Apr 17, 2026 Languages : ಕನ್ನಡ | English

ಹೆಣ್ಣು ಮಗು ಎಂಬ ದ್ವೇಷಕ್ಕೆ ಹೆಂಡತಿ, ಮಕ್ಕಳನ್ನೇ ಬಲಿ ಕೊಟ್ಟ ಪಾಪಿ ತಂದೆ - ಅದೆಂಥಹ ಕೃತ್ಯ ಮಾಡಿದ್ದಾನೆ ನೋಡಿ!!

ನಾವು ಎಷ್ಟೇ ಮುಂದುವರಿದಿದ್ದೀವಿ, ಹೆಣ್ಣು ಮಕ್ಕಳು ಇವತ್ತು ಚಂದ್ರನ ಮೇಲೆ ಕಾಲಿಡ್ತಿದ್ದಾರೆ ಅಂತ ಹೆಮ್ಮೆಯಿಂದ ಹೇಳ್ತೀವಿ. ಆದ್ರೆ ಇಂದಿಗೂ ಸಮಾಜದಲ್ಲಿ ಹೆಣ್ಣು ಮಗು ಅಂದ್ರೆ ಕಸ ಅಂತ ಕಾಣೋ ಕೆಲವು ರಾಕ್ಷಸರು ಇದ್ದಾರೆ ಅನ್ನೋದಕ್ಕೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ 'ಹೆಣ್ಣು ಮಗು' ಎಂಬ ಕಾರಣಕ್ಕೆ ತನ್ನ ಗರ್ಭಿಣಿ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಈ ಪಾಪಿ ತಂದೆ ಬಲಿ ಕೊಟ್ಟಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಲಿಂಗ ತಾರತಮ್ಯದ ಹೆಸರಿನಲ್ಲಿ ನಡೆದ ಭೀಕರ ಘಟನೆ – ವಾರಂಗಲ್ ಶಾಕ್!! | Photo Credit: https://x.com/HateDetectors
ಲಿಂಗ ತಾರತಮ್ಯದ ಹೆಸರಿನಲ್ಲಿ ನಡೆದ ಭೀಕರ ಘಟನೆ – ವಾರಂಗಲ್ ಶಾಕ್!! | Photo Credit: https://x.com/HateDetectors

ವಾರಂಗಲ್‌ನ ಪುನ್ನೋಲ್ ಗ್ರಾಮದಲ್ಲಿ ಇವತ್ತು ಬೆಳಿಗ್ಗೆ ಒಂದು ಭಯಾನಕ ದೃಶ್ಯ ಕಂಡಿದೆ. ಒಂದು ಖಾಸಗಿ ರಿಯಲ್ ಎಸ್ಟೇಟ್ ಲೇಔಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ 26 ವರ್ಷದ ಫರ್ಹಾನಾ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ಉಮೇರಾ (9) ಹಾಗೂ ಆಯೇಷಾ (5) ಅವರ ಶ*ವಗಳು ತೇಲುತ್ತಿದ್ದವು. ಮೊದಲ ನೋಟಕ್ಕೆ ಇದು ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿರಬಹುದು ಅಂತ ಅನಿಸಿದ್ರೂ, ಇದರ ಹಿಂದೆ ಅಡಗಿರೋ ಅಸಲಿ ಕಥೆ ಕೇಳಿದ್ರೆ ನಿಮ್ಮ ರಕ್ತ ಕುದಿಯೋದು ಗ್ಯಾರಂಟಿ.

ಫರ್ಹಾನಾ ಅವರ ತಂದೆ ಶೇಖ್ ಅಲಿ ಪೊಲೀಸರಿಗೆ ನೀಡಿರೋ ದೂರಿನ ಪ್ರಕಾರ, ಆರೋಪಿ ಅಜರುದ್ದೀನ್ (ಸಿಮೆಂಟ್ ಇಟ್ಟಿಗೆ ಕಾರ್ಖಾನೆ ಮಾಲೀಕ) ತನ್ನ ಮಗಳ ಹುಟ್ಟುಹಬ್ಬ ಆಚರಿಸೋಣ ಬಾ ಅಂತ ಹೆಂಡತಿ ಮಕ್ಕಳನ್ನ ಈ ಖಾಸಗಿ ಲೇಔಟ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಏನು ನಡೀತು ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ಬೆಳಿಗ್ಗೆ ಎದ್ದು ತನ್ನ ಕುಟುಂಬದವರೆಲ್ಲಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು ಸತ್ತಿದ್ದಾರೆ ಅಂತ ನಾಟಕ ಆಡೋಕೆ ಶುರು ಮಾಡಿದ್ದಾನೆ.

ಅಜರುದ್ದೀನ್ ಇದನ್ನ ಆಕಸ್ಮಿಕ ಸಾವು ಅಂತ ಬಿಂಬಿಸೋಕೆ ಟ್ರೈ ಮಾಡಿದ್ರೂ, ಸ್ಥಳಕ್ಕೆ ಬಂದ ಸಂಬಂಧಿಕರಿಗೆ ಅನುಮಾನ ಶುರುವಾಗಿದೆ. ಯಾಕಂದ್ರೆ ಸ*ತ್ತಿದ್ದವರ ಬಾಯಲ್ಲಿ ನೊರೆ ಬರ್ತಿತ್ತು. ತಕ್ಷಣ ಇನವೋಲು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರು ಬಂದು ಶ*ವಗಳನ್ನ ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ಸಾಗಿಸಿದ್ದಾರೆ, ಆದ್ರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಅಂತ ಡಾಕ್ಟರ್ ಹೇಳಿದ್ದಾರೆ.

ಫರ್ಹಾನಾ ಅವರ ತಂದೆ ನೀಡಿರೋ ದೂರು ಕೇಳಿದ್ರೆ ಮೈ ಜುಂ ಎನ್ನುತ್ತೆ. ಅಜರುದ್ದೀನ್ ಮೊದಲಿಂದಲೂ ಹೆಣ್ಣು ಮಕ್ಕಳು ಅಂದ್ರೆ ಕಿರಿಕಿರಿ ಮಾಡ್ತಿದ್ದನಂತೆ. ಫರ್ಹಾನಾ ಈಗ ಮತ್ತೆ ಗರ್ಭಿಣಿಯಾಗಿದ್ದರು. ಕಾನೂನುಬಾಹಿರವಾಗಿ ಲಿಂಗ ಪತ್ತೆ ಪರೀಕ್ಷೆ ಮಾಡಿಸಿದ್ದ ಈತ, ಈ ಬಾರಿಯೂ ಹೆಣ್ಣು ಮಗು ಹುಟ್ಟುತ್ತೆ ಅಂತ ತಿಳಿದ ಮೇಲೆ ಪತ್ನಿಗೆ ಕಿರುಕುಳ ಕೊಡೋಕೆ ಶುರು ಮಾಡಿದ್ದ. ಅಷ್ಟೇ ಅಲ್ಲ, ಈ ಹಿಂದೆ ಎರಡು ಬಾರಿ ಹೆಣ್ಣು ಮಗು ಅಂತ ಗೊತ್ತಾದ ಮೇಲೆ ಫರ್ಹಾನಾಗೆ ಬಲವಂತವಾಗಿ ಅಬಾರ್ಷನ್ ಕೂಡ ಮಾಡಿಸಿದ್ದನಂತೆ.

ಈಗ ಮೂರನೇ ಮಗುವೂ ಹೆಣ್ಣು ಅಂತ ಗೊತ್ತಾದ ತಕ್ಷಣ, ಪತ್ನಿ ಮತ್ತು ಮೊದಲ ಇಬ್ಬರು ಹೆಣ್ಣು ಮಕ್ಕಳನ್ನೇ ಮುಗಿಸಿಬಿಡೋಕೆ ಈತ ಪ್ಲಾನ್ ಮಾಡಿದ್ದ ಅನ್ನೋದು ತಂದೆಯ ಆರೋಪ. "ನನ್ನ ಮಗಳು ಮತ್ತು ಮೊಮ್ಮಕ್ಕಳನ್ನ ಈತನೇ ಕೊ*ಲೆ ಮಾಡಿ ಆಕ್ಸಿಡೆಂಟ್ ತರಹ ತೋರಿಸ್ತಿದ್ದಾನೆ" ಅಂತ ಅವರು ಕಣ್ಣೀರಿಟ್ಟಿದ್ದಾರೆ.

ಪೊಲೀಸ್ ತನಿಖೆ ಮತ್ತು ಮುಂದಿನ ಕ್ರಮ: ವಾರಂಗಲ್ ಪೊಲೀಸ್ ಕಮಿಷನರ್ ಸುನ್‌ಪ್ರೀತ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೈಂಟಿಫಿಕ್ ಅನಾಲಿಸಿಸ್ ಮಾಡಿ ಸಾವಿಗೆ ಅಸಲಿ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚಿ ಅಂತ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಅಜರುದ್ದೀನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಬಂದ ಮೇಲೆ ಈ ಕ್ರೂರಿ ಹೆಂಡತಿ ಮಕ್ಕಳನ್ನ ನೀರಿಗೆ ತಳ್ಳಿ ಕೊಂ*ದಿದ್ದಾನಾ ಅಥವಾ ಬೇರೆ ಏನಾದ್ರೂ ಮಾಡಿದ್ದಾನಾ ಅನ್ನೋದು ಗೊತ್ತಾಗಲಿದೆ.

ಮಕ್ಕಳು ಅಂದ್ರೆ ದೇವರ ಸಮಾನ, ಅದರಲ್ಲಿ ಹೆಣ್ಣು ಗಂಡು ಅನ್ನೋ ಭೇದ ಭಾವ ಇವತ್ತಿನ ಕಾಲದಲ್ಲೂ ಇರೋದು ಸಮಾಜದ ದೌರ್ಭಾಗ್ಯ. ಲಿಂಗ ಪತ್ತೆ ಮಾಡೋದು ಕಾನೂನು ಪ್ರಕಾರ ಅಪರಾಧ ಅಂತ ಗೊತ್ತಿದ್ರೂ ಇಂತಹ ಕೃತ್ಯಗಳು ನಡೀತಾನೆ ಇವೆ. ಈ ಕೇಸ್‌ನಲ್ಲಿ ಆರೋಪ ಸಾಬೀತಾದ್ರೆ ಈ ರಾಕ್ಷಸನಿಗೆ ಕಠಿಣ ಶಿಕ್ಷೆ ಆಗಲೇಬೇಕು. ಇಂತಹ ಸುದ್ದಿಗಳು ನಮಗೆ ಕೇವಲ ಮಾಹಿತಿಯಲ್ಲ, ಸಮಾಜ ಎತ್ತ ಸಾಗ್ತಿದೆ ಅನ್ನೋ ಎಚ್ಚರಿಕೆ ಕೂಡ. ನಿಮ್ಮ ಸುತ್ತಮುತ್ತ ಇಂತಹ ಲಿಂಗ ತಾರತಮ್ಯ ಅಥವಾ ಕಿರುಕುಳ ಕಂಡುಬಂದ್ರೆ ದಯವಿಟ್ಟು ಸುಮ್ಮನಿರಬೇಡಿ, ಪೊಲೀಸರಿಗೆ ಮಾಹಿತಿ ನೀಡಿ. ಈ ಮನಕಲಕುವ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ ತಿಳಿಸಿ.

Latest News