ಹೌದು ಇತ್ತೀಚಿಗೆ ಒಂದು ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಅದುವೇ ಕೇರಳದ ಶಬರಿಮಲೆಯಲ್ಲಿಯ ಹೊಸ ವೈರಸ್ ಪತ್ತೆ ಆಗಿರುವ ಸುದ್ದಿ. ಇದು ಕೇರಳಕ್ಕೆ ಈ ವರ್ಷ ಪ್ರಯಾಣ ಕೈಗೊಳ್ಳುತ್ತಿರುವವರ ಬಗ್ಗೆ ಆಗಿದೆ. ಕೇರಳದ ಪತ್ತಂತಿಟ್ಟ ಜಿಲ್ಲೆಯ ಬೆಟ್ಟದ ಮೇಲಿರುವ ಸ್ವಾಮಿ ಅಯ್ಯಪ್ಪನ ದರ್ಶನಕ್ಕಾಗಿ ಲಕ್ಷಾಂತರ ಭಕ್ತಾದಿಗಳು ನಾನಾ ಕಡೆಯಿಂದ ಪ್ರತಿವರ್ಷ ಬರುತ್ತಲೇ ಇರುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ದಿಕ್ಕಿನ ಕಡೆಯುವವರು, ಆಂಧ್ರಪ್ರದೇಶ ಹೀಗೆ ಇನ್ನೂ ಅನೇಕರು ಬೇರೆ ಬೇರೆ ಪ್ರದೇಶಗಳಿಂದ ಅಯ್ಯಪ್ಪನ ಕಾಣಲು ಬರುತ್ತಾರೆ. ಸ್ವಾಮಿ ಅಯ್ಯಪ್ಪ ದೇವರು ಕೋಟ್ಯಾಂತರ ಭಕ್ತಾದಿಗಳ ಹೊಂದಿದ್ದಾರೆ. ಹೀಗಿರುವಾಗ ಈ ವರ್ಷವೇ ಹೊಸ ವೈರಸ್ ಶಬರಿಮಲೆಯಲ್ಲೂ ಕಂಡು ಬಂದಿರುವುದಾಗಿ ಕೇಳಿ ಬಂದಿದೆ. ಅನೇಕರು ತಮ್ಮ ಅಭೂತ ಭಕ್ತಿ ಹೊತ್ತು ಅಲ್ಲಿಗೆ ಬರುತ್ತಾರೆ. ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿಯ ಭಕ್ತಿಯ ಷರತ್ತುಗಳ ಪಾಲಿಸಿ ದೇವರ ಬಳಿ ತಮ್ಮ ಇಷ್ಟಾರ್ಥ ಬೇಡಿಕೆ ಇಟ್ಟು ಆಶೀರ್ವಾದ ಪಡೆಯುತ್ತಾರೆ. ಈ ಹಂತದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ವೈರಸ್ ಹಾವಳಿ ಜೋರಾಗಿದೆ.
ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಲೆಂದು ಲಕ್ಷಾಂತರ ಭಕ್ತರು ಪಂಪಾ ನದಿಯ ಮೂಲಕ ದೇಗುಲಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ, ಕೇರಳದಲ್ಲಿ ನೇಗ್ಲೇರಿಯಾ ಫೌಲೆರಿ ಎಂಬ ಅಪಾಯಕಾರಿ ಅಮೀಬಾ ಸೋಂಕು ಪತ್ತೆಯಾಗಿದೆ ಎಂದು ಕೇಳಿಬಂದಿದೆ. ಈ ಡೇಂಜರಸ್ ವೈರಸ್ ಅಮೀಬಾ ಮೆದುಳಿಗೆ ತಲುಪಿದರೆ, ಅದು ಜೀವಘಾತಕವಾದ ಮೆನಿಂಜೋಎನ್‌ಸೆಫಲೈಟಿಸ್ ಎಂಬ ತೀವ್ರ ಸೋಂಕಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ಅಲ್ಲಿಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸೋಂಕು ಸಾಮಾನ್ಯವಾಗಿ ಕಲುಷಿತ ನೀರಿನಲ್ಲಿ ಈಜಿದಾಗ ಅಥವಾ ಮೂಗಿನ ಮೂಲಕ ನೀರು ಒಳಗೆ ಪ್ರವೇಶಿಸಿದಾಗ ಹರಡುವ ಸಾಧ್ಯತೆ ಇರುತ್ತದೆ. ಶಬರಿಮಲೆ ಯಾತ್ರಿಕರು ಪಂಪಾ ನದಿಯಲ್ಲಿ ಸ್ನಾನ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಭಕ್ತರಿಗೆ ನದಿಯಲ್ಲಿ ಈಜುವುದು ಅಥವಾ ತಲೆ ಮುಳುಗಿಸುವುದು ತಪ್ಪಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳ ಆರೋಗ್ಯ ಇಲಾಖೆ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಶಬರಿಮಲೆ ಯಾತ್ರಿಕರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪಂಪಾ ನದಿಯಲ್ಲಿ ನೀರಿನ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಸೋಂಕಿನ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಇದಲ್ಲದೆ ಒಂದು ವೇಳೆ ಆ ರೀತಿಯ ಘಟನಗೆಳು ಜರುಗಿದರೆ ಹತ್ತಿರದಲ್ಲೇ ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಸಹ ಏರ್ಪಾಡು ಮಾಡಿಕೊಂಡು ಅದನ್ನು ಬಲಪಡಿಸಲಾಗಿದೆ.
ಈ ಅಮೀಬಾ ಸೋಂಕು ಬಹಳವೇ ಅಪರೂಪವಾದರೂ, ತೀವ್ರವಾದ ಪರಿಣಾಮಗಳನ್ನು ಉಂಟುಮಾಡಬಹುದು. ಸೋಂಕು ತಗುಲಿದರೆ ತೀವ್ರ ತಲೆನೋವು, ಜ್ವರ, ವಾಂತಿ, ಗಾಬರಿತನ, ಕೊನೆಗೆ ಕೋಮಾ ಸ್ಥಿತಿಗೂ ತಲುಪಬಹುದು ಎಂದು ಅರೋಗ್ಯ ತಜ್ಞರು ಹೇಳಿಕೆ ಸಹ ನೀಡಿದ್ದು, ಈ ರೋಗದ ಚಿಕಿತ್ಸೆ ಬಹಳ ಕಷ್ಟಕರವಾಗಿದ್ದು, ಸಾವಿನ ಪ್ರಮಾಣವೂ ಹೆಚ್ಚು. ಆದ್ದರಿಂದ, ಭಕ್ತರು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಭಕ್ತರು ಶಬರಿಮಲೆ ಯಾತ್ರೆಗೆ ಹೊರಡುವ ಮೊದಲು ಆರೋಗ್ಯದ ಬಗ್ಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರನ್ನು ಮಾತ್ರ ಬಳಸಬೇಕು, ನದಿಯಲ್ಲಿ ತಲೆ ಮುಳುಗಿಸದಂತೆ ನೋಡಿಕೊಳ್ಳಬೇಕು ಮತ್ತು ಯಾವುದೇ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸರ್ಕಾರ ಹಾಗೂ ದೇವಸ್ವಂ ಮಂಡಳಿ ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂಬುದು ಅಧಿಕಾರಿಗಳ ಮನವಿ.