May 4, 2026 Languages : ಕನ್ನಡ | English

50 ವರ್ಷಗಳ ಇತಿಹಾಸ ಅಳಿಸಿ ಹಾಕಿದ ವಿಜಯ್ - 2026ರ ಫಲಿತಾಂಶದಲ್ಲಿ ದಳಪತಿ ಸೃಷ್ಟಿಸಿದ ಸುನಾಮಿ!!

ತಮಿಳುನಾಡು ವಿಧಾನಸಭಾ ಚುನಾವಣೆಯ ರಿಸಲ್ಟ್ ಅಂದ್ರೆ ಯಾವಾಗಲೂ ಹೈ-ವೋಲ್ಟೇಜ್ ಇರುತ್ತೆ. ಆದ್ರೆ ಈ ಬಾರಿ ಅದು ಕೇವಲ ಹೈ-ವೋಲ್ಟೇಜ್ ಅಷ್ಟೇ ಅಲ್ಲ, ಸುನಾಮಿಯಾಗಿ ಬದಲಾಗಿದೆ! ಸೂಪರ್ ಸ್ಟಾರ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮೊದಲ ಎಲೆಕ್ಷನ್‌ನಲ್ಲೇ ಇಡೀ ರಾಜ್ಯದ ರಾಜಕೀಯ ನಕ್ಷೆಯನ್ನೇ ತಿರುಗಿ ಬರೆಯುತ್ತಿದೆ.

ತಮಿಳುನಾಡು ಅಖಾಡದಲ್ಲಿ ದಳಪತಿ ದರ್ಬಾರ್ | Photo Credit: https://x.com/TVKVijayHQ
ತಮಿಳುನಾಡು ಅಖಾಡದಲ್ಲಿ ದಳಪತಿ ದರ್ಬಾರ್ | Photo Credit: https://x.com/TVKVijayHQ

ಆ ಸಮೀಕ್ಷೆ ನಿಜವಾಯ್ತಾ? 90ರ ಗಡಿಯತ್ತ ದಳಪತಿ!

ಚುನಾವಣೆಗೂ ಮುನ್ನ 'ಆಕ್ಸಿಸ್ ಮೈ ಇಂಡಿಯಾ' ಸೇರಿದಂತೆ ಕೆಲವೊಂದು ಸಮೀಕ್ಷೆಗಳು ವಿಜಯ್ ಅವರ ಪಕ್ಷ ದೊಡ್ಡ ಮಟ್ಟದ ಸದ್ದು ಮಾಡಲಿದೆ ಅಂತ ಹೇಳಿದ್ದವು. ಆಗ ಬಹುತೇಕರು ಇದನ್ನ ನಂಬಿರಲಿಲ್ಲ. ಆದ್ರೆ ಈಗಿನ ಟ್ರೆಂಡ್ ನೋಡಿದ್ರೆ ಆ ಭವಿಷ್ಯ ನಿಜವಾಗುವ ಎಲ್ಲಾ ಲಕ್ಷಣಗಳು ಕಾಣ್ತಿವೆ.

  • ಆರಂಭಿಕ ಮತ ಎಣಿಕೆಯಲ್ಲಿ ಟಿವಿಕೆ ಪಕ್ಷ ಬರೊಬ್ಬರಿ 73 ರಿಂದ 91 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
  • ಕೆಲವು ಕ್ಷೇತ್ರಗಳಲ್ಲಂತೂ ಡಿಎಂಕೆ ಮತ್ತು ಎಐಎಡಿಎಂಕೆ ಅಭ್ಯರ್ಥಿಗಳು ವಿಜಯ್ ಅವರ ಪಕ್ಷದ ವೇಗಕ್ಕೆ ಮಂಕಾಗಿದ್ದಾರೆ.
  • ಸದ್ಯದ ಪರಿಸ್ಥಿತಿ ನೋಡಿದ್ರೆ ವಿಜಯ್ ಅವರ ಟಿವಿಕೆ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ದಾರಿಯಲ್ಲಿದೆ.

'ದ್ವಿಧ್ರುವಿ' ರಾಜಕೀಯಕ್ಕೆ ಎಂಡ್ ಕಾರ್ಡ್?

ತಮಿಳುನಾಡು ಅಂದ್ರೆ ಕಳೆದ 50 ವರ್ಷಗಳಿಂದ ಡಿಎಂಕೆ ಅಥವಾ ಎಐಎಡಿಎಂಕೆ ನಡುವೆ ಮಾತ್ರ ಫೈಟ್ ಇರ್ತಿತ್ತು. ಆದ್ರೆ ಈ ಬಾರಿ ವಿಜಯ್ ಆ ಸಂಪ್ರದಾಯವನ್ನೇ ಬ್ರೇಕ್ ಮಾಡಿದ್ದಾರೆ.

ಯುವಕರ ಜೈಕಾರ: 18 ರಿಂದ 25 ವರ್ಷದ ಯುವ ಮತದಾರರು ಗುಂಪಾಗಿ ಹೋಗಿ ವಿಜಯ್ ಪರವಾಗಿ ವೋಟ್ ಹಾಕಿರೋದು ರಿಸಲ್ಟ್‌ನಲ್ಲಿ ಕಾಣ್ತಿದೆ.

ಬದಲಾವಣೆಯ ಗಾಳಿ: ಹಳೆಯ ವ್ಯವಸ್ಥೆಯಿಂದ ಬೇಸತ್ತಿದ್ದ ಜನರಿಗೆ ವಿಜಯ್ ಅವರ 'ವೆಟ್ರಿ ಕಳಗಂ' ಹೊಸ ಆಶಾಕಿರಣವಾಗಿ ಕಂಡಿದೆ. ಸಿನಿಮಾ ಸ್ಟಾರ್ ಆಗಿ ಮಾತ್ರವಲ್ಲದೆ, ಒಬ್ಬ ಪಕ್ಕಾ ಲೀಡರ್ ಆಗಿ ವಿಜಯ್ ಜನಮನ ಗೆದ್ದಿದ್ದಾರೆ.

ಮುಂದಿನ ಸಿಎಂ ದಳಪತಿ ವಿಜಯ್?

ಈಗ ಎಲ್ಲರ ಬಾಯಲ್ಲಿರೋ ಪ್ರಶ್ನೆ ಒಂದೇ - "ದಳಪತಿ ವಿಜಯ್ ತಮಿಳುನಾಡಿನ ಮುಂದಿನ ಸಿಎಂ ಆಗ್ತಾರಾ?". ಒಂದು ವೇಳೆ ಟ್ರೆಂಡ್ ಹೀಗೆಯೇ ಮುಂದುವರಿದು, ವಿಜಯ್ ಮ್ಯಾಜಿಕ್ ನಂಬರ್ ತಲುಪಿದ್ರೆ ತಮಿಳುನಾಡು ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗಳಾಗಲಿವೆ. ಪಕ್ಷ ಕಟ್ಟಿ ಕೇವಲ ಎರಡು ವರ್ಷಕ್ಕೆ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರೋದು ಭಾರತೀಯ ರಾಜಕೀಯದಲ್ಲೇ ಅಪರೂಪದ ಸಂಗತಿ.

ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ಈಗಲೇ ಬೆವರುತ್ತಿದ್ದಾರೆ. ವಿಜಯ್ ಅವರ ಈ 'ವಿಜಯ'ಯಾತ್ರೆ ಕೇವಲ ಆರಂಭವೋ ಅಥವಾ ಪೂರ್ಣ ಪ್ರಮಾಣದ ಅಧಿಕಾರವೋ ಅನ್ನೋದು ಸಂಜೆ ಹೊತ್ತಿಗೆ ಪಕ್ಕಾ ಆಗಲಿದೆ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಇಂದಿನಿಂದ 'ವಿಜಯ ಯುಗ' ಅಧಿಕೃತವಾಗಿ ಆರಂಭವಾದಂತಿದೆ. ಸ್ಟಾಲಿನ್ ಮತ್ತು ಪಳನಿಸ್ವಾಮಿ ಅವರ ಎದುರು ದಳಪತಿ ಒಬ್ಬ ರಿಯಲ್ ಲೈಫ್ 'ಮಾಸ್ ಹೀರೋ' ಆಗಿ ಹೊರಹೊಮ್ಮಿದ್ದಾರೆ!

Latest News