Jan 25, 2026 Languages : ಕನ್ನಡ | English

ಆರ್ ಸಿಬಿ ಫ್ಯಾನ್ಸ್ ಖುಷಿ ಪಡೋ ಸುದ್ದಿ - ಚಿನ್ನಸ್ವಾಮಿಯಲ್ಲಿ ಮತ್ತೆ ಪಂದ್ಯಗಳು ಶುರು!!

ಸ್ನೇಹಿತರೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಡಳಿತ ಮಂಡಳಿ ವಿಶೇಷ ತಯಾರಿಯನ್ನು ಕೈಗೊಂಡಿದೆ ಎನ್ನುವ ವಿಷಯ ಹೊರ ಬಿದ್ದಿದೆ. ಅಭಿಮಾನಿಗಳ ಸುರಕ್ಷತೆ ಹಾಗೂ ಜನಸಂದಣಿ ನಿರ್ವಹಣೆಗೆ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಆರ್‌ಸಿಬಿ ಮುಂದಾಗಿದೆ ಎನ್ನಲಾಗುತ್ತಿದೆ.  ಹೌದು ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ) ಜೊತೆ ನಡೆದ ಔಪಚಾರಿಕ ಸಭೆಯಲ್ಲಿ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ AI ಕ್ಯಾಮೆರಾ ಅಳವಡಿಸುವ ಪ್ರಸ್ತಾಪವನ್ನು ಆರ್‌ಸಿಬಿ ಮಂಡಳಿಯವರು ಮುಂದಿಟ್ಟಿದ್ದಾರಂತೆ. 

ಜನಸಂದಣಿ ನಿಯಂತ್ರಣಕ್ಕೆ AI ಬಳಕೆ – ಚಿನ್ನಸ್ವಾಮಿ ಪಂದ್ಯಕ್ಕೆ ಆರ್‌ಸಿಬಿ ತಯಾರಿ
ಜನಸಂದಣಿ ನಿಯಂತ್ರಣಕ್ಕೆ AI ಬಳಕೆ – ಚಿನ್ನಸ್ವಾಮಿ ಪಂದ್ಯಕ್ಕೆ ಆರ್‌ಸಿಬಿ ತಯಾರಿ

ಜನಸಂದಣಿ ನಿಯಂತ್ರಣ, ಶಿಸ್ತುಬದ್ಧ ಸರತಿ ಸಾಲು, ಪ್ರವೇಶ ಮತ್ತು ನಿರ್ಗಮನಗಳ ನೈಜ-ಸಮಯದ ಮೇಲ್ವಿಚಾರಣೆ ಈ ಎಲ್ಲಾ ವ್ಯವಸ್ಥೆಗಳನ್ನು ಸುಗಮಗೊಳಿಸಲು AI ತಂತ್ರಜ್ಞಾನವನ್ನು ಬಳಸುವ ಯೋಜನೆ ರೂಪಿಸಲಾಗಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಪ್ರಕಾರ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ 300 ರಿಂದ 350 AI ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದೆ. ಈ ಕ್ಯಾಮೆರಾಗಳು ಜನರ ಚಲನವಲನವನ್ನು ನೈಜ-ಸಮಯದಲ್ಲಿ ಟ್ರ್ಯಾಕ್ ಮಾಡಿ, ಅನಧಿಕೃತ ಪ್ರವೇಶವನ್ನು ತಡೆಯುವಲ್ಲಿ ಸಹಕಾರಿಯಾಗಲಿವೆ. 

ಜೊತೆಗೆ, ಅಭಿಮಾನಿಗಳು ಸರತಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ನಿಲ್ಲುವಂತೆ ನಿರ್ವಹಣೆ ಮಾಡಲು ಸಹಾಯ ಮಾಡಲಿವೆ.  ಹೌದು ಈ ಉಪಕ್ರಮದ ಸಂಪೂರ್ಣ ವೆಚ್ಚವನ್ನು ಆರ್‌ಸಿಬಿ ತಂಡವೇ ಭರಿಸಲು ಮುಂದಾಗಿದೆ. AI ಕ್ಯಾಮೆರಾ ಅಳವಡಿಕೆಗೆ ಅಂದಾಜು ವೆಚ್ಚ 4.5 ಕೋಟಿ ರೂಪಾಯಿ ಆಗಿದ್ದು, ಇದನ್ನು ಒಮ್ಮೆಲೇ ಭರಿಸುವುದಾಗಿ ಆರ್‌ಸಿಬಿ ಆಡಳಿತ ಮಂಡಳಿ ಪ್ರಕಟಿಸಿದೆ. ಅಭಿಮಾನಿಗಳ ಸುರಕ್ಷತೆ ಹಾಗೂ ಪಂದ್ಯಾವಳಿಯ ನಿರ್ವಹಣೆಗೆ ಇದು ಮಹತ್ವದ ಹೆಜ್ಜೆ ಎಂದು ಅವರು ಹೇಳಿದ್ದಾರೆ.  

ಹೌದು ಆರ್‌ಸಿಬಿ ತಂಡದ ಈ ನಿರ್ಧಾರ ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ ಎನ್ನಬಹುದು. ಪಂದ್ಯಾವಳಿಯ ಸಮಯದಲ್ಲಿ ಜನಸಂದಣಿ ಹೆಚ್ಚಾಗುವ ಕಾರಣ, ಸುರಕ್ಷತೆ ಹಾಗೂ ಶಿಸ್ತು ಕಾಪಾಡುವುದು ದೊಡ್ಡ ಸವಾಲಾಗಿರುತ್ತದೆ. AI ತಂತ್ರಜ್ಞಾನ ಬಳಕೆಯಿಂದ ಈ ಸವಾಲುಗಳನ್ನು ಎದುರಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಆರ್‌ಸಿಬಿ ತಂಡ ಕೈಗೊಂಡಿರುವ AI ಕ್ಯಾಮೆರಾ ಯೋಜನೆ ಅಭಿಮಾನಿಗಳ ಸುರಕ್ಷತೆ ಹಾಗೂ ಪಂದ್ಯ ನಿರ್ವಹಣೆಗೆ ಹೊಸ ತಂತ್ರಜ್ಞಾನಿ ಪರಿಹಾರವಾಗಿ ಪರಿಣಮಿಸಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು. 

Latest News