Apr 23, 2026 Languages : ಕನ್ನಡ | English

ಬರೀ ವೋಟ್ ಅಲ್ಲ ಇದು ಹಬ್ಬ - ಚೆನ್ನೈನ ಮತಗಟ್ಟೆಗಳ ಮುಂದೆ ಸಿನಿಮಾ ಸ್ಟಾರ್‌ಗಳ ದಂಡು!!

ಇವತ್ತು ತಮಿಳುನಾಡಿನಲ್ಲಿ ಎಲೆಕ್ಷನ್ ಅಂದ್ರೆ ಬರೀ ವೋಟ್ ಹಾಕೋದು ಮಾತ್ರವಲ್ಲ, ಅದೊಂದು ದೊಡ್ಡ ಹಬ್ಬದ ತರಾನೇ ಕಾಣಿಸ್ತಿದೆ. ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್‌ಗಳವರೆಗೆ ಎಲ್ಲರೂ ಬೆಳಬೆಳಗ್ಗೆನೆ ಬೂತ್‌ಗಳ ಮುಂದೆ ಕ್ಯೂ ನಿಂತಿದ್ದಾರೆ. ಆದ್ರೆ ಇವತ್ತು ಎಲ್ಲರ ಹಾಟ್ ಟಾಪಿಕ್ ಅಂದ್ರೆ ಅದು ನಮ್ಮ ದಳಪತಿ ವಿಜಯ್.

ಸೈಲೆಂಟ್ ಆಗಿ ಬಂದು ವೋಟ್ ಹಾಕಿ ಹೋದ ಅಜಿತ್ | Photo Credit: https://timesofindia.indiatimes.com/
ಸೈಲೆಂಟ್ ಆಗಿ ಬಂದು ವೋಟ್ ಹಾಕಿ ಹೋದ ಅಜಿತ್ | Photo Credit: https://timesofindia.indiatimes.com/

ರಾಜಕಾರಣಿಯಾಗಿ ವಿಜಯ್ ಮೊದಲ ಹೆಜ್ಜೆ

ನಟ ವಿಜಯ್ ಈಗ ಬರೀ ಸ್ಟಾರ್ ಅಷ್ಟೇ ಅಲ್ಲ, ತಮಿಳಗ ವೆಟ್ರಿ ಕಳಗಂ ಪಕ್ಷದ ಬಾಸ್ ಕೂಡ ಹೌದು. ಪ್ರತಿ ಸಲ ಸುಮ್ಮನೆ ವೋಟ್ ಹಾಕೋಕೆ ಬರ್ತಿದ್ದ ವಿಜಯ್, ಈ ಬಾರಿ ಒಬ್ಬ ಪಕ್ಕಾ ರಾಜಕಾರಣಿಯಾಗಿ ಮತಗಟ್ಟೆಗೆ ಬಂದಿದ್ದು ಸಖತ್ ಸ್ಪೆಷಲ್ ಆಗಿತ್ತು. ಚೆನ್ನೈನ ನೀಲಂಗರೈನಲ್ಲಿರೋ ಸ್ಕೂಲ್‌ಗೆ ವಿಜಯ್ ಬರ್ತಿದ್ದ ಹಾಗೆ ಅಭಿಮಾನಿಗಳು ಫುಲ್ ಜೋಶ್‌ನಲ್ಲಿ ಜೈಕಾರ ಹಾಕಿದ್ರು. ಪೊಲೀಸರು ಕೂಡ ಯಾವುದೇ ತೊಂದರೆ ಆಗದ ಹಾಗೆ ಬಿಗಿ ಭದ್ರತೆ ಮಾಡಿದ್ರು. ವೈಟ್ ಶರ್ಟ್‌ನಲ್ಲಿ ಸಿಂಪಲ್ ಆಗಿ ಬಂದು ವಿಜಯ್ ವೋಟ್ ಹಾಕಿದ್ದನ್ನ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಮಗಳ ಜೊತೆ ಬಂದ ಕಮಲ್ ಹಾಸನ್

ಇನ್ನೊಂದೆಡೆ, 'ಉಳಗನಾಯಗನ್' ಕಮಲ್ ಹಾಸನ್ ಕೂಡ ತಮ್ಮ ಹಕ್ಕು ಚಲಾಯಿಸೋದ್ರಲ್ಲಿ ಹಿಂದೆ ಬೀಳಲಿಲ್ಲ. ತಮ್ಮ ಮಗಳು ಶ್ರುತಿ ಹಾಸನ್ ಅವರನ್ನ ಕರ್ಕೊಂಡು ತೇನಾಂಪೇಟೆಯ ಹೈಸ್ಕೂಲ್‌ಗೆ ಬಂದ ಕಮಲ್, ವೋಟ್ ಹಾಕಿ ಬಂದ ಮೇಲೆ ಮೀಡಿಯಾ ಮುಂದೆ ನಿಂತು "ದೇಶಕ್ಕೋಸ್ಕರ ಎಲ್ಲರೂ ವೋಟ್ ಮಾಡಿ" ಅಂತ ಪ್ರೀತಿಯಿಂದ ಕೇಳ್ಕೊಂಡ್ರು.

ಸೈಲೆಂಟ್ ಆಗಿ ಬಂದ ಅಜಿತ್ ಕುಮಾರ್
ಇನ್ನು ಪಬ್ಲಿಸಿಟಿಯಿಂದ ಯಾವಾಗಲೂ ದೂರ ಇರೋ ನಟ ಅಜಿತ್, ಈ ಸಲನೂ ಮುಂಜಾನೆಯೇ ಬಂದು ವೋಟ್ ಹಾಕಿಬಿಟ್ರು. ತಿರುವನ್ಮಿಯೂರ್ ಬೂತ್ ಹತ್ತಿರ ಅಜಿತ್ ಬರ್ತಾರೆ ಅಂತ ಗೊತ್ತಾಗಿದ್ದೇ ತಡ, ಜನ ಸಾಗರವೇ ನೆರೆದಿತ್ತು. ಆದ್ರೆ ಅಜಿತ್ ಅವರು ಯಾರಿಗೂ ತೊಂದರೆ ಕೊಡದೆ ಕ್ಯೂನಲ್ಲಿ ನಿಂತು ವೋಟ್ ಹಾಕಿ ಸೈಲೆಂಟ್ ಆಗಿ ಮನೆಗೆ ಹೋದ್ರು.

ಸ್ಟಾರ್‌ಗಳ ವೋಟಿಂಗ್ ಹೈಲೈಟ್ಸ್

ಸಿಂಪ್ಲಿಸಿಟಿ ಅಂದ್ರೆ ಇದು: ಇಷ್ಟು ದೊಡ್ಡ ಸ್ಟಾರ್ ಆಗಿದ್ರೂ ಹಮ್ಮುಬಿಮ್ಮು ಇಲ್ಲದೆ ಕ್ಯೂನಲ್ಲಿ ನಿಂತಿದ್ದು ನೋಡುಗರಿಗೆ ಖುಷಿ ತಂತು.

ಟೈಟ್ ಸೆಕ್ಯೂರಿಟಿ: ಫ್ಯಾನ್ಸ್ ನೂಕುನುಗ್ಗಲು ತಡೆಯೋಕೆ ಪೊಲೀಸರು ಹರಸಾಹಸ ಪಡಬೇಕಾಯ್ತು.

ಸೋಷಿಯಲ್ ಅವೇರ್‌ನೆಸ್: ವೋಟ್ ಹಾಕಿದ ಮೇಲೆ ಬೆರಳಿನ ಇಂಕ್ ತೋರಿಸಿ ಫೋಟೋ ಹಾಕಿದ ಸ್ಟಾರ್‌ಗಳು, ಯುವಕರಿಗೆ ದೊಡ್ಡ ಮೆಸೇಜ್ ಕೊಟ್ಟಿದ್ದಾರೆ.

ಈ ಸಲ ತಮಿಳುನಾಡು ಚುನಾವಣಾ ಅಖಾಡದಲ್ಲಿ ಸಿನಿಮಾ ಸ್ಟಾರ್‌ಗಳೇ ಜಾಸ್ತಿ ಇರೋದ್ರಿಂದ ರಿಸಲ್ಟ್ ಯಾರ ಪರ ಬರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ದಳಪತಿ ವಿಜಯ್ ಅವರ ಹೊಸ ರಾಜಕೀಯ ಜರ್ನಿಗೆ ಈ ಮತದಾನವೇ ಮೊದಲ ಮೆಟ್ಟಿಲು ಅಂತಾನೇ ಹೇಳ್ಬೋದು.

Latest News