ ಆಟದಲ್ಲಿ ನಿಜವಾದ ಮನಸ್ಸು ಇದೆ. ಅವನು ಯಾರನ್ನೂ ನೋಯಿಸದೆ, ತನ್ನ ಶೈಲಿಯಲ್ಲಿ ಆಡುತ್ತಿದ್ದಾನೆ” ಎಂದು ಗಿಲ್ಲಿ ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ಗಿಲ್ಲಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ಕುರಿತಾದ ಪೋಸ್ಟ್‌ಗಳು, ವಿಡಿಯೋಗಳು, ಮೀಮ್ಸ್ ಎಲ್ಲಾ ವೈರಲ್ ಆಗುತ್ತಿವೆ. “ಗೆದ್ದು ಬಾ ಗಿಲ್ಲಿ” ಎಂಬ ಘೋಷಣೆ ಈಗ ರಾಜ್ಯದ ಹಲವೆಡೆ ಟ್ರೆಂಡ್ ಆಗಿದೆ. ಅಭಿಮಾನಿಗಳ ಈ ಉತ್ಸಾಹವು ಬಿಗ್ ಬಾಸ್ ಶೋಗೆ ಹೊಸ ರಂಗು ತುಂಬಿದೆ.  

ಹೌದು ಬಿಗ್ ಬಾಸ್ ಗಿಲ್ಲಿ ಸದ್ಯ ತವರು ನೆಲದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದು, ಅಭಿಮಾನಿಗಳ ಪ್ರಚಾರ ಶೈಲಿ ಎಲ್ಲರ ಗಮನ ಸೆಳೆಯುತ್ತಿದೆ ನೋಡಿ. ಗಲ್ಲಿಯಿಂದ ದೊಡ್ಡ ಮನೆವರೆಗೂ ಗಿಲ್ಲಿಯದ್ದೇ ಜಪ, “ಗೆದ್ದು ಬಾ ಗಿಲ್ಲಿ” ಎಂಬ ಘೋಷಣೆ ಜನಮನದಲ್ಲಿ ಪ್ರತಿಧ್ವನಿಸುತ್ತಿದೆ. ನೀವು ಕೂಡ ಗಿಲ್ಲಿ ಗೆಲುವಿಗೆ ಎದುರು ನೋಡುತ್ತಿದ್ದರೆ ಒಂದು ಮೆಚ್ಚುಗೆ ನೀಡಿ ಧನ್ಯವಾದಗಳು.. 

Latest News