ಶಬರಿಮಲೆ ಯಾತ್ರೆಗೆ ತೆರಳಿದ ಕನ್ನಡಿಗರ ಮೇಲೆ ದಾಳಿ ನಡೆದಿರುವ ಘಟನೆಗೆ ಕನ್ನಡ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಕೆಲವು ವ್ಯಕ್ತಿಗಳು ಕನ್ನಡ ಯಾತ್ರಿಕರನ್ನು ಅಡ್ಡಗಟ್ಟಿ, ಕನ್ನಡ ಭಾವುಟ ತೆಗೆಯುವಂತೆ ಒತ್ತಾಯಿಸಿ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಪ್ರತಿಕ್ರಿಯಿಸಿದ ಕನ್ನಡ ಹೋರಾಟಗಾರರು, “ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು. ಶಬರಿಮಲೆ ಯಾತ್ರೆ ಧಾರ್ಮಿಕ ಭಾವನೆಯೊಂದಿಗೆ ಸಂಬಂಧಪಟ್ಟದ್ದು. ಇಂತಹ ಸಂದರ್ಭಗಳಲ್ಲಿ ಭಾಷೆಯ ಆಧಾರದ ಮೇಲೆ ದಾಳಿ ಮಾಡುವುದು ಅಸಹ್ಯಕರ” ಎಂದು ಖಂಡಿಸಿದ್ದಾರೆ.
ಹೌದು ಕನ್ನಡ ಹೋರಾಟಗಾರರು ಶೀಘ್ರದಲ್ಲೇ ಹೋಮ್ ಮಿನಿಸ್ಟರ್ ಅವರನ್ನು ಭೇಟಿ ಮಾಡಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. “ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಕನ್ನಡಿಗರ ಸುರಕ್ಷತೆ ಖಚಿತಪಡಿಸಬೇಕು. ಯಾತ್ರಿಕರ ಮೇಲೆ ದೌರ್ಜನ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ಶಬರಿಮಲೆ ಯಾತ್ರೆ ದಕ್ಷಿಣ ಭಾರತದ ಲಕ್ಷಾಂತರ ಭಕ್ತರ ಧಾರ್ಮಿಕ ನಂಬಿಕೆಗೆ ಸಂಬಂಧಪಟ್ಟ ಮಹತ್ವದ ಆಚರಣೆ. ಪ್ರತಿವರ್ಷ ಸಾವಿರಾರು ಕನ್ನಡಿಗರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ.
ಆದರೆ ಇತ್ತೀಚೆಗೆ ನಡೆದ ಘಟನೆ, ಯಾತ್ರಿಕರ ಮನಸ್ಸಿನಲ್ಲಿ ಭಯ ಹುಟ್ಟಿಸಿದೆ. “ಯಾತ್ರೆ ಧಾರ್ಮಿಕ ಭಾವನೆಯೊಂದಿಗೆ ಸಂಬಂಧಪಟ್ಟದ್ದು. ಇಲ್ಲಿ ಭಾಷಾ ರಾಜಕೀಯಕ್ಕೆ ಅವಕಾಶವಿಲ್ಲ” ಎಂದು ಕನ್ನಡ ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. “ಕನ್ನಡಿಗರ ಗೌರವಕ್ಕೆ ಧಕ್ಕೆ ತರುವ ಯಾವುದೇ ಕ್ರಮವನ್ನು ಸಹಿಸಲಾಗುವುದಿಲ್ಲ. ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು” ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಒಟ್ಟಿನಲ್ಲಿ ಹೇಳಬೇಕು ಅಂದರೆ , ಶಬರಿಮಲೆ ಯಾತ್ರೆಯಲ್ಲಿ ಕನ್ನಡಿಗರ ಮೇಲೆ ನಡೆದ ದಾಳಿ ಘಟನೆ, ರಾಜ್ಯದ ಕನ್ನಡ ಹೋರಾಟಗಾರರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಹೋಮ್ ಮಿನಿಸ್ಟರ್ ಭೇಟಿಯ ಮೂಲಕ ಈ ವಿಷಯವನ್ನು ಗಂಭೀರವಾಗಿ ಮುಂದಿಟ್ಟುಕೊಳ್ಳಲು ನಿರ್ಧಾರ ಕೈಗೊಂಡಿದ್ದಾರೆ. ಧಾರ್ಮಿಕ ಯಾತ್ರೆಯಲ್ಲಿ ಭಾಷಾ ಆಧಾರದ ಮೇಲೆ ದೌರ್ಜನ್ಯ ನಡೆಯುವುದು ಖಂಡನೀಯ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.