ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜೀವನದಲ್ಲಿ ಮದ್ವೆ ವಿಳಂಬವಾಗುವುದು ಅಥವಾ ಮಾತುಕತೆಗಳು ಅಂತಿಮ ಹಂತದಲ್ಲಿ ನಿಂತುಹೋಗುವುದು ಜಾತಕದಲ್ಲಿರುವ ಗ್ರಹಗತಿಗಳ ದೋಷದಿಂದಾಗುತ್ತದೆ. ವಿಶೇಷವಾಗಿ ದೇವಗುರು ಬೃಹಸ್ಪತಿ ದುರ್ಬಲವಾಗಿದ್ದರೆ ಮದುವೆಗೆ ಅಡೆತಡೆಗಳು ಎದುರಾಗುತ್ತವೆ. ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ರತ್ನಶಾಸ್ತ್ರದಲ್ಲಿ ಕೆಲವು ನಿರ್ದಿಷ್ಟ ರತ್ನಗಳನ್ನು ಧರಿಸುವುದರಿಂದ ಶೀಘ್ರ ವಿವಾಹ ಯೋಗ ಸಾಧ್ಯವೆಂದು ಹೇಳಲಾಗಿದೆ.
ಹಳದಿ ನೀಲಮಣಿ (Yellow Sapphire) ಗುರು ಗ್ರಹವನ್ನು ಬಲಪಡಿಸುವ ಅತ್ಯಂತ ಶಕ್ತಿಯುತ ರತ್ನವಾಗಿದೆ. ಇದು ವಿವಾಹ ಹಾಗೂ ದಾಂಪತ್ಯ ಸುಖಕ್ಕೆ ಪ್ರಮುಖ ಕಾರಣವಾಗಿದ್ದು, ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಪತಿ-ಪತ್ನಿಯ ನಡುವಿನ ಬಾಂಧವ್ಯವನ್ನು ಸುಧಾರಿಸುತ್ತದೆ. ಈ ರತ್ನವನ್ನು ಗುರುವಾರ ಸೂರ್ಯೋದಯದ ಸಮಯದಲ್ಲಿ ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ಅಳವಡಿಸಿ ಬಲಗೈಯ ತೋರು ಬೆರಳಿಗೆ ಧರಿಸುವುದು ಶ್ರೇಯಸ್ಕರ. ಧರಿಸುವ ಮೊದಲು "ಓಂ ಬೃಂ ಬೃಹಸ್ಪತೇಯ ನಮಃ" ಮಂತ್ರವನ್ನು 108 ಬಾರಿ ಜಪಿಸುವುದು ಅಗತ್ಯ.
ಶನಿ ಗ್ರಹ ದುರ್ಬಲವಾಗಿದ್ದರೆ ನೀಲಿ ನೀಲಮಣಿ (Blue Sapphire) ಧರಿಸುವುದು ಶುಭಕರ. ಶನಿಯು ಜೀವನದ ಕಷ್ಟಗಳನ್ನು ನಿವಾರಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಈ ರತ್ನ ಬಹಳ ಶಕ್ತಿಶಾಲಿಯಾಗಿರುವುದರಿಂದ ಅರ್ಹ ಜ್ಯೋತಿಷಿಯ ಸಲಹೆ ಪಡೆಯದೆ ಧರಿಸಬಾರದು. ಜಾತಕದಲ್ಲಿ ಗುರು ಈಗಾಗಲೇ ಬಲವಾಗಿದ್ದರೆ ಹಳದಿ ನೀಲಮಣಿ ಹಾಕಿಕೊಳ್ಳುವುದು ಹಾನಿಕಾರಕವಾಗಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.
ಇತರ ಸಹಾಯಕ ರತ್ನಗಳಲ್ಲಿ ಮಾಣಿಕ್ಯ (Ruby), ಮುತ್ತು (Pearl) ಮತ್ತು ಗೋಮೇಧಿಕ (Hessonite) ಪ್ರಮುಖವಾಗಿವೆ. ಮಾಣಿಕ್ಯ ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗಿ ಸಂಬಂಧಗಳು ಬಲಗೊಳ್ಳುತ್ತವೆ. ಮುತ್ತು ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆ ನೀಡುತ್ತದೆ. ರಾಹು ಗ್ರಹದ ದೋಷದಿಂದ ವಿವಾಹ ವಿಳಂಬವಾದರೆ ಗೋಮೇಧಿಕ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಇದನ್ನು ಸಹ ನಿಮ್ಮ ನಂಬಿಕೆಯ ಜ್ಯೋತಿಷಿ ಬಳಿ ಸಲಹೆ ಪಡೆದು ಕಾರ್ಯ ಕೈಗೊಳ್ಳಿ.
ವಿವಾಹ ಯೋಗಕ್ಕೆ ಶುಕ್ರ ಗ್ರಹದ ಬಲವೂ ಮುಖ್ಯವಾಗಿದ್ದು, ಶುಕ್ರನನ್ನು ಸಂತೋಷ, ಪ್ರೀತಿ ಮತ್ತು ವೈವಾಹಿಕ ಜೀವನದ ಕಾರಕ ಎಂದು ಪರಿಗಣಿಸಲಾಗುತ್ತದೆ. ಈ ಗ್ರಹವನ್ನು ಬಲಪಡಿಸಲು ವಜ್ರ (Diamond) ಅಥವಾ ಓಪಲ್ ಧರಿಸುವುದು ಶ್ರೇಯಸ್ಕರ. ಯಾವುದೇ ರತ್ನವನ್ನು ಧರಿಸುವ ಮೊದಲು ಜಾತಕವನ್ನು ಪರಿಶೀಲಿಸಿ, ಪ್ರಮಾಣೀಕೃತ 5–7 ಕ್ಯಾರೆಟ್ ತೂಕದ ರತ್ನವನ್ನು ಮಾತ್ರ ಚಿನ್ನ ಅಥವಾ ಬೆಳ್ಳಿಯಲ್ಲಿ ಅಳವಡಿಸಿ, ಶುಭ ಮುಹೂರ್ತದಲ್ಲಿ ಶುದ್ಧೀಕರಣ ಕ್ರಿಯೆಗಳನ್ನು ನೆರವೇರಿಸಿ ಧರಿಸಬೇಕು. ತಪ್ಪು ರತ್ನ ಧರಿಸುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಮೇಲಿನ ಈ ಎಲ್ಲಾ ಅಂಶದ ಕಾರ್ಯ ಕೈಗೊಳ್ಳುವ ಮುನ್ನ ಜ್ಯೋತಿಷಿ ಹೇಳುವ ಪೂಜಾರಿ ಬಳಿ ಸಲಹೆ ಪಡೆದು ಕಾರ್ಯ ರೂಪಕ್ಕೆ ತೆಗೆದುಕೊಳ್ಳುವುವು ಉತ್ತಮ ಎನ್ನಲಾಗಿದೆ.
ಸ್ಪಷ್ಟನೆ: ಇಲ್ಲಿ ನೀಡಿರುವ ಮಾಹಿತಿಯು ಸಂಪೂರ್ಣವಾಗಿ ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ನೀಡಲ್ಪಟ್ಟಿದ್ದು, ಇದಕ್ಕೆ ಯಾವ ವೈಜ್ಞಾನಿಕ ಪುರಾವೆಗಳಿಲ್ಲ. ಸಪ್ತಾಶ್ವ ಟಿವಿ ಈ ಮಾಹಿತಿಗೆ ಯಾವುದೇ ಖಾತರಿ ಕೊಡುವುದಿಲ್ಲ.