Jan 25, 2026 Languages : ಕನ್ನಡ | English

ಗಿಲ್ಲಿ ಬಿಗ್ಬಾಸ್ ಗೆಲ್ಲೋದಿಲ್ಲ ನೋಡಿ - ಸವಾಲ್ ಹಾಕಿದ್ದೆ ತಪ್ಪಾಯ್ತು ಚಾಲೆಂಜ್ ಸ್ವೀಕರಿಸಲೇಬೇಕಾಯ್ತು!!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಕಾರ್ಯಕ್ರಮವೂ ನಿನ್ನೆಯಷ್ಟೇ ಮುಗಿದು, ನಟ ಗಿಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಈ ಗೆಲುವು ಅಭಿಮಾನಿಗಳಲ್ಲಿ ಸಂಭ್ರಮದ ಅಲೆ ಎಬ್ಬಿಸಿದರೆ, ಕೆಲವರಲ್ಲಿ ಅಚ್ಚರಿಯ ಪ್ರತಿಕ್ರಿಯೆಗಳಿಗೂ ಕಾರಣವಾಯಿತು. ಹೌದು ಗಿಲ್ಲಿ ಗೆಲ್ಲುವುದಿಲ್ಲ ಎಂದು ನಂಬಿದ್ದ ಒಬ್ಬ ಅಭಿಮಾನಿ, ತಮ್ಮ ಸ್ನೇಹಿತರ ಮುಂದೆ ಧೈರ್ಯವಾಗಿ ಒಂದು ಚಾಲೆಂಜ್ ಹಾಕಿದ್ದರು. “ಗಿಲ್ಲಿ ಗೆದ್ದರೆ ನಾನು ಅರ್ಧ ಮೀಸೆ, ಗಡ್ಡ ತೆಗೆದುಕೊಳ್ಳುತ್ತೇನೆ” ಎಂದು. ಅದ್ರಂತೆ ಬಿಗ್ ಬಾಸ್ ಫೈನಲ್‌ನಲ್ಲಿ ಗಿಲ್ಲಿ ಗೆಲುವು ಸಾಧಿಸಿದ ಕ್ಷಣ, ಆ ಚಾಲೆಂಜ್ ನೆನಪಿಗೆ ಬಂತು. ಮಾತಿನ ಮೌಲ್ಯ ಕಾಪಾಡಲು, ಆ ವ್ಯಕ್ತಿ ನಿಜವಾಗಿಯೂ ಅರ್ಧ ಮೀಸೆ ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದರು.  

ಗಿಲ್ಲಿ ಗೆಲ್ಲಲ್ಲ ಎಂದು ಚಾಲೆಂಜ್ - ಗಿಲ್ಲಿ ಗೆದ್ದ ಬೆನ್ನಲ್ಲೇ ಕತ್ತರಿ ಹಿಡಿದ ಯುವಕ!!
ಗಿಲ್ಲಿ ಗೆಲ್ಲಲ್ಲ ಎಂದು ಚಾಲೆಂಜ್ - ಗಿಲ್ಲಿ ಗೆದ್ದ ಬೆನ್ನಲ್ಲೇ ಕತ್ತರಿ ಹಿಡಿದ ಯುವಕ!!

ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಹಲವರಲ್ಲಿ ಕುತೂಹಲ ಮೂಡಿಸಿದೆ. ಕೆಲವರು ಇದನ್ನು 'ಮಾತಿನ ಮೌಲ್ಯ ಕಾಪಾಡಿದ ನಿಷ್ಠೆ' ಎಂದು ಮೆಚ್ಚಿದರೆ, ಇನ್ನು ಕೆಲವರು 'ಹಾಸ್ಯಭರಿತ ಪ್ರತಿಕ್ರಿಯೆ' ಎಂದು ನೋಡಿದರು. ಅರ್ಧ ಮೀಸೆ, ಅರ್ಧ ಗಡ್ಡದ ಮುಖವು ಜನರಲ್ಲಿ ನಗು ಮೂಡಿಸಿದರೂ, ಆ ವ್ಯಕ್ತಿಯ ಧೈರ್ಯ ಮತ್ತು ಮಾತಿನ ಗೌರವ ಎಲ್ಲರ ಗಮನ ಸೆಳೆದಿದೆ. ಹೌದು ಗಿಲ್ಲಿ ಅಭಿಮಾನಿಗಳು ತಮ್ಮ ಹೀರೋ ಗೆದ್ದಿದ್ದಾರೆ ಎಂಬ ಸಂತಸದಲ್ಲಿ ತೇಲಾಡುತ್ತಿದ್ದಾರೆ. “ನಮ್ಮ ಹೀರೋ ಗೆದ್ದಿದ್ದಾರೆ, ಇದು ನಮ್ಮ ಸಂಭ್ರಮದ ದಿನ” ಎಂದು ಹರ್ಷೋದ್ಗಾರ ವ್ಯಕ್ತಪಡಿಸಿದರು. ಚಾಲೆಂಜ್ ಹಾಕಿದ ವ್ಯಕ್ತಿಯ ಸ್ನೇಹಿತರು, “ಮಾತು ತಪ್ಪದೆ ನಿಂತಿದ್ದಾನೆ, ಇದು ನಿಜವಾದ ಅಭಿಮಾನಿಯ ನಿಷ್ಠೆ” ಎಂದು ಶ್ಲಾಘಿಸಿದರು. ಹೌದು ಸಾಮಾಜಿಕ ಮಾಧ್ಯಮ ಬಳಕೆದಾರರು ಅರ್ಧ ಮೀಸೆ, ಅರ್ಧ ಗಡ್ಡದ ಫೋಟೋಗಳನ್ನು ಹಂಚಿಕೊಂಡು, “ಇದು ಬಿಗ್ ಬಾಸ್ ಹಾಸ್ಯಮಯ ಕ್ಷಣ” ಎಂದು ಕಾಮೆಂಟ್ ಮಾಡಿದರು.  

ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ನಟನೆ, ಕಾಮಿಡಿ ಝಲಕ್, ಹಾಗೂ ಸರಳ ವ್ಯಕ್ತಿತ್ವದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದರು. ಅವರ ಗೆಲುವು ಕೇವಲ ಒಂದು ಶೋಯಲ್ಲ, ಬಡವರ ಮಕ್ಕಳಿಗೆ ಪ್ರೇರಣೆ, ಅಭಿಮಾನಿಗಳಿಗೆ ಸಂತಸ, ಹಾಗೂ ಸಮಾಜದಲ್ಲಿ ''ಮಾತಿನ ಮೌಲ್ಯ'' ಎಷ್ಟು ಮುಖ್ಯವೆಂಬುದನ್ನು ನೆನಪಿಸುವ ಘಟನೆ. ಕೊನೆಗೆ, ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ಘಟನೆ ಕೇವಲ ಗಿಲ್ಲಿ ಗೆಲುವಿನ ಸಂಭ್ರಮವಲ್ಲ. ಇದು 'ಅಭಿಮಾನಿಯ ನಿಷ್ಠೆ, ಮಾತಿನ ಗೌರವ, ಹಾಗೂ ಹಾಸ್ಯದ ಮಿಶ್ರಣ'. ಅರ್ಧ ಮೀಸೆ, ಅರ್ಧ ಗಡ್ಡದ ಮುಖವು ಜನರಲ್ಲಿ ನಗು ಮೂಡಿಸಿದರೂ, ಅದರ ಹಿಂದೆ ಇರುವ ಮಾನವೀಯತೆ ಎಲ್ಲರ ಮನಸ್ಸಿಗೆ ತಟ್ಟಿದೆ.  

Latest News