Feb 16, 2026 Languages : ಕನ್ನಡ | English

ಎಲ್ಲರ ಹುಬ್ಬೇರಿಸಿದ ‘ಕಿಂಗ್’ ಟೀಸರ್ - 'ಲೂಸ್ ಮಾದ ಯೋಗಿ' ರಗಡ್ ಎಂಟ್ರಿಗೆ ಫಿದಾ ಆದ ಫ್ಯಾನ್ಸ್!!

ಕನ್ನಡದ ಪ್ರತಿಭಾನ್ವಿತ ಕಲಾವಿದ ಹಾಗೂ ಅದ್ಭುತ ನಟ ಅಂದರೆ, ಅದು ನಟ ಲೂಸ್ ಮಾದ ಯೋಗಿ ಎಂದು ಹೇಳಬಹುದು. ತಮ್ಮ ಅಭಿನಯ ಜೀವನದಲ್ಲಿ 50ನೇ ಸಿನಿಮಾದತ್ತ ಇದೀಗ ಅವ್ರು ಕಾಲಿಟ್ಟಿದ್ದಾರೆ. ದುನಿಯಾ ಸಿನಿಮಾದಲ್ಲಿ ‘ಲೂಸ್ ಮಾದ’ ಅನ್ನೋ ಸಣ್ಣ ಪಾತ್ರದಿಂದ ಆರಂಭವಾದ ಅವರ ಜರ್ನಿ, ಇಂದು ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುವ ಮಟ್ಟಿಗೆ ಬೆಳೆದಿದೆ.

ಯೋಗಿ 50ನೇ ಸಿನಿಮಾ ‘ಕಿಂಗ್’
ಯೋಗಿ 50ನೇ ಸಿನಿಮಾ ‘ಕಿಂಗ್’

ಯೋಗಿ ಅವರ 50ನೇ ಸಿನಿಮಾ ‘ಕಿಂಗ್’ ಈಗಾಗಲೇ ಭರ್ಜರಿ ಚರ್ಚೆಗೆ ಕಾರಣವಾಗಿದೆ. ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಟೀಸರ್‌ನ ಕ್ವಾಲಿಟಿ ಎಲ್ಲರನ್ನೂ ಹುಬ್ಬೇರಿಸುವ ಮಟ್ಟಿಗೆ ಬಂದಿದ್ದು, ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರೋದಂತೂ ನಿಜ. ಈ ಟೀಸರ್‌ಗೆ ಕನ್ನಡದ ಶಿವಣ್ಣ, ತಮಿಳಿನ ವಿಜಯ್ ಸೇತುಪತಿ, ನಿರ್ದೇಶಕ ಪ. ರಂಜಿತ್, ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. 

ಇದರಿಂದ ಸಿನಿಮಾ ಕೇವಲ ಕನ್ನಡದಲ್ಲೇ ಅಲ್ಲ, ದಕ್ಷಿಣ ಭಾರತದ ಚಿತ್ರರಂಗದಲ್ಲೂ ಗಮನ ಸೆಳೆದಿದೆ. ಯೋಗಿ ಅವರ ಅಭಿನಯ ಶೈಲಿ, ವಿಭಿನ್ನ ಪಾತ್ರಗಳ ಆಯ್ಕೆ ಮತ್ತು ಪ್ರೇಕ್ಷಕರ ಮನ ಗೆಲ್ಲುವ ಸಾಮರ್ಥ್ಯದಿಂದ ಅವರು ಕನ್ನಡದ ಪ್ರಮುಖ ನಟರಾಗಿ ಹೊರಹೊಮ್ಮಿದ್ದಾರೆ. 50ನೇ ಸಿನಿಮಾ ‘ಕಿಂಗ್’ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಚಿತ್ರದ ಕಥೆ, ಪಾತ್ರಗಳು ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಆದರೆ ಟೀಸರ್‌ನಿಂದಲೇ ಸಿನಿಮಾ ಭರ್ಜರಿ ಮಟ್ಟದಲ್ಲಿ ತಯಾರಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಿನಲ್ಲಿ ಹೇಳಬೇಕು ಅಂದರೆ, ಲೂಸ್ ಮಾದ ಯೋಗಿ ಅವರ 50ನೇ ಸಿನಿಮಾ ‘ಕಿಂಗ್’ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ಈಗಾಗಲೇ ಚಿತ್ರದ ಬಿಡುಗಡೆಯನ್ನು ಕಾತರದಿಂದ ಕಾಯುತ್ತಿದ್ದಾರೆ. ಅವರಿಗೆ ಈ ಸಿನಿಮಾ ಹೆಚ್ಚೆಚ್ಚು ಯಶಸ್ಸು ತಂದು ಕೊಡಲಿ ಎಂದು ಆಶಿಸೋಣ.  

Latest News