ಪರ್ಫೆಕ್ಟ್ ಬಾಡಿ ಕ್ರೇಜ್ ಗೆ ಹುಚ್ಚು ಹಿಡಿಸಿಕೊಳ್ಳುತ್ತಿರುವ ಜೆನ್-ಜಿ ಹುಡುಗರು - ಎಷ್ಟು ಅಪಾಯಕಾರಿ ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಹೊಳೆಯುವ ಸಿಕ್ಸ್ ಪ್ಯಾಕ್, ಸ್ಲಿಮ್ ವೇಸ್ಟ್‌, ಶಾರ್ಪ್ ಜಾ ಲೈನ್‌ಗಳ ಚಿತ್ರಗಳು ಇಂದಿನ ಯುವಕರ ಕನಸಾಗಿವೆ. ಆದರೆ ಆ ಕನಸಿನ ಹಿಂದೆ ನಡೆಯುತ್ತಿರುವ ಹೋರಾಟ ಎಷ್ಟು ಅಪಾಯಕಾರಿ ಗೊತ್ತಾ? ಫಿಟ್ನೆಸ್ ಹೆಸರಿನಲ್ಲಿ ಜೆನ್-ಜಿ ಯುವಕರು ತಮ್ಮ ದೇಹ ಮತ್ತು ಮನಸ್ಸನ್ನೇ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.  

Gen Z ಜಿಮ್ ಅಡಿಕ್ಷನ್ ಬೆಚ್ಚಿಬೀಳಿಸುವ ಸತ್ಯ!
Gen Z ಜಿಮ್ ಅಡಿಕ್ಷನ್ ಬೆಚ್ಚಿಬೀಳಿಸುವ ಸತ್ಯ!

ಒಳ್ಳೆಯ ಆರೋಗ್ಯ ಒಂದು ಹವ್ಯಾಸವಾಗಿರಬೇಕು. ಆದರೆ ಈಗ ಅದು ಸ್ಟೇಟಸ್ ಸಿಂಬಲ್ ಆಗಿದೆ. ಜಿಮ್‌ಗೆ ಹೋಗದೇ ಇದ್ದರೆ, ಟ್ರಾನ್ಸ್‌ಫರ್ಮೇಷನ್ ಪೋಸ್ಟ್ ಇಲ್ಲದಿದ್ದರೆ, ರೀಲ್ಸ್ ಮಾಡದೇ ಇದ್ದರೆ – ಸಮಾಜವೇ ಸ್ವೀಕರಿಸೋದಿಲ್ಲ ಅನ್ನೋ ಒತ್ತಡ ಹೆಚ್ಚುತ್ತಿದೆ. ಫೋಟೋ ಪರ್ಫೆಕ್ಟ್ ಆಗಿದ್ದರೂ, ಜೀವನ ಅಸ್ಥಿರವಾಗುತ್ತಿದೆ.  

ನಿರಂತರವಾಗಿ ದೇಹವನ್ನು ಒತ್ತಡಕ್ಕೆ ಒಳಪಡಿಸಿದರೆ ಒತ್ತಡ ಹಾರ್ಮೋನ್‌ಗಳು ಏರುತ್ತವೆ. ಪರಿಣಾಮವಾಗಿ ಸದಾ ದಣಿವು, ಮೂಡ್ ಸ್ವಿಂಗ್‌, ಚರ್ಮದ ಸಮಸ್ಯೆ, ಬೇಗನೆ ವಯಸ್ಸಾದಂತೆ ಕಾಣಿಸಿಕೊಳ್ಳುವುದು. ಮಸಲ್ ಬೇಗ ಬರಲಿ ಅನ್ನೋ ಆತುರದಲ್ಲಿ ಬಳಸುವ ಸ್ಟೀರಾಯ್ಡ್‌ಗಳು ಹೃದಯ ಮತ್ತು ಒಳಾಂಗಗಳಿಗೆ ಭಾರೀ ಹಾನಿ ಮಾಡುತ್ತವೆ. ಇತ್ತೀಚಿನ ದಿಢೀರ್ ಸಾವುಗಳು ಈ ಅಪಾಯವನ್ನು ಮತ್ತೆ ಹೈಲೈಟ್ ಮಾಡಿವೆ.  

ಕನ್ನಡಿಯಲ್ಲೇ ಶತ್ರು ಎಂಬಂತೆ ‘ದೇಹದ ಬಗ್ಗೆ ತಪ್ಪಾದ ಕಲ್ಪನೆ’ ಸಮಸ್ಯೆ ಹೆಚ್ಚುತ್ತಿದೆ. ಸಣ್ಣ ದೋಷಗಳೇ ದೊಡ್ಡದಾಗಿ ಕಾಣಿಸಿಕೊಳ್ಳುತ್ತಾ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಫಿಲ್ಟರ್ ಫೋಟೋಗಳ ಜೊತೆ ಹೋಲಿಕೆ ಮಾಡಿಕೊಳ್ಳುವ ಅಭ್ಯಾಸ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದೆ.  

ಮಹಿಳೆಯರಲ್ಲಿ ಅತಿಯಾದ ವ್ಯಾಯಾಮದಿಂದ ಹಾರ್ಮೋನಲ್ ಅಸಮತೋಲನ, ಮಾಸಿಕ ಚಕ್ರದ ವ್ಯತ್ಯಾಸ, ದೀರ್ಘಕಾಲದಲ್ಲಿ ಗರ್ಭಧಾರಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ವಲಯ ಎಚ್ಚರಿಸಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಜ್ಞರು ಸೂಚಿಸುತ್ತಿದ್ದಾರೆ.  

ರೀಲ್ಸ್‌ನಲ್ಲಿ ಕಾಣೋ ದೇಹ ಒಂದು ಕ್ಷಣದ ಚಿತ್ರ. ಆದರೆ ನಿಜ ಜೀವನದ ಆರೋಗ್ಯ ದೀರ್ಘಕಾಲದ ಜವಾಬ್ದಾರಿ. ವ್ಯಾಯಾಮ ನಮ್ಮ ಬದುಕನ್ನು ಸುಧಾರಿಸಬೇಕು. ಬದಲಿಗೆ ಶಿಕ್ಷೆಯಾಗಿ ಮಾರ್ಪಡಬಾರದು. ಲೈಕ್ಸ್‌ಗಿಂತ ಲೈಫ್ ಮುಖ್ಯ ಎಂಬ ಅರಿವು ಯುವಕರಲ್ಲಿ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ.

Latest News