Jan 25, 2026 Languages : ಕನ್ನಡ | English

2026 ಕ್ಕೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಯಲಿವೆಯಾ? ಸುಳಿವು ಸಿಕ್ಕ ಬೆನ್ನಲ್ಲೇ ಮತ್ತೊಂದು ಸವಾಲು!!

2025ರ ಜೂನ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್‌ಸಿಬಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿ, ಹಲವರಿಗೆ ಗಾಯಗಳಾದ ಘಟನೆ ಇನ್ನೂ ಜನರ ಮನಸ್ಸಲಿ ಹಾಗೆಯೇ ಉಳಿದಿದೆ. ಚಿನ್ನಸ್ವಾಮಿಯಲ್ಲಿ ಇನ್ಮುಂದೆ ಮ್ಯಾಚು ನಡೆಯುವುದಿಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಇತ್ತೀಚಿಗೆ ಮತ್ತೇ ಬೆಂಗಳೂರಿನಲ್ಲೇ ಮ್ಯಾಚ್ ನಡೆಯುತ್ತೆ ಅನ್ನೋ ಸುಳಿವು ಕೊಟ್ಟಿದ್ದರು ಡಿಸಿಎಂ ಆದರೆ ಇದೆ ಹಿನ್ನೆಲೆಯಲ್ಲಿ, ಹಿರಿಯ ವಕೀಲ ಅಮೃತೇಶ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮುಂದಿನ ದಿನಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಹಾಗೂ ಇತರ ವಾಣಿಜ್ಯ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದರು. 

ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ !! ಸುಳಿವು ಸಿಕ್ಕ ಬೆನ್ನಲ್ಲೇ ಮತ್ತೊಂದು ಸವಾಲು
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ !! ಸುಳಿವು ಸಿಕ್ಕ ಬೆನ್ನಲ್ಲೇ ಮತ್ತೊಂದು ಸವಾಲು

ಹೌದು ಅಮೃತೇಶ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಪಿಡಬ್ಲ್ಯೂಡಿ ಹಾಗೂ ಕೆಎಸ್‌ಸಿಎಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಸಾರ್ವಜನಿಕ ಸಭೆಗಳಿಗೆ ಅಸುರಕ್ಷಿತವೆಂಬ ತಜ್ಞರ ಸಂಶೋಧನೆಗಳು, ಶಾಸನಬದ್ಧ ಸುರಕ್ಷತಾ ಅನುಮತಿಗಳ ಕೊರತೆ, ಹಾಗೂ ದೇಶಾದ್ಯಂತ ಕಾಲ್ತುಳಿತಗಳ ಪುನರಾವರ್ತಿತ ಇತಿಹಾಸ ಇವೆಲ್ಲವೂ ಸಹ ಇದರಲ್ಲಿ ಕೇಳಿ ಬಂದಿದ್ದವು. 

ಅವರು ತಮ್ಮ ಅರ್ಜಿಯಲ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದ ಸ್ಥಳವು ಹೆಚ್ಚಿನ ಕಾರ್ಯಕ್ರಮಗಳ ಸಮಯದಲ್ಲಿ ಜನಸಂದಣಿಯ ದುರುಪಯೋಗ, ಸಂಚಾರದ ಅಡಚಣೆ ಹಾಗೂ ಸಾರ್ವಜನಿಕ ಸುರಕ್ಷತಾ ಅಪಾಯಗಳನ್ನು ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಹಾಗೂ ಇತರ ನಗರಗಳಲ್ಲಿ ಸುರಕ್ಷಿತ ಪರ್ಯಾಯ ಕ್ರೀಡಾಂಗಣಗಳು ಲಭ್ಯವಿರುವುದರಿಂದ, ಪಂದ್ಯಗಳನ್ನು ಅಲ್ಲಿ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೃತೇಶ್ ಅವರು ಆಧುನಿಕ ಕ್ರಿಕೆಟ್ ಸಂಪೂರ್ಣವಾಗಿ ಪ್ರಸಾರ ಆಧಾರಿತವಾಗಿರುವುದರಿಂದ, ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗದಂತೆ ನೇರ ಪ್ರಸಾರ ಮೂಲಕ ಪಂದ್ಯಗಳನ್ನು ನಡೆಸಬಹುದು ಎಂದು ಸೂಚಿಸಿದ್ದಾರೆ. ಹೀಗಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಹಾಗೂ ವಾಣಿಜ್ಯ ಪಂದ್ಯಗಳಿಗೆ ಅನುಮತಿ ನಿರಾಕರಿಸುವಂತೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಅರ್ಜಿ ಹೈಕೋರ್ಟ್ ಮುಂದೆ ಬಾಕಿ ಇರುವ ಸ್ವಯಂಪ್ರೇರಿತ ವಿಚಾರಣೆಗಳ ಜೊತೆಗೆ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ. ಕಾಲ್ತುಳಿತ ದುರಂತದ ನೆನಪಿನಲ್ಲಿ, ಸಾರ್ವಜನಿಕ ಸುರಕ್ಷತೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಮತ್ತೊಮ್ಮೆ ಬಲವಾಗಿ ಕೇಳಿಬಂದಿದೆ. ಮುಂದೇನಾಗುತ್ತದೆಯೋ ಕಾದು ನೋಡೋಣ. 

Latest News