ಬೆಂಗಳೂರು ಐಟಿ ಮಂದಿಗೆ ಹಬ್ಬದ ಸುದ್ದಿ - ಯೆಲ್ಲೋ ಲೈನ್‌ಗೆ ಎಂಟ್ರಿ ಕೊಟ್ಟವು ಹೊಸ ಬ್ರ್ಯಾಂಡ್ ನ್ಯೂ ಟ್ರೈನ್‌ಗಳು!!

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಒಂದು ಸೂಪರ್ ಗುಡ್ ನ್ಯೂಸ್! ನೀವು ಪ್ರತಿದಿನ ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ ಕಡೆ ಮೆಟ್ರೋದಲ್ಲಿ ಓಡಾಡೋರಾಗಿದ್ರೆ, ಇನ್ಮುಂದೆ ನಿಮ್ಮ ಜರ್ನಿ ಇನ್ನಷ್ಟು ಈಸಿ ಆಗಲಿದೆ. ಯಾಕಂದ್ರೆ, ಇಂದಿನಿಂದಲೇ ನಮ್ಮ ಹೆಮ್ಮೆಯ ನಮ್ಮ ಮೆಟ್ರೋದ ‘ಯೆಲ್ಲೋ ಲೈನ್’ (ಹಳದಿ ಮಾರ್ಗ) ಟ್ರ್ಯಾಕ್‌ಗೆ ಹೊಸದಾಗಿ ಎರಡು ಬ್ರ್ಯಾಂಡ್ ನ್ಯೂ ರೈಲುಗಳು ಎಂಟ್ರಿ ಕೊಟ್ಟಿವೆ. ಹೌದು, ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸಂಚರಿಸೋ ಪ್ರಯಾಣಿಕರ ಹಬ್ಬದ ದಿನಗಳು ಇಂದಿನಿಂದ ಶುರುವಾಗಿದೆ ಅಂತಾನೇ ಹೇಳಬಹುದು. ಇವತ್ತು ಬೆಳಗ್ಗೆಯಿಂದಲೇ ಈ ಹೊಸ ರೈಲುಗಳು ಹಳಿ ಮೇಲೆ ಓಡಾಡಲು ಶುರು ಮಾಡಿವೆ.

ಟ್ರೋ ಪ್ರಯಾಣಿಕರಿಗೆ ಇಂದಿನಿಂದಲೇ ಸಿಕ್ತು ಬಿಗ್ ಸರ್ಪ್ರೈಸ್ ಗಿಫ್ಟ್!
ಟ್ರೋ ಪ್ರಯಾಣಿಕರಿಗೆ ಇಂದಿನಿಂದಲೇ ಸಿಕ್ತು ಬಿಗ್ ಸರ್ಪ್ರೈಸ್ ಗಿಫ್ಟ್!

ರೈಲುಗಳ ಸಂಖ್ಯೆ ಈಗ 'ಹತ್ತು'!

ಇಲ್ಲಿಯವರೆಗೆ ಈ ಹಳದಿ ಮಾರ್ಗದಲ್ಲಿ ಕೇವಲ 8 ರೈಲುಗಳು ಮಾತ್ರ ಆಕಡೆ ಈಕಡೆ ಓಡಾಡಿಕೊಂಡಿದ್ದವು. ಹಾಗಾಗಿ ಜನ ಜಾಸ್ತಿ ಇದ್ದಾಗ ಅಥವಾ ಆಫೀಸ್ ಟೈಮ್‌ನಲ್ಲಿ ಮೆಟ್ರೋ ಕಾಯೋದು ಸ್ವಲ್ಪ ತಲೆನೋವಿನ ಕೆಲಸವಾಗಿತ್ತು. ಆದ್ರೆ ಇನ್ಮುಂದೆ ಆ ಟೆನ್ಷನ್ ಇಲ್ಲ. ಇವತ್ತಿನಿಂದ ಎರಡು ಹೊಸ ರೈಲುಗಳು ಜಾಯಿನ್ ಆಗಿರೋದ್ರಿಂದ, ಯೆಲ್ಲೋ ಲೈನ್‌ನಲ್ಲಿ ಓಡಾಡೋ ಒಟ್ಟು ಮೆಟ್ರೋ ರೈಲುಗಳ ಸಂಖ್ಯೆ ಈಗ ಹತ್ತಕ್ಕೆ (10) ಏರಿಕೆಯಾಗಿದೆ. ಇದರಿಂದಾಗಿ ಮೆಟ್ರೋ ಫ್ರೀಕ್ವೆನ್ಸಿ ಅಂದ್ರೆ ಒಂದು ರೈಲು ಹೋದಮೇಲೆ ಇನ್ನೊಂದು ರೈಲು ಬರೋ ಸಮಯದ ಅಂತರ ಭರ್ಜರಿಯಾಗಿ ಕಮ್ಮಿಯಾಗಿದೆ.

ಹೊಸ ಟೈಮಿಂಗ್ಸ್ ಏನಾಗಿದೆ?: 

ಈಗ ಎರಡು ಹೊಸ ರೈಲುಗಳು ಬಂದಿರೋದ್ರಿಂದ, ಇನ್ಮುಂದೆ ಕೇವಲ 7 ನಿಮಿಷಕ್ಕೊಮ್ಮೆ ನಿಮಗೆ ರೈಲು ಸಿಗುತ್ತೆ! ಅಂದ್ರೆ ನೀವು ನಿಲ್ದಾಣಕ್ಕೆ ಬಂದು ನಿಂತ ತಕ್ಷಣ ಗರಂ ಗರಂ ಕಾಫಿ ಕುಡಿಯೋ ಅಷ್ಟರಲ್ಲಿ ಟ್ರೈನ್ ನಿಮ್ಮ ಮುಂದೆ ಬಂದು ನಿಲ್ಲುತ್ತೆ.

ಸಾಮಾನ್ಯ ಸಮಯ ಹಾಗೂ ವೀಕೆಂಡ್ ಕಥೆ ಏನು?

ಇನ್ನು ಜನ ಕಡಿಮೆ ಇರೋ ಬೇರೆ ಸಮಯದಲ್ಲಿ (Non-Peak Hours) ಮುಂಚೆ ರೈಲು ಬರಬೇಕಾದ್ರೆ ಬರೋಬ್ಬರಿ 14 ನಿಮಿಷ ಕಾಯಬೇಕಾಗಿತ್ತು. ಒಮ್ಮೊಮ್ಮೆ ಸುಮ್ಮನೆ ಪ್ಲಾಟ್‌ಫಾರ್ಮ್‌ನಲ್ಲಿ ಕುಳಿತು ಬೋರ್ ಆಗ್ತಿತ್ತು. ಆದ್ರೆ ಇನ್ಮುಂದೆ ನಾನ್ പೀಕ್ ಅವರ್ಸ್‌ನಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಮೆಟ್ರೋ ನಿಮ್ಮ ಸೇವೆಗೆ ಸಿಗಲಿದೆ.

ಇನ್ನು ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರದ ಬಗ್ಗೆ ಹೇಳೋದಾದ್ರೆ, ವೀಕೆಂಡ್‌ನಲ್ಲಿ ಎಂಜಾಯ್ ಮಾಡೋಕೆ ಹೋಗೋರಿಗಾಗಿ ದಿನವಿಡೀ ಪ್ರತಿ 10 ನಿಮಿಷಕ್ಕೊಮ್ಮೆ ರೈಲುಗಳು ಎಂದಿನಂತೆ ಸಂಚರಿಸಲಿವೆ. ಇದರಿಂದಾಗಿ ಶನಿವಾರ, ಭಾನುವಾರ ಸಿಟಿ ರೌಂಡ್ಸ್ ಹಾಕೋರಿಗೂ ಸಖತ್ ಹೆಲ್ಪ್ ಆಗಲಿದೆ.

ಫಸ್ಟ್‌ ಅಂಡ್ ಲಾಸ್ಟ್ ಟ್ರೈನ್ ಟೈಮಿಂಗ್ಸ್ ಬದಲಾಗಿದೆಯಾ?

ಇಲ್ಲ, ಇಲ್ಲ! ಬಿಎಂಆರ್‌ಸಿಎಲ್ (BMRCL) ಒಂದು ವಿಷಯವನ್ನು ಸ್ಪಷ್ಟಪಡಿಸಿದೆ. ರೈಲುಗಳ ಸಂಖ್ಯೆ ಜಾಸ್ತಿಯಾಗಿರೋದು ಮತ್ತು ಟ್ರೈನ್ ಸಿಗೋ ಸಮಯದ ಅಂತರ ಕಮ್ಮಿಯಾಗಿರೋದು ಬಿಟ್ಟರೆ, ಬೆಳಗಿನ ಮೊದಲ ರೈಲು ಮತ್ತು ರಾತ್ರಿಯ ಕೊನೆಯ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಚೇಂಜಸ್ ಮಾಡಿಲ್ಲ. ವಾರದ ಯಾವುದೇ ದಿನದಲ್ಲೂ ಆರ್.ವಿ. ರಸ್ತೆ ಟರ್ಮಿನಲ್ ಮತ್ತು ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡೋ ಮೊದಲ ಹಾಗೂ ಕೊನೆಯ ರೈಲುಗಳು ತಮ್ಮ ಹಳೆಯ ಫಿಕ್ಸ್ಡ್ ಟೈಮಿಂಗ್ಸ್ ಪ್ರಕಾರವೇ ಓಡಾಡಲಿವೆ. ಹಾಗಾಗಿ ಲೇಟ್ ನೈಟ್ ಟ್ರಾವೆಲ್ ಮಾಡೋರು ಕನ್ಫ್ಯೂಸ್ ಆಗೋ ಅಗತ್ಯವೇ ಇಲ್ಲ.

ಪ್ರಯಾಣಿಕರ ರಿಯಾಕ್ಷನ್ ಹೇಗಿದೆ?

ಮೆಟ್ರೋದ ಈ ಸಡನ್ ಸರ್ಪ್ರೈಸ್ ನಿರ್ಧಾರಕ್ಕೆ ನಮ್ಮ ಬೆಂಗಳೂರು ಐಟಿ ಮಂದಿ ಮತ್ತು ನಿತ್ಯ ಪ್ರಯಾಣಿಕರು ಸಖತ್ ಖುಷಿಯಾಗಿದ್ದಾರೆ. "ಪ್ರತಿದಿನ ಸಿಲ್ಕ್ ಬೋರ್ಡ್ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡೋದಕ್ಕಿಂತ ಯೆಲ್ಲೋ ಲೈನ್ ಮೆಟ್ರೋ ಬೆಸ್ಟ್ ಆಪ್ಷನ್ ಆಗಿತ್ತು. ಈಗ 7 ನಿಮಿಷಕ್ಕೊಮ್ಮೆ ಟ್ರೈನ್ ಸಿಗುತ್ತೆ ಅಂದ್ರೆ ಇನ್ನು ಲಗೇಜ್ ತರಹ ಮೆಟ್ರೋ ಒಳಗಡೆ ನುಗ್ಗೋದು ತಪ್ಪುತ್ತೆ, ಆರಾಮಾಗಿ ಹೋಗಬಹುದು" ಅಂತ ಆಫೀಸ್ ಗೋಯರ್ಸ್ ತಮ್ಮ ಖುಷಿ ಹಂಚಿಕೊಳ್ತಿದ್ದಾರೆ.

Latest News