ಮದುವೆ ಎಂದರೆ ಸಂಭ್ರಮ, ಔತಣಕೂಟ, ಉಡುಗೊರೆಗಳು ಇವೆಲ್ಲವೂ ಇರೋದು ಸಾಮಾನ್ಯ. ಆದರೆ ಸೌದಿ ಅರೇಬಿಯಾದಲ್ಲಿ ನಡೆದ ಒಂದು ಮದುವೆ ಕಾರ್ಯಕ್ರಮ ಎಲ್ಲರನ್ನೂ ನಿಜಕ್ಕೂ ಅಚ್ಚರಿ ಪಡಿಸಿದೆ. ವಧುವಿನ ಅಣ್ಣನು ವರನಿಗೆ ಹಾಗೂ ವರನ ಕುಟುಂಬದವರಿಗೆ 24 ಕ್ಯಾರೆಟ್ ಚಿನ್ನದ ಬಿಸ್ಕೆಟ್‌ಗಳನ್ನು ಉಡುಗೊರೆಯಾಗಿ ಹಂಚಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮದುವೆಯಲ್ಲಿ ವಧುವಿನ ಸಹೋದರನು ಉಂಗುರ, ಸರ ಅಥವಾ ಸಣ್ಣ ಉಡುಗೊರೆ ನೀಡುವ ಸಂಪ್ರದಾಯವಿದೆ. ಆದರೆ ಇಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಹಂಚಿರುವುದು ಅಪರೂಪ. ವಿಡಿಯೋದಲ್ಲಿ, ಸಾಂಪ್ರದಾಯಿಕ ಅರಬ್ ಉಡುಗೆಯಲ್ಲಿ ಅತಿಥಿಗಳು ಸಾಲಾಗಿ ಕುಳಿತಿರುವುದನ್ನು ಕಾಣಬಹುದು. ಈ ವೇಳೆ ವಧುವಿನ ಅಣ್ಣನು ಹೊಳೆಯುವ ಹಳದಿ ಬಣ್ಣದ ಬಿಸ್ಕೆಟ್‌ಗಳನ್ನು ಒಬ್ಬೊಬ್ಬರಿಗೇ ನೀಡುತ್ತಾ ಹೋಗುತ್ತಾನೆ.
ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಇವು ನಿಜವಾದ ಚಿನ್ನದ ಬಿಸ್ಕೆಟ್‌ಗಳಲ್ಲ, ಚಿನ್ನದ ಹಾಳೆಯಲ್ಲಿ ಸುತ್ತಿದ ಐಷಾರಾಮಿ ಚಾಕೊಲೇಟ್‌ಗಳು” ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬರು “ಇದು ನಿಜವಾದ ಚಿನ್ನದ ಬಾರ್, ಸೌದಿ ಮದುವೆಗಳಲ್ಲಿ ಹೀಗೆ ಮಾಡುವುದು ಸಾಮಾನ್ಯ” ಎಂದು ಪ್ರತಿಕ್ರಿಯಿಸಿದ್ದಾರೆ. ಸೌದಿ ಸಂಸ್ಕೃತಿಯಲ್ಲಿ ಮದುವೆಯ ವೇಳೆ ವಧುವಿಗೆ ‘ಮಹರ್’ ರೂಪದಲ್ಲಿ ಚಿನ್ನ ನೀಡುವುದು ಸಾಮಾನ್ಯ. ಆದರೆ ಸಾರ್ವಜನಿಕವಾಗಿ ಎಲ್ಲರಿಗೂ ಚಿನ್ನದ ಬಿಸ್ಕೆಟ್ ಹಂಚುವುದು ಅತ್ಯಂತ ವಿರಳ.
Saudi wedding ceremony
Bride’s brother offers 24 karat Gold biscuits to Groom’s family 😳
pic.twitter.com/2lOAZwUhoi— Frontalforce 🇮🇳 (@FrontalForce) February 11, 2026
ಈ ಕಾರಣದಿಂದಲೇ ಈ ವಿಡಿಯೋ ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿದೆ. ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ, ಸಾಮಾನ್ಯ ಜನರಿಗೆ ಮದುವೆಯಲ್ಲಿ ಚಿನ್ನ ಕೊಳ್ಳುವುದು ದೊಡ್ಡ ಸವಾಲಾಗಿದೆ. ಆದರೆ ಈ ಮದುವೆಯಲ್ಲಿ ವಧುವಿನ ಅಣ್ಣನು ವರನ ಕುಟುಂಬಕ್ಕೆ ಚಿನ್ನದ ಬಿಸ್ಕೆಟ್‌ಗಳನ್ನು ಹಂಚಿರುವುದು ಅಚ್ಚರಿ ಮೂಡಿಸಿದೆ. ಸೌದಿ ಮದುವೆಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಚಿನ್ನದ ಉಡುಗೊರೆಯ ವೈಭವವನ್ನು ವಿಶ್ವದಾದ್ಯಂತ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿಸಿದೆ.