ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅಬ್ಬರ: 'A' ಸೆಲೆಬ್ರೇಷನ್ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ 15 ವರ್ಷದ ಈ ಸ್ಟಾರ್ ಪೋರ!!

ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಕೇವಲ 93 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡುವ ಮೂಲಕ ರಾಜಸ್ಥಾನ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಬ್ಯಾಟಿಂಗ್ ಜೊತೆಗೆ, ಅವರು ಅರ್ಧಶತಕ ಬಾರಿಸಿದ ನಂತರ ಮಾಡಿದ 'A' ಆಕಾರದ ಸೆಲೆಬ್ರೇಷನ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

ಐಪಿಎಲ್ 2026: ವೈಭವ್ ಸೂರ್ಯವಂಶಿ 93 ರನ್‌ಗಳ ಸಿಡಿಲಬ್ಬರ; | Photo Credit: https://www.instagram.com/cricbuzz/
ಐಪಿಎಲ್ 2026: ವೈಭವ್ ಸೂರ್ಯವಂಶಿ 93 ರನ್‌ಗಳ ಸಿಡಿಲಬ್ಬರ; | Photo Credit: https://www.instagram.com/cricbuzz/

ಈ ನಿಗೂಢ ಸೆಲೆಬ್ರೇಷನ್ ಹಿಂದಿನ ಅಸಲಿ ಕಥೆಯನ್ನ ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವತಃ ವೈಭವ್ ಅವರೇ ಬಿಚ್ಚಿಟ್ಟಿದ್ದಾರೆ. ಈ ಕುರಿತ ಕಂಪ್ಲೀಟ್ ಮ್ಯಾಚ್ ರಿಪೋರ್ಟ್ ಮತ್ತು ಇಂಟರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ:

ವೈರಲ್ 'A' ಸೆಲೆಬ್ರೇಷನ್ ರಹಸ್ಯ;

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಪ್ರಸ್ತುತ ಐಪಿಎಲ್ ಸೀಸನ್‌ನಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಪೂರೈಸಿದ ತಕ್ಷಣ, ತಲೆಯ ಮೇಲೆ ಕೈಗಳನ್ನು ಎತ್ತಿ ಇಂಗ್ಲಿಷ್‌ನ 'A' ಅಕ್ಷರದ ಆಕಾರವನ್ನು ತೋರಿಸಿ ಸಂಭ್ರಮಿಸಿದರು. ಇದನ್ನು ನೋಡಿದ ನೆಟ್ಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು, ಈ 'A' ಅಕ್ಷರದ ಹಿಂದೆ ಯಾರೋ ವಿಶೇಷ ವ್ಯಕ್ತಿ ಇದ್ದಾರೆ ಎಂದು ತಮಗಿಷ್ಟ ಬಂದಂತೆ ಗೆಸ್ ಮಾಡಲು ಶುರು ಮಾಡಿದ್ದರು.

ಆದರೆ ಪಂದ್ಯ ಮುಗಿದ ಬಳಿಕ ನಿರೂಪಕರು ಈ ಬಗ್ಗೆ ಪ್ರಶ್ನಿಸಿದಾಗ, ವೈಭವ್ ಕೊಟ್ಟ ಉತ್ತರ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. "ನಾನು ಈ ಹಿಂದೆ ಮಾಡಿದ ಸೆಲೆಬ್ರೇಷನ್ ಗೂ ಕೂಡ ಯಾವುದೇ ವಿಶೇಷ ಕಾರಣ ಇರಲಿಲ್ಲ. ನಾನು ಯಾವುದೇ ಪ್ಲಾನ್ ಮಾಡಲ್ಲ. ಮೈದಾನದಲ್ಲಿ ಹಾಗೆ ಹೊಸ ಹೊಸ ವಿಷಯಗಳನ್ನು ಟ್ರೈ ಮಾಡುತ್ತಿರುತ್ತೇನೆ ಅಷ್ಟೇ" ಎಂದು ನಗುತ್ತಾ ಉತ್ತರಿಸುವ ಮೂಲಕ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಲಕ್ನೋ ಬೌಲರ್‌ಗಳ ಬೆವರಿಳಿಸಿದ 93 ರನ್‌ಗಳ ಕಾರ್ನೇಜ್!

ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದರು. ಕೇವಲ 38 ಎಸೆತಗಳಲ್ಲಿ ಬರೋಬ್ಬರಿ 93 ರನ್ ಚಚ್ಚಿದ ವೈಭವ್, ಎದುರಾಳಿ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಾಡಿಸಿದರು.

ಪವರ್‌ಪ್ಲೇ ಧಮಾಕಾ - ತಾತ್ಕಾಲಿಕ ನಾಯಕ ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ವೈಭವ್, ಪವರ್‌ಪ್ಲೇ ಅವಧಿಯಲ್ಲೇ ವಿಕೆಟ್ ನಷ್ಟವಿಲ್ಲದೆ 71 ರನ್ ಕಲೆಹಾಕಲು ಕಾರಣರಾದರು. ಜೈಸ್ವಾಲ್ ಔಟಾದ ನಂತರ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಎತ್ತಿಕೊಂಡರು.

ದಾಖಲೆಯ 50 ಸಿಕ್ಸರ್‌ಗಳು - ಕೇವಲ 23 ಎಸೆತಗಳಲ್ಲಿ ತಮ್ಮ ಹಾಫ್ ಸೆಂಚುರಿ ಪೂರೈಸಿದ ವೈಭವ್, ಐಪಿಎಲ್ 2026ರ ಸೀಸನ್‌ನಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಜುರೆಲ್ ಸಾಥ್ - ಮತ್ತೊಂದು ತುದಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಧ್ರುವ್ ಜುರೆಲ್ (ಈ ಸೀಸನ್‌ನ 5ನೇ ಅರ್ಧಶತಕ) ಜೊತೆಗೂಡಿ 100 ರನ್‌ಗಳ ಮಹತ್ವದ ಜೊತೆಯಾಟವಾಡಿದ ವೈಭವ್, ಇನ್ನು 7 ವಿಕೆಟ್‌ಗಳು ಬಾಕಿ ಇರುವಂತೆಯೇ ರಾಜಸ್ಥಾನ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮಿಚೆಲ್ ಮಾರ್ಷ್ 96 ರನ್ ವ್ಯರ್ಥ!

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ, ಜೋಶ್ ಇಂಗ್ಲಿಸ್ ಅವರ ಬಿರುಸಿನ ಆರಂಭ ಮತ್ತು ಮಿಚೆಲ್ ಮಾರ್ಷ್ ಅವರ ಭರ್ಜರಿ 96 ರನ್ (57 ಎಸೆತ) ನೆರವಿನಿಂದ 5 ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ರಾಜಸ್ಥಾನ್ ಪರ ಬೌಲಿಂಗ್‌ನಲ್ಲಿ ಯಶ್ ರಾಜ್ ಪುನಿಯಾ 35 ರನ್ ನೀಡಿ 2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಡೆತ್ ಓವರ್‌ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕಿ ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಪ್ಲೇಆಫ್ ರೇಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ - ಆರೆಂಜ್ ಕ್ಯಾಪ್ ಈಗ ವೈಭವ್ ಹೆಗಲಿಗೆ!

ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್ ತಲುಪುವ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಬರುವ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ, ಅಧಿಕೃತವಾಗಿ ಪ್ಲೇಆಫ್ ಟಿಕೆಟ್ ಸಿಗಲಿದೆ. ಈಗಾಗಲೇ ಟಾಪ್ 3 ತಂಡಗಳು ಕ್ವಾಲಿಫೈ ಆಗಿದ್ದು, ಕೊನೆಯ ಒಂದು ಸ್ಥಾನಕ್ಕಾಗಿ ರಾಜಸ್ಥಾನ್ ಬಲವಾದ ಪೈಪೋಟಿ ನಡೆಸುತ್ತಿದೆ.

ಇನ್ನು ಇಂದಿನ ಮ್ಯಾಚ್ ಮುಗಿದ ಬಳಿಕ ಐಪಿಎಲ್ 2026ರ ಆರೆಂಜ್ ಕ್ಯಾಪ್ (Orange Cap) ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ 579 ರನ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ;

ಪ್ರಸ್ತುತ ಆರೆಂಜ್ ಕ್ಯಾಪ್ ಟಾಪ್ 5 ಪಟ್ಟಿ;

ವೈಭವ್ ಸೂರ್ಯವಂಶಿ (RR) – 579 ರನ್

ಮಿಚೆಲ್ ಮಾರ್ಷ್ (GT) – 563 ರನ್

ಹೆನ್ರಿಚ್ ಕ್ಲಾಸೆನ್ (SRH) – 555 ರನ್

ಸಾಯಿ ಸುದರ್ಶನ್ (GT) – 554 ರನ್

ಶುಭಮನ್ ಗಿಲ್ (GT) – 508 ರನ್ 

Latest News

Related News