Apr 4, 2026 Languages : ಕನ್ನಡ | English

RCB vs CSK ಪಂದ್ಯಕ್ಕೆ ಬೆಂಗಳೂರು ಪೊಲೀಸರ ಮಾಸ್ಟರ್ ಪ್ಲಾನ್ - ಸಂಚಾರ ನಿಯಮಗಳಲ್ಲಿ ಭಾರಿ ಬದಲಾವಣೆ!!

ನಾಳೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB vs CSK ಬಿಗ್ ಫೈಟ್‌ಗೆ ಕೌಂಟ್ ಡೌನ್ ಶುರುವಾಗಿದೆ. ಈ ಹೈ-ವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಅಭಿಮಾನಿಗಳಿಗೆ ಕೆಲವು ಮುಖ್ಯವಾದ ಟಿಪ್ಸ್ ಮತ್ತು ಎಚ್ಚರಿಕೆಗಳನ್ನು ನೀಡಿದ್ದಾರೆ.

ಕ್ರಿಕೆಟ್ ಪ್ರೇಮಿಗಳೇ ಎಚ್ಚರ
ಕ್ರಿಕೆಟ್ ಪ್ರೇಮಿಗಳೇ ಎಚ್ಚರ

1. ಟಿಕೆಟ್ ಇಲ್ಲದಿದ್ದರೆ ಸ್ಟೇಡಿಯಂ ಹತ್ತಿರ ಸುಳಿಯಬೇಡಿ!

ಪೊಲೀಸ್ ಕಮಿಷನರ್ ಅವರು ಬಹಳ ಖಡಕ್ ಆಗಿ ಒಂದು ಮಾತು ಹೇಳಿದ್ದಾರೆ: "ಕೈಯಲ್ಲಿ ಟಿಕೆಟ್ ಇಲ್ಲದವರು ಸ್ಟೇಡಿಯಂ ಹತ್ತಿರ ಬರಲೇಬೇಡಿ." ಪಂದ್ಯ ನೋಡಲು ಸಿಕ್ಕಾಪಟ್ಟೆ ಜನ ಬರುವುದರಿಂದ ಅಲ್ಲಿ ಅನಗತ್ಯವಾಗಿ ಗುಂಪು ಸೇರಿ ಗೊಂದಲ ಮಾಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ಟಿಕೆಟ್ ಇಲ್ಲದೆ ಸುಮ್ಮನೆ ಸುತ್ತಾಡುತ್ತಾ ಸಿಕ್ಕಿಬಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ವಾರ್ನಿಂಗ್ ನೀಡಿದ್ದಾರೆ.

2. ಬಸ್ ಅಥವಾ ಮೆಟ್ರೋ ಬಳಸಿ, ಟ್ರಾಫಿಕ್ ಕಿರಕಿರಿ ತಪ್ಪಿಸಿ

ಹೋದ ಸಲ ಮ್ಯಾಚ್ ನಡೆದಾಗ ಸುಮಾರು 32 ಸಾವಿರ ಜನ ಮೆಟ್ರೋ ಬಳಸಿದ್ದರಂತೆ. ಹಾಗಾಗಿ ಈ ಸಲವೂ ಅಭಿಮಾನಿಗಳು ತಮ್ಮ ಸ್ವಂತ ಗಾಡಿ ತಂದು ಪಾರ್ಕಿಂಗ್ ಕಿರಿಕಿರಿ ಅನುಭವಿಸುವ ಬದಲು, ಆರಾಮಾಗಿ ನಮ್ಮ ಮೆಟ್ರೋ ಅಥವಾ BMTC ಬಸ್ಗಳಲ್ಲೇ ಬನ್ನಿ ಎಂದು ಕಮಿಷನರ್ ಸಲಹೆ ನೀಡಿದ್ದಾರೆ. ಇದು ನಿಮ್ಮ ಸಮಯವನ್ನು ಉಳಿಸುವುದಲ್ಲದೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸುತ್ತದೆ.

3. ಮೊಬೈಲ್ ಕಳ್ಳರ ಬಗ್ಗೆ ಇರಲಿ ಎಚ್ಚರ!

ಹೋದ ಮ್ಯಾಚ್ ವೇಳೆ ಸುಮಾರು ಜನರು ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಆ ವಿಚಾರದಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಈಗಾಗಲೇ 71 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಳ್ಳರು ಹೆಚ್ಚಾಗಿ ಹೊರ ರಾಜ್ಯದವರಾಗಿರುತ್ತಾರೆ ಎಂಬ ಮಾಹಿತಿ ಬಂದಿದೆ. ಆದ್ದರಿಂದ ಸ್ಟೇಡಿಯಂ ಒಳಗೆ ಮತ್ತು ಹೊರಗೆ ಇರುವಾಗ ನಿಮ್ಮ ಮೊಬೈಲ್ ಮತ್ತು ಪರ್ಸ್ ಬಗ್ಗೆ ತುಂಬಾ ಜಾಗರೂಕರಾಗಿರಿ.

ಮೆಟ್ರೋ ಸಂಚಾರದ ಹೊಸ ಟೈಮಿಂಗ್ಸ್ (ಅಭಿಮಾನಿಗಳಿಗಾಗಿ ಸ್ಪೆಷಲ್)
ಮ್ಯಾಚ್ ಮುಗಿದ ಮೇಲೆ ಮನೆಗೆ ಹೋಗಲು ಟೆನ್ಶನ್ ಬೇಡ. ಬಿಎಂಆರ್‌ಸಿಎಲ್ (BMRCL) ಮೆಟ್ರೋ ಸಮಯವನ್ನು ವಿಸ್ತರಿಸಿದೆ.

ರಾತ್ರಿ 11 ಗಂಟೆಯ ನಂತರವೂ ಮೆಟ್ರೋ ಇರುತ್ತದೆ: ಪಂದ್ಯ ಮುಗಿಯುವುದು ತಡವಾದರೂ ಅಭಿಮಾನಿಗಳಿಗೆ ತೊಂದರೆಯಾಗಬಾರದು ಎಂದು ಮುಂಜಾನೆ 2 ಗಂಟೆಯವರೆಗೆ ಸೇವೆ ಇರುತ್ತದೆ.

ಕೊನೆಯ ರೈಲುಗಳು ಯಾವಾಗ?

  • ಮೆಜೆಸ್ಟಿಕ್ (KSR): ಇಲ್ಲಿಂದ ನಾಲ್ಕೂ ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡುತ್ತದೆ.
  • ವೈಟ್‌ಫೀಲ್ಡ್: ರಾತ್ರಿ 12:30.
  • ಚೆಲ್ಲಘಟ್ಟ ಮತ್ತು ರೇಷ್ಮೆ ಸಂಸ್ಥೆ: ರಾತ್ರಿ 12:45.
  • ಬೊಮ್ಮಸಂದ್ರ: ರಾತ್ರಿ 12:30.
  • ಆರ್.ವಿ. ರಸ್ತೆ: ರಾತ್ರಿ 02:00 ಗಂಟೆಗೆ ಕೊನೆಯ ರೈಲು ಇರುತ್ತದೆ.

ಪಂದ್ಯದ ಸಂಭ್ರಮಕ್ಕೆ ಪೊಲೀಸರ ಸಾಥ್

ಮಾರ್ಚ್ 28 ರಂದು ನಡೆದ ಪಂದ್ಯದಂತೆಯೇ ನಾಳೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಟೇಡಿಯಂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಭಿಮಾನಿಗಳು ಸಂಯಮದಿಂದ ವರ್ತಿಸಿ, ಪೊಲೀಸರ ಜೊತೆ ಸಹಕರಿಸಿ ಮ್ಯಾಚ್ ಎಂಜಾಯ್ ಮಾಡಬೇಕು ಎಂಬುದು ಸೀಮಾಂತ್ ಕುಮಾರ್ ಸಿಂಗ್ ಅವರ ಆಶಯ.

ಹಾಗಾಗಿ ಕ್ರಿಕೆಟ್ ಪ್ರೇಮಿಗಳೇ, ಟಿಕೆಟ್ ಇದ್ದರೆ ಮಾತ್ರ ಸ್ಟೇಡಿಯಂಗೆ ಹೋಗಿ, ನಿಮ್ಮ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳಿ ಮತ್ತು ಮೆಟ್ರೋ ಬಳಸುವ ಮೂಲಕ ಟ್ರಾಫಿಕ್ ಫ್ರೀ ಆಗಿ ಪಂದ್ಯ ನೋಡಿ ಸಂಭ್ರಮಿಸಿ.

Latest News