ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಈಗ ಹಬ್ಬದ ಸಮಯ! ಭಾನುವಾರ (ಏಪ್ರಿಲ್ 5) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಈ ಮ್ಯಾಚ್ ನೋಡಲು ಬರುವವರಿಗೆ ಯಾವುದೇ ಟ್ರಾಫಿಕ್ ಕಿರಿಕಿರಿ ಇರಬಾರದು ಅಂತ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಭರ್ಜರಿ ಪ್ಲಾನ್ ಮಾಡಿಕೊಂಡಿವೆ.
ಮ್ಯಾಚ್ ಮುಗಿದು ತಡರಾತ್ರಿ ಮನೆಗೆ ಹೋಗೋದು ಹೇಗೆ ಅನ್ನೋ ಚಿಂತೆ ಬಿಡಿ, ಯಾಕಂದ್ರೆ ನಿಮಗಾಗಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ರಾತ್ರಿ 1 ಗಂಟೆಯವರೆಗೂ ಮೆಟ್ರೋ ರೈಲು!
ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಮೆಟ್ರೋ ಸೇವೆ ನಿಲ್ಲುತ್ತೆ. ಆದ್ರೆ ಭಾನುವಾರ ಪಂದ್ಯ ಮುಗಿಯೋದು ತಡವಾಗೋದ್ರಿಂದ ಬಿಎಂಆರ್‌ಸಿಎಲ್ (BMRCL) ಸಮಯವನ್ನು ವಿಸ್ತರಿಸಿದೆ.
-
ಮೆಜೆಸ್ಟಿಕ್ (ನಾಲ್ಕು ದಿಕ್ಕುಗಳಿಗೆ): ರಾತ್ರಿ 1.30 ರವರೆಗೆ ಮೆಟ್ರೋ ಇರುತ್ತೆ.
-
ವೈಟ್‌ಫೀಲ್ಡ್ ಮತ್ತು ಬೊಮ್ಮಸಂದ್ರ: ರಾತ್ರಿ 12.30 ಕ್ಕೆ ಕೊನೆಯ ರೈಲು.
-
ಚಲ್ಲಘಟ್ಟ, ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಮಾದವಾರ: ರಾತ್ರಿ 12.45 ಕ್ಕೆ ಕೊನೆಯ ರೈಲು ಹೊರಡಲಿದೆ.
-
ಆರ್‌ವಿ ರಸ್ತೆ: ಇಲ್ಲಿಂದ ಬೆಳಗಿನ ಜಾವ 2 ಗಂಟೆಯವರೆಗೂ ರೈಲು ಸೇವೆ ಲಭ್ಯವಿರಲಿದೆ.
ವಿಶೇಷ ಅಂದ್ರೆ, ನೀವು ಡಿಜಿಟಲ್ ಟಿಕೆಟ್ ತಗೊಂಡಿದ್ರೆ, ಅದರಲ್ಲೇ ಮೆಟ್ರೋ ಪ್ರಯಾಣಕ್ಕೆ ಕ್ಯೂಆರ್ ಕೋಡ್ (QR Code) ಇರುತ್ತೆ. ಅಂದ್ರೆ ನೀವು ಪ್ರತ್ಯೇಕವಾಗಿ ಟೋಕನ್ ಅಥವಾ ಟಿಕೆಟ್ ತಗೊಂಡು ಕ್ಯೂನಲ್ಲಿ ನಿಲ್ಲೋ ಅಗತ್ಯವಿಲ್ಲ!
ಪಾರ್ಕಿಂಗ್ ಇನ್ಮುಂದೆ ಈಸಿ!
ಗಾಡಿ ಎಲ್ಲಿ ನಿಲ್ಲಿಸೋದು ಅನ್ನೋದು ದೊಡ್ಡ ತಲೆನೋವು. ಅದಕ್ಕಾಗಿಯೇ ಬಿಎಂಆರ್‌ಸಿಎಲ್ 43 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ.
-
ಟೂ ವೀಲರ್: ಪಂದ್ಯ ಮುಗಿಯೋವರೆಗೂ ಕೇವಲ 30 ರೂಪಾಯಿ.
-
ಕಾರು: 60 ರೂಪಾಯಿ ಫಿಕ್ಸ್ಡ್ ರೇಟ್.
ನೀವು ಕಬ್ಬನ್ ರಸ್ತೆ ಗೇಟ್‌ಗಳಿಂದ ಕ್ರೀಡಾಂಗಣಕ್ಕೆ ಬರೋದಾದ್ರೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಸಿ. ಅದೇ ಲಿಂಕ್ ರಸ್ತೆ ಕಡೆಯಿಂದ ಬರೋರು ಎಂಜಿ ರಸ್ತೆ ನಿಲ್ದಾಣ ಬಳಸೋದು ಬೆಸ್ಟ್.
ಬಿಎಂಟಿಸಿ ಇಂದ ವಿಶೇಷ ಬಸ್ ಸೇವೆ
ಮೆಟ್ರೋ ಮಾತ್ರವಲ್ಲ, ಬಿಎಂಟಿಸಿ ಕೂಡ ಮ್ಯಾಚ್ ನೋಡೋರಿಗಾಗಿ ಸ್ಪೆಷಲ್ ಬಸ್‌ಗಳನ್ನ ಬಿಡ್ತಿದೆ. ಸ್ಟೇಡಿಯಂನಿಂದಲೇ ಈ ಬಸ್‌ಗಳು ಹೊರಡುತ್ತವೆ:
-
ಕಾಡುಗೋಡಿ ಕಡೆಗೆ: SBS-1K ಬಸ್ (HAL ರಸ್ತೆ ಮೂಲಕ).
-
ಸರ್ಜಾಪುರ: G-2 ಬಸ್.
-
ಎಲೆಕ್ಟ್ರಾನಿಕ್ಸ್ ಸಿಟಿ: G-3 ಬಸ್ (ಹೊಸೂರು ರಸ್ತೆ ಮೂಲಕ).
-
ಬನ್ನೇರುಘಟ್ಟ: G-4 ಬಸ್.
-
ಮಾಗಡಿ ರಸ್ತೆ (ಜನಪ್ರಿಯ ಟೌನ್‌ಶಿಪ್): G-7 ಬಸ್.
-
ಯಲಹಂಕ/ಹೆಗ್ಡೆ ನಗರ: ರೂಟ್ ನಂಬರ್ 10.
-
ಹೊಸಕೋಟೆ: 317 G ಬಸ್.
-
ಬನಶಂಕರಿ: ರೂಟ್ ನಂಬರ್ 13.
ಕಳೆದ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಮ್ಯಾಚ್ ನಡೆದಾಗ ಬರೋಬ್ಬರಿ 22,000 ಜನ ಮೆಟ್ರೋ ಬಳಸಿದ್ದರಂತೆ! ಇದು ಮಾಮೂಲಿ ದಿನಗಳಿಗಿಂತ ಎರಡು ಪಟ್ಟು ಹೆಚ್ಚು. ಅಂದು ಜನದಟ್ಟಣೆ ಜಾಸ್ತಿ ಇದ್ದಿದ್ದರಿಂದ ಕೇವಲ 3 ನಿಮಿಷಕ್ಕೊಮ್ಮೆ ರೈಲು ಬಿಡಲಾಗಿತ್ತು. ಈ ಸಲವೂ ಅಷ್ಟೇ ಜನ ಬರೋ ನಿರೀಕ್ಷೆ ಇದೆ, ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.