ನಾವು ಸಾಮಾನ್ಯವಾಗಿ 'ನನ್ನ ಫ್ರೆಂಡ್ಸ್ ಇದ್ದಾರಲ್ಲ, ಅವರು ನನ್ನ ಪ್ರಾಣ' ಅಂತ ಹೇಳ್ತಿವಿ. ಆದರೆ ಅದೇ ಗೆಳೆಯರು ನಮಗೆ ಎಂತಹ ಮೋಸ ಮಾಡಬಹುದು ಅನ್ನೋದಕ್ಕೆ ಮೆಕ್ಸಿಕೋದಲ್ಲಿ ನಡೆದ ಈ ಘಟನೆ ಸಾಕ್ಷಿ. ಕೇವಲ ಒಬ್ಬ ಹುಡುಗನ ಮೇಲಿನ ಹೊಟ್ಟೆಕಿಚ್ಚಿಗಾಗಿ ಇಬ್ಬರು ಹುಡುಗಿಯರು ತಮ್ಮದೇ ಪ್ರಾಣ ಗೆಳತಿಯನ್ನು ಕೊಂ*ದ ರೀತಿ ಕೇಳಿದರೆ, ಮನುಷ್ಯತ್ವ ಎಲ್ಲಿಗೆ ಹೋಗ್ತಿದೆ ಅಂತ ಅನ್ಸುತ್ತೆ.
ಮೆಕ್ಸಿಕೋದ ಸೋನೋಯ್ಟಾ ಎಂಬಲ್ಲಿ 15 ವರ್ಷದ ಲೈಲಾ ಎಂಬ ಹುಡುಗಿ ಇದ್ದಳು. ಆಕೆಗೆ ಇಬ್ಬರು ಆಪ್ತ ಗೆಳತಿಯರಿದ್ದರು (ಒಬ್ಬಳಿಗೆ 13 ವರ್ಷ, ಇನ್ನೊಬ್ಬಳಿಗೆ 15 ವರ್ಷ). ಒಂದು ದಿನ ಈ ಇಬ್ಬರು ಗೆಳತಿಯರು ಲೈಲಾಗೆ ಫೋನ್ ಮಾಡಿ, ನಿನಗೊಂದು ಸರ್ಪ್ರೈಸ್ ಇದೆ, ನಮ್ಮ ಮನೆಗೆ ಬಾ ಅಂತ ಕರೀತಾರೆ. ಪಾಪ, ಲೈಲಾ ತನ್ನ ಗೆಳತಿಯರನ್ನು ನಂಬಿ ಅಲ್ಲಿಗೆ ಹೋಗ್ತಾಳೆ.
ಆದರೆ ಅಲ್ಲಿ ಕಾದಿದ್ದ ಸರ್ಪ್ರೈಸ್ ಭಯಾನಕವಾಗಿತ್ತು. ಆ ಇಬ್ಬರು ಹುಡುಗಿಯರು ಲೈಲಾಳನ್ನು ಒಂದು ಕುರ್ಚಿಗೆ ಕಟ್ಟಿ ಹಾಕಿ, ಕಣ್ಣಿಗೆ ಬಟ್ಟೆ ಕಟ್ಟುತಾರೆ. ಏನೋ ಆಟ ಆಡ್ತಿದ್ದಾರೆ ಅಂತ ಲೈಲಾ ಅಂದುಕೊಂಡಿರುವಾಗಲೇ, ಅವಳ ಕುತ್ತಿಗೆಗೆ ಹಗ್ಗ ಹಾಕಿ ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟೇ ಆಗಿದ್ದರೆ ಇದೊಂದು ಕೊ*ಲೆ ಅಂತ ಸುಮ್ಮನಾಗಬಹುದಿತ್ತು. ಆದರೆ ಅವರು ಈ ಕೊ*ಲೆ ಮಾಡುವುದನ್ನು ಪೂರ್ತಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ನಂತರ ಲೈಲಾಳ ಶ*ವವನ್ನು ಹಿತ್ತಲಲ್ಲಿ ಹೂತು ಹಾಕ್ತಾರೆ.
ಕೊ*ಲೆ ಮಾಡಿದ ಎರಡೇ ದಿನಕ್ಕೆ ಆ ರಾಕ್ಷಸಿಯರು ಆ ವಿಡಿಯೋವನ್ನು ಲೈಲಾ ಪೋಷಕರಿಗೇ ಕಳುಹಿಸುತ್ತಾರೆ. ತಮ್ಮ ಮಗಳು ಗೆಳತಿಯರ ಕೈಯಲ್ಲೇ ಉಸಿರು ಚೆಲ್ಲುವುದನ್ನು ನೋಡಿದ ಆ ತಂದೆ-ತಾಯಿಯ ಸ್ಥಿತಿ ಹೇಗಾಗಿರಬೇಡ ಯೋಚಿಸಿ. ಈ ಪ್ರಕರಣ ಇಡೀ ವಿಶ್ವದ ಗಮನ ಸೆಳೆಯಿತು. ಈ ಘೋರ ಕೃತ್ಯಕ್ಕೆ ಕಾರಣ ಏನಿತ್ತು ಗೊತ್ತಾ? ಕೇವಲ ಒಬ್ಬ ಹುಡುಗನ ವಿಚಾರದಲ್ಲಿ ಲೈಲಾ ಮೇಲೆ ಇವರಿಗೆ ಇದ್ದ ಹೊಟ್ಟೆಕಿಚ್ಚು ಎಂದು ತಿಳಿದುಬಂದಿದೆ.
ಈ ಕೇಸ್‌ನಲ್ಲಿ ಜಗತ್ತನ್ನು ಇನ್ನಷ್ಟು ಕೋಪಕ್ಕೆ ಗುರಿ ಮಾಡಿದ್ದು ಅಲ್ಲಿನ ಕಾನೂನು ನೀಡಿದ ಶಿಕ್ಷೆ. ಈ ಘೋರ ಕೊ*ಲೆ ಮಾಡಿದ ಒಬ್ಬಳಿಗೆ ಸಿಕ್ಕಿದ್ದು ಕೇವಲ 2 ವರ್ಷ 10 ತಿಂಗಳು ಜೈಲು, ಇನ್ನೊಬ್ಬಳಿಗೆ ಕೇವಲ 11 ತಿಂಗಳು ಎನ್ನಲಾಗುತ್ತಿದೆ. ಹೌದು, ಅರೋಪಿಗಳು ಅಪ್ರಾಪ್ತರು (Minors) ಎಂಬ ಕಾರಣಕ್ಕೆ ಕಾನೂನು ಇಷ್ಟು ಕಡಿಮೆ ಶಿಕ್ಷೆ ನೀಡಿತು. ಸರ್ಕಾರ ನೀಡಿದ ಸಣ್ಣ ಮೊತ್ತದ ಪರಿಹಾರವನ್ನೂ ಲೈಲಾ ಕುಟುಂಬ ತಿರಸ್ಕರಿಸಿತು. "ನಮ್ಮ ಮಗಳ ಪ್ರಾಣಕ್ಕೆ ಇಷ್ಟೇನಾ ಬೆಲೆ?" ಎನ್ನುವುದು ಅವರ ನೋವಿನ ಪ್ರಶ್ನೆ.
ಇಂತಹ ಘಟನೆಗಳು ನಡೆದಾಗ ನಮಗೆ ಭಾರತದ ದೆಹಲಿ 'ನಿರ್ಭಯಾ' ಕೇಸ್ ನೆನಪಾಗುತ್ತೆ. ಅಲ್ಲೂ ಕೂಡ ಅತ್ಯಂತ ಕ್ರೂರವಾಗಿ ವರ್ತಿಸಿದ ಆರೋಪಿ ಅಪ್ರಾಪ್ತನಾಗಿದ್ದ ಎಂಬ ಕಾರಣಕ್ಕೆ ಕೆಲವೇ ವರ್ಷಗಳಲ್ಲಿ ಬಿಡುಗಡೆಯಾದ. ಅಪ್ರಾಪ್ತರು ಎನ್ನುವ ಕಾರಣಕ್ಕೆ ಇಷ್ಟು ಕ್ರೂರ ಕೃತ್ಯ ಎಸಗಿದವರಿಗೂ ರಕ್ಷಣೆ ಸಿಗಬೇಕಾ?
ಕಾನೂನು ಹೇಳುವ ಪ್ರಕಾರ, ಮಗು ಮತ್ತು ದೊಡ್ಡವರ ನಡುವೆ ತಿಳುವಳಿಕೆಯಲ್ಲಿ ವ್ಯತ್ಯಾಸ ಇರುತ್ತೆ. ಆದರೆ ಹಗ್ಗದಿಂದ ಕುತ್ತಿಗೆ ಹಿಸುಕಿ, ವಿಡಿಯೋ ಮಾಡಿ, ಹೂತು ಹಾಕುವಷ್ಟು ಕ್ರೌರ್ಯ ಇರುವವರು "ಅಪ್ರಾಪ್ತರು" ಅನ್ಸಿಕೊಳ್ಳುತ್ತಾರಾ? ಇಂತಹ ಶಿಕ್ಷೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ. ಕ್ರಿಮಿನಲ್ ಬುದ್ಧಿ ಇರುವವರಿಗೆ ವಯಸ್ಸಿನ ಮಿತಿ ಇರುವುದಿಲ್ಲ ಅನ್ನೋದಕ್ಕೆ ಈ ಲೈಲಾ ಪ್ರಕರಣವೇ ಸಾಕ್ಷಿ.
🚨 Heartless Mexico : Betrayal of Friendship That Shocked the Whole World!
— Ramesh Tiwari (@rameshofficial0) April 8, 2026
15-year-old Leyla was lured by her two friends (13 & 15) in Sonoyta, Sonora, Mexico under the pretext of a "surprise". They tied her to a chair, blindfolded her, strangled her with a rope while recording… pic.twitter.com/fiDeHkID6n
ನಮ್ಮ ದೇಶದಲ್ಲೂ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ನಿಮ್ಮ ಪ್ರಕಾರ, ಅಪ್ರಾಪ್ತರು ಇಂತಹ ಘೋರ ಕೊ*ಲೆ ಮಾಡಿದಾಗ ಅವರಿಗೆ ದೊಡ್ಡವರಂತೆಯೇ ಕಠಿಣ ಶಿಕ್ಷೆ ನೀಡಬೇಕಾ ಅಥವಾ ಬೇಡವಾ? ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.