Jan 25, 2026 Languages : ಕನ್ನಡ | English

ಶಿಡ್ಲಘಟ್ಟ ನಗರದಲ್ಲಿ ರಾಜಕೀಯ - ಕಣ್ಣೀರಿಟ್ಟ ಪೌರಾಯುಕ್ತೆ ಅಮೃತ ಗೌಡ!! ಯಾಕೆ ಗೊತ್ತಾ?

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಪೌರಾಯುಕ್ತೆ ಅಮೃತ ಗೌಡ ಅವರಿಗೆ ದಮ್ಕಿ ಹಾಕಿದ ವಿಚಾರ ಸ್ಥಳೀಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ನಗರಸಭೆ ಆವರಣದಲ್ಲೇ ನಡೆದಿದ್ದು, ಪೌರಾಯುಕ್ತೆ ಕಣ್ಣೀರಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಪೌರಾಯುಕ್ತೆಯ ಕಣ್ಣೀರು ಅಮೃತ ಗೌಡ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರೂ, ತಪ್ಪು ಮಾಡದೆ ಇದ್ದರೂ ಬೈಸಿಕೊಂಡಿದ್ದಕ್ಕೆ ಕಣ್ಣೀರಿಡಬೇಕಾದ ಪರಿಸ್ಥಿತಿ ಎದುರಾಗಿದೆ. 

ಶಿಡ್ಲಘಟ್ಟ ನಗರಸಭೆ ಮುಂದೆ ಪೌರಾಯುಕ್ತೆಯ ಕಣ್ಣೀರು
ಶಿಡ್ಲಘಟ್ಟ ನಗರಸಭೆ ಮುಂದೆ ಪೌರಾಯುಕ್ತೆಯ ಕಣ್ಣೀರು

ನಗರಸಭೆ ಮುಂದೆ ಸಾರ್ವಜನಿಕರ ಎದುರೇ ಕಣ್ಣೀರು ಹಾಕಿದ ಪೌರಾಯುಕ್ತೆಯ ದೃಶ್ಯವು ಜನಮನ ನೊಂದುಕೊಳ್ಳುವಂತೆ ಆಗಿತ್ತು. ಹೌದು ಅಧಿಕಾರಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಣೆಯ ವೇಳೆ ಇಂತಹ ಅವಮಾನಕ್ಕೆ ಗುರಿಯಾಗಿರುವುದು ಆಡಳಿತ ವ್ಯವಸ್ಥೆಯ ಮೇಲೆ ಪ್ರಶ್ನೆ ಎಬ್ಬಿಸಿದೆ ಎನ್ನಬಹದು. ಸ್ಥಳೀಯ ರಾಜಕೀಯದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಘಟನೆಗಳು ಹೊಸದೇನಲ್ಲ. ಆದರೆ ಈ ಬಾರಿ ಪೌರಾಯುಕ್ತೆಯೇ ಸಾರ್ವಜನಿಕವಾಗಿ ಕಣ್ಣೀರಿಡುವಂತ ಪರಿಸ್ಥಿತಿ ಎದುರಿಸಿರುವುದು ಗಂಭೀರ ಸಂಗತಿ ಆಗಿ ಹೊರ ಹೊಮ್ಮಿತ್ತು. ರಾಜೀವ್ ಗೌಡ ಅವರ ವರ್ತನೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೌದು ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರುವುದರಿಂದ ಆಡಳಿತದ ಶಿಸ್ತಿಗೆ ಧಕ್ಕೆಯಾಗಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗಿದೆ. ನಗರಸಭೆ ಮುಂದೆ ನಡೆದ ಈ ಘಟನೆಗೆ ಸಾಕ್ಷಿಯಾದ ಸಾರ್ವಜನಿಕರು ಪೌರಾಯುಕ್ತೆಯ ಪರವಾಗಿ ನಿಂತಿದ್ದಾರೆ. ತಪ್ಪು ಮಾಡದೆ ಇದ್ದರೂ ಅಧಿಕಾರಿಯೊಬ್ಬರು ರಾಜಕೀಯ ಒತ್ತಡಕ್ಕೆ ಗುರಿಯಾಗಿರುವುದು ಖಂಡನೀಯ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಸಂಬಂಧಿಸಿದ ಚರ್ಚೆಗಳು ಜೋರಾಗಿದ್ದು, ಅಮೃತ ಗೌಡ ಅವರ ಕಣ್ಣೀರು ಜನಮನದಲ್ಲಿ ಸಹಾನುಭೂತಿ ಮೂಡಿಸಿದೆ. ನಗರಸಭೆಯ ಮೂಲಭೂತ ಕಾರ್ಯಗಳನ್ನು ನಿರ್ವಹಿಸಬೇಕಾದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಗುರಿಯಾಗುತ್ತಿರುವುದು ಆಡಳಿತದ ಶಿಸ್ತಿಗೆ ಧಕ್ಕೆಯಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ರಾಜಕೀಯ ಹಸ್ತಕ್ಷೇಪ ಕಡಿಮೆಯಾಗಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬಂದಿದೆ. ಪೌರಾಯುಕ್ತೆಯ ಕಣ್ಣೀರು ಆಡಳಿತ ವ್ಯವಸ್ಥೆಯಲ್ಲಿರುವ ಅಸಮರ್ಪಕತೆಯನ್ನು ಬಯಲಿಗೆಳೆದಿದೆ.

ಒಟ್ಟಿನಲ್ಲಿ ಹೇಳಬೇಕು ಅಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದ ಈ ಘಟನೆ ಆಡಳಿತ ಮತ್ತು ರಾಜಕೀಯದ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಪೌರಾಯುಕ್ತೆ ಅಮೃತ ಗೌಡ ಅವರ ಕಣ್ಣೀರು, ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರುವುದರಿಂದ ಉಂಟಾಗುವ ದುಸ್ಥಿತಿಯನ್ನು ತೋರಿಸಿದೆ. ಸಾರ್ವಜನಿಕರು ಅಧಿಕಾರಿಗಳ ಪರವಾಗಿ ನಿಂತು, ಆಡಳಿತ ವ್ಯವಸ್ಥೆ ಶಿಸ್ತಿನಿಂದ ನಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಘಟನೆ ಮುಂದಿನ ದಿನಗಳಲ್ಲಿ ರಾಜಕೀಯ ಮತ್ತು ಆಡಳಿತದ ಸಂಬಂಧದ ಮೇಲೆ ಚರ್ಚೆಗೆ ಕಾರಣವಾಯ್ತು ನೋಡಿ.   

Latest News