Feb 16, 2026 Languages : ಕನ್ನಡ | English

ಈ ವಾರ ಓಟಿಟಿಯಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟ ಸಿನಿಮಾಗಳು - ವೆಬ್ ಸೀರಿಸ್ ಪಟ್ಟಿ ಇಲ್ಲಿದೆ!!

ಈ ವಾರ ಸಿನಿರಸಿಕರಿಗೆ ಚಿತ್ರಮಂದಿರಗಳಲ್ಲಷ್ಟೇ ಅಲ್ಲ, ಓಟಿಟಿ ವೇದಿಕೆಗಳಲ್ಲೂ ಭರ್ಜರಿ ಮನರಂಜನೆ ಸಿಗಲಿದೆ. ‘ರಕ್ಕಸಪುರದೋಳ್’, ‘ಜೆಸಿ’ ಸೇರಿ ಹಲವು ಕನ್ನಡ ಸಿನಿಮಾಗಳು ತೆರೆಗೆ ಬರಲಿವೆ. ಇದೇ ವೇಳೆ, ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆರಂಭವಾಗುತ್ತಿವೆ. ವಾರದ ಆರಂಭದಲ್ಲೇ ಕೆಲವು ಕಂಟೆಂಟ್ ಬಿಡುಗಡೆಯಾಗಿದ್ದು, ಈಗ ಶುಕ್ರವಾರದಂದು ಸ್ಟಾರ್ ನಟರ ಚಿತ್ರಗಳು ಓಟಿಟಿಗೆ ಎಂಟ್ರಿ ಕೊಡುತ್ತಿವೆ. ಚಿತ್ರಮಂದಿರಗಳಲ್ಲಷ್ಟೇ ಅಲ್ಲ, ಓಟಿಟಿ ವೇದಿಕೆಗಳಲ್ಲೂ ಭರ್ಜರಿ ಮನರಂಜನೆ ಸಿಗಲಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳ ಇಂಟ್ರೆಸ್ಟಿಂಗ್ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್‌ಗೆ ಲಭ್ಯವಾಗುತ್ತಿವೆ. ವಾರದ ಆರಂಭದಲ್ಲೇ ಕೆಲವು ಕಂಟೆಂಟ್ ಬಿಡುಗಡೆಯಾಗಿದ್ದು, ಈಗ ಸ್ಟಾರ್ ನಟರ ಚಿತ್ರಗಳು ಓಟಿಟಿಗೆ ಎಂಟ್ರಿ ಕೊಡುತ್ತಿವೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಫೆಬ್ರವರಿ 6ರಿಂದ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. 

ಈ ವಾರದ ಓಟಿಟಿ ರಿಲೀಸ್
ಈ ವಾರದ ಓಟಿಟಿ ರಿಲೀಸ್

ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಪಡೆಯದಿದ್ದರೂ, ಓಟಿಟಿಯಲ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸುವ ಕುತೂಹಲ ಹೊಂದಿದ್ದಾರೆ. ಇನ್ನು 'ಸುಧಾ ಕೊಂಗರ' ನಿರ್ದೇಶನದ ತಮಿಳಿನ ಐತಿಹಾಸಿಕ ಸಿನಿಮಾ ‘ಪರಾಶಕ್ತಿ’ ಇಂದಿನಿಂದ 'ಜೀ5' ನಲ್ಲಿ ಬಿಡುಗಡೆಗೊಳ್ಳಲಿದೆ. ಶಿವಕಾರ್ತಿಕೇಯನ್, ರವಿ ಮೋಹನ್, ಅಥರ್ವ, ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಡಬ್ಬಿಂಗ್‌ನಲ್ಲೂ ಸಿನಿಮಾ ಲಭ್ಯವಿದೆ. ತೆಲುಗಿನ ರೊಮ್ಯಾಂಟಿಕ್ ಕಾಮಿಡಿ ‘ನಾರಿ ನಾರಿ ನಡುಮ ಮುರಾರಿ’ ಈಗಾಗಲೇ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತಿದ್ದು.

ಇದಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಲಿಂಕನ್ ಲಾಯರ್ ಸೀಸನ್-4', ಹಾಟ್‌ಸ್ಟರ್‌ನಲ್ಲಿ 'ಷಾಬಾದ್', ಸೋನಿ ಲಿವ್‌ನಲ್ಲಿ 'ಜಾಜ್ ಸಿಟಿ' ಸೇರಿದಂತೆ ಹಲವು ಹೊಸ ವೆಬ್ ಸೀರಿಸ್ ಮತ್ತು ಸಿನಿಮಾಗಳು ಬಿಡುಗಡೆಯಾಗಿವೆ. ಒಟ್ಟಿನಲ್ಲಿ ಈ ವಾರ ಓಟಿಟಿಯಲ್ಲಿ ಪ್ರತಿಯೊಬ್ಬ ಸಿನಿಪ್ರೇಮಿಗೂ ಇಷ್ಟವಾಗುವ ಮನರಂಜನೆಯ ಪ್ಯಾಕೇಜ್ ಸಿದ್ಧವಾಗಿದೆ ಎನ್ನಬಹುದು. ಒಟ್ಟಿನಲ್ಲಿ, ಈ ವಾರ ಚಿತ್ರಮಂದಿರ + ಓಟಿಟಿ ಎರಡೂ ಕಡೆ ಪ್ರೇಕ್ಷಕರಿಗೆ ಡಬಲ್ ಎಂಟರ್ಟೈನ್ಮೆಂಟ್ ಖಚಿತ. 

ಹಾಟ್‌ಸ್ಟರ್

  • ಷಾಬಾದ್ (ಹಿಂದಿ ವೆಬ್ ಸೀರಿಸ್) – ಫೆಬ್ರವರಿ 6

ನೆಟ್‌ಫ್ಲಿಕ್ಸ್

  • ದಿ ಲಿಂಕನ್ ಲಾಯರ್ ಸೀಸನ್-4 (ವೆಬ್ ಸೀರಿಸ್) – ಫೆಬ್ರವರಿ 5
  • ಕ್ವೀನ್ ಆಫ್ ಚೆಸ್ (ಇಂಗ್ಲೀಷ್ ಸಿನಿಮಾ) – ಫೆಬ್ರವರಿ 6
  • ಸಲ್ವಾಡಾರ್ (ಸ್ಪ್ಯಾನಿಷ್ ಸಿನಿಮಾ) – ಫೆಬ್ರವರಿ 6
  • ಕ್ಯಾಶ್‌ಕ್ವೀನ್ಸ್ (ವೆಬ್ ಸೀರಿಸ್) – ಫೆಬ್ರವರಿ 5

ಅಮೇಜಾನ್ ಪ್ರೈಮ್

  • ಪೆಂಡಿಂಗ್ ಹಾರ್ಮೊನಿ (ಇಂಗ್ಲೀಷ್ ಸಿನಿಮಾ) – ಫೆಬ್ರವರಿ 6
  • ರಿಲೇಷನ್‌ಶಿಪ್ ಗೋಲ್ಸ್ (ಇಂಗ್ಲೀಷ್ ಸಿನಿಮಾ) – ಫೆಬ್ರವರಿ 4
  • ಎಲ್‌ಓಎಲ್ (ಇಂಗ್ಲೀಷ್ ವೆಬ್ ಸೀರಿಸ್) – ಫೆಬ್ರವರಿ 6

ಸನ್‌ ನೆಕ್ಸ್ಟ್

  • ನೀಲಕಂಠ (ತೆಲುಗು ಸಿನಿಮಾ) – ಫೆಬ್ರವರಿ 6 

ಆಹಾ OTT

  • ಸೈಕ್ ಸಿದ್ಧಾರ್ಥ (ತೆಲುಗು ಸಿನಿಮಾ) – ಫೆಬ್ರವರಿ 4

ಸೋನಿ ಲಿವ್

  • ಜಾಜ್ ಸಿಟಿ (ಹಿಂದಿ ವೆಬ್ ಸೀರಿಸ್) – ಫೆಬ್ರವರಿ 6

Latest News