ನೂತನ ವರ್ಷ ಆರಂಭವಾಗಿದೆ ಎಲ್ಲರೂ ಹೊಸ ವರ್ಷವನ್ನು ಹೆಚ್ಚು ಸಂಭ್ರಮದಿಂದ ಬರ ಮಾಡಿಕೊಂಡರು. ಕರ್ನಾಟಕ ಜನರು ಮಾತ್ರವಲ್ಲದೆ ಇಡೀ ದೇಶದ ಜನತೆ 2026 ಅನ್ನು ಹೆಚ್ಚು ಖುಷಿ ಮೂಲಕ ಅವರದೇ ಆದ ವಿಭಿನ್ನ ಶೈಲಿಯಲ್ಲಿ ಸಂಭ್ರಮಿಸಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದರ ನಡುವೆ ನಮ್ಮ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಸಾಕಷ್ಟು ಲಕ್ಷಾಂತರ ಜನರು ಅವರದೇ ಆದ ಶೈಲಿಯಲ್ಲಿ ಸಕತ್ ಖುಷಿಯಿಂದ ಅವರವರ ಇಷ್ಟದ ಸ್ಥಳಗಳಿಗೆ ಭೇಟಿ ನೀಡಿ, ಅವರ ಪ್ರೀತಿ ಪಾತ್ರರ ಜೊತೆ ಸಮಯ ಕಳೆದು ಹೊಸ ವರ್ಷ ಆಚರಣೆ ಮಾಡಿದ್ದಾರೆ. ಎಂ ಜಿ ರೋಡ್, ಕೋರಮಂಗಲ, ಹೀಗೆ ಇನ್ನೂ ಕೆಲವು ಪ್ರದೇಶಗಳಲ್ಲಿ ಬಾರಿ ವಿಜೃಂಭಣೆಯಿಂದ ಹೊಸ ವರ್ಷವನ್ನು ಆಚರಿಸಿದರು. ಸರಕಾರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಮೂಲಕ ಬಿಗಿ ಭದ್ರತೆಯಾ ನಿಯಮ ಹೇಳಿದ್ದು, ಕೆಲವು ಪ್ರದೇಶಗಳಲ್ಲಿ ನಿಯಮ ಜಾರಿಗೆ ಮಾಡಿ ಹೆಚ್ಚು ಗಲಾಟೆ ಆಗದಂತೆ ಕಾರ್ಯ ಕೈಗೊಂಡರು.
ಹೊಸ ವರ್ಷದ ಆಚರಣೆಗೆ ಬೇಕಾದ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಸಹ ಯಶಸ್ವಿ ಆಯಿತು ಎನ್ನಬಹುದು. ಹೀಗಿರುವಾಗ ನೂತನ ವರ್ಷಕ್ಕೆ ಮದ್ಯಪಾನ ಪ್ರಿಯರು ಕಡಿಮೆ ಏನು ಇರಲಿಲ್ಲ. ಪುರುಷರು ಮಹಿಳೆಯರು, ಯುವಕ ಯುವತಿಯರು ಸಹ ಸಕತ್ ಡ್ರಿಂಕ್ಸ್ ಮಾಡಿ ಪಬ್ ಗಳಲ್ಲಿ ಡಾನ್ಸ್ ಮೂಲಕ ಬೆಂಗಳೂರಿನಲ್ಲಿ ಹಲವರು ಆಚರಣೆ ಮಾಡಿ ಎಂಜಾಯ್ ಮಾಡಿದರು. ಅಸಲಿಗೆ ಹೊಸ ವರ್ಷದ ಹಿಂದಿನ ದಿವಸ ಎಷ್ಟು ಮದ್ಯಪಾನ ಮಾರಾಟ ಆಯಿತು ಎಂಬ ಅಂಕಿ ಅಂಶ ಇದೀಗ ಮುನ್ನೆಲೆಗೆ ಬಂದಿದೆ. ಹಾಗೆ ಮದ್ಯಪಾನ ಮಾಡಿದ ಮೇಲೆ ಮದ್ಯಪಾನ ಅದೆಷ್ಟು ಅಂದು ಮಾರಾಟ ಆಯಿತು ಎನ್ನುವ ವಿಷಯ ಚರ್ಚೆಗೆ ಬಂದಿದೆ. ಹಾಗೆ ಸರ್ಕಾರಕ್ಕೆ ಹೊಸ ವರ್ಷದ ದಿನದ ಮದ್ಯಪಾನ ಮಾರಾಟದಿಂದ ಏನೆಲ್ಲಾ ಲಾಭ ಆಯಿತು ಎಂಬ ವಿಷಯವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ನೂತನ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಮದ್ಯ ಮಾರಾಟವು ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ ಎನ್ನಬಹುದು. ಹೋದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಮದ್ಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆಯಂತೆ. ಅಬಕಾರಿ ಇಲಾಖೆಗೆ ಹೆಚ್ಚು ಆದಾಯ ಬಂದಿದೆ ಎಂದು ಕೇಳಿ ಬಂದಿದೆ. ಡಿಸೆಂಬರ್ 29, 30, ಹಾಗೂ 31, ಈ ಮೂರು ದಿವಸಗಳಲ್ಲಿ ಜರುಗಿದ ಮದ್ಯ ಮಾರಾಟ ಅಂಕಿ ಅಂಶಗಳು ರಾಜ್ಯದ ಆರ್ಥಿಕತೆಗೆ ಹೊಸ ಬಲ ನೀಡಿವೆ ಎನ್ನಬಹುದು.
ಕಳೆದ ವರ್ಷದ ಅಂಕಿ ಅಂಶಗಳ ನೋಡುವುದಾದರೆ ಐಎಂಎಲ್ (Indian Made Liquor) 8.25 ಲಕ್ಷ ಬಾಕ್ಸ್ ಮಾರಾಟ.ಆಗಿತ್ತು, ಬಿಯರ್: 5.03 ಲಕ್ಷ ಬಾಕ್ಸ್ ಮಾರಾಟ, ಒಟ್ಟು ಆದಾಯ 420.77 ಕೋಟಿ ರೂ. ಅಬಕಾರಿ ಇಲಾಖೆಗೆ ಲಭಿಸಿತು ಎಂದು ವರದಿ ಆಗಿತ್ತು. ಈ ಅಂಕಿ ಅಂಶಗಳು ಕೇವಲ 2024ರ ಕೊನೆಯ ಮೂರು ದಿನಗಳಲ್ಲಿ ಮದ್ಯ ಮಾರಾಟದ ಪ್ರಮಾಣವನ್ನ ತೋರಿಸಿದ್ದವು.
ಈ ವರ್ಷದ ಅಂಕಿ ಅಂಶಗಳ ನೋಡೋಣ ಬನ್ನಿ . ಐಎಂಎಲ್ ನಲ್ಲಿ 9.84 ಲಕ್ಷ ಬಾಕ್ಸ್ ಮಾರಾಟ ಆಗಿವೆ. ಬಿಯರ್ ಗಳು 6.64 ಲಕ್ಷ ಬಾಕ್ಸ್ ಮಾರಾಟ ಆಗಿವೆಯಂತೆ ಇದರ ಪ್ರಕಾರದಲ್ಲಿ ಒಟ್ಟು ಆದಾಯ 587.51 ಕೋಟಿ ರೂ. ಅಬಕಾರಿ ಇಲಾಖೆಗೆ ಲಭಿಸಿದೆ ಎಂದು ಕೇಳಿ ಬಂದಿದೆ.
ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿ ಮಾಡಿದ್ದಾರೆ. ಹೋಟೆಲ್, ಪಬ್, ಹಾಗೂ ಹೆಚ್ಚು ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದಿದ್ದು, ಮದ್ಯ ಬಳಕೆ ಹೆಚ್ಚಾಗಿದೆ ಎನ್ನುವ ಅಂಶ ತಿಳಿದು ಬಂದಿದೆ. ನಗರ ಹಾಗೂ ಹಳ್ಳಿ ಕಡೆ ಗ್ರಾಮೀಣ ಪ್ರದೇಶಗಳಲ್ಲಿಯೂ ಮದ್ಯದ ಬೇಡಿಕೆ ಹೆಚ್ಚಿರುವುದು ಅಂಕಿ ಅಂಶಗಳಲ್ಲಿ ಸ್ಪಷ್ಟವಾಗಿದೆ.
ಹೊಸ ವರ್ಷದ ಮೂರು ದಿವಸದ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ 587.51 ಕೋಟಿ ರೂ. ಆದಾಯ ಲಭಿಸಿದೆ. ಹೋದ ವರ್ಷಕ್ಕಿಂತ ವರ್ಷಕ್ಕಿಂತ ಹೆಚ್ಚುವರಿಯಾಗಿ 166.74 ಕೋಟಿ ರೂ. ಲಾಭವಾಗಿದೆ ಎಂದು ಕೇಳಿ ಬಂದಿದೆ. ಈ ಆದಾಯ ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದೆ. ಇದನ್ನು ಕೆಲವರು ರಾಜ್ಯಕ್ಕೆ ನಮ್ಮಿಂದಲೇ ಆರ್ಥಿಕತೆ ಸುಧಾರಿಸಿದೆ ಎಂದು ಹೇಳಿದರೆ, ಇನ್ನೂ ಕೆಲವರು ಈ ಮದ್ಯ ಬಳಕೆ ಹೆಚ್ಚಳದಿಂದ ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಗಳು ಹೆಚ್ಚುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಸುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು.