Apr 15, 2026 Languages : ಕನ್ನಡ | English

ತೈಲ ಬೆಲೆ ಏರಿಕೆ ಆತಂಕಕ್ಕೆ ಬ್ರೇಕ್? ಯುದ್ಧ ಅಂತ್ಯದ ಸುಳಿವು ಕೊಟ್ಟ ಅಮೆರಿಕಾ ಅಧ್ಯಕ್ಷ!!

ಕಳೆದ ಕೆಲವು ದಿನಗಳಿಂದ ಇಡೀ ಜಗತ್ತನ್ನೇ ನಡುಗಿಸಿದ್ದ ಅಮೆರಿಕಾ ಮತ್ತು ಇರಾನ್ ನಡುವಿನ ಕಿತ್ತಾಟ ಈಗ ಪಾಸಿಟಿವ್ ಟರ್ನ್ ತಗೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿರೋ ಲೇಟೆಸ್ಟ್ ಸ್ಟೇಟ್‌ಮೆಂಟ್ ನೋಡಿದ್ರೆ, ಅಬ್ಬಾಹೇಗೋ ಯುದ್ಧ ಮುಗಿಯುತ್ತೆ ಅನ್ನೋ ಭರವಸೆ ಮೂಡಿದೆ.

ಪಾಕಿಸ್ತಾನದಲ್ಲಿ ನಡೆಯಲಿದೆ ಬಿಗ್ ಗೇಮ್
ಪಾಕಿಸ್ತಾನದಲ್ಲಿ ನಡೆಯಲಿದೆ ಬಿಗ್ ಗೇಮ್

ಟ್ರಂಪ್, ಇನ್ನೊಂದು ಎರಡು ದಿನಗಳಲ್ಲಿ ಏನಾದರೂ ದೊಡ್ಡ ಮಟ್ಟದ ಬದಲಾವಣೆ ಆಗಬಹುದು, ನಾವು ಶಾಂತಿ ಮಾತುಕತೆಗೆ ರೆಡಿಯಾಗಿದ್ದೇವೆ ಅಂತ ಒಂದು ಸುಳಿವು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ರಾಜಿ ಮಾಡಿಸೋ ವಿಷ್ಯದಲ್ಲಿ ಪಾಕಿಸ್ತಾನ ಮಿಲಿಟರಿ ವಹಿಸುತ್ತಿರೋ ಪಾತ್ರವನ್ನ ಕೂಡ ಟ್ರಂಪ್ ಹೊಗಳಿದ್ದಾರೆ. ಟ್ರಂಪ್ ಅವರ ಈ ಪಾಸಿಟಿವ್ ಮಾತುಗಳು ಇಡೀ ವಿಶ್ವದ ಗಮನ ಸೆಳೆದಿದ್ದು, ಎಲ್ಲೆಡೆ ಈಗ ಇದೇ ಚರ್ಚೆ ನಡೀತಿದೆ.

ಸದ್ಯದ ಮಾಹಿತಿಯ ಪ್ರಕಾರ, ವಾಷಿಂಗ್ಟನ್ ಮತ್ತು ಟೆಹ್ರಾನ್‌ನ ರಾಜತಾಂತ್ರಿಕ ಅಧಿಕಾರಿಗಳು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಬರುವ ಸಾಧ್ಯತೆ ಇದೆ. ಮೊನ್ನೆ ನಡೆದ ಮಾತುಕತೆಗಳು ಅಂದುಕೊಂಡಷ್ಟು ಯಶಸ್ವಿಯಾಗದಿದ್ದರೂ, ಟ್ರಂಪ್ ಮಾತ್ರ "ಯುದ್ಧ ಅಂತ್ಯದ ಹಂತಕ್ಕೆ ಬಂದಿದೆ" ಎಂದು ಹೇಳುತ್ತಿರುವುದು ಏನೋ ದೊಡ್ಡ ಪ್ಲಾನ್ ನಡೆಯುತ್ತಿದೆ ಅನ್ನೋದಕ್ಕೆ ಸಾಕ್ಷಿ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಇರಾನ್‌ಗೆ ಒಂದು ಆಫರ್ ನೀಡಿದ್ದಾರೆ: "ನೀವು ಅಣ್ವಸ್ತ್ರ ತಯಾರಿಸುವುದನ್ನ ನಿಲ್ಲಿಸಿದರೆ, ನಿಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಾವು ಸಹಾಯ ಮಾಡುತ್ತೇವೆ." ಆದರೆ ಇರಾನ್ ಮಾತ್ರ, "ನಮ್ಮ ಅಣ್ವಸ್ತ್ರ ಯೋಜನೆಗಳು ಕೇವಲ ಶಾಂತಿಯುತ ಉದ್ದೇಶಕ್ಕಾಗಿ ಮಾತ್ರ" ಅಂತ ತನ್ನ ಹಠ ಮುಂದುವರಿಸಿದೆ.

ನೆಲಮಟ್ಟದ ಪರಿಸ್ಥಿತಿ ಹೇಗಿದೆ?

  • ಮಾತುಕತೆ ಒಂದು ಕಡೆ ನಡೆಯುತ್ತಿದ್ದರೆ, ಅಮೆರಿಕಾ ತನ್ನ 'ಮ್ಯಾಕ್ಸಿಮಮ್ ಪ್ರೆಶರ್' ತಂತ್ರವನ್ನ ಕೈಬಿಟ್ಟಿಲ್ಲ.
  • ಇರಾನ್ ಮೇಲೆ ಕಠಿಣ ನಿರ್ಬಂಧ ಹೇರಲಾಗಿದೆ.
  • ಕಳೆದ 24 ಗಂಟೆಗಳಲ್ಲಿ ಇರಾನ್‌ನ ಕನಿಷ್ಠ 6 ಹಡಗುಗಳನ್ನು ವಾಪಸ್ ಕಳಿಸಲಾಗಿದೆ.
  • ಬರೀ ಮೆಡಿಕಲ್ ಮತ್ತು ಫುಡ್ ಸಪ್ಲೈಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಈಗಲೂ ಕೆಲವು ಹಡಗುಗಳು ಸಂಚರಿಸುತ್ತಿವೆ. ಈ ಮಾರ್ಗವು ಜಾಗತಿಕ ತೈಲ ಸಾಗಣೆಗೆ ತುಂಬಾ ಮುಖ್ಯ. ಇಲ್ಲಿ ಏನಾದರೂ ಹೆಚ್ಚುಕಮ್ಮಿ ಆದ್ರೆ, ಜಗತ್ತಿನಾದ್ಯಂತ ತೈಲ ಬೆಲೆ ಗಗನಕ್ಕೇರೋದ್ರಲ್ಲಿ ಸಂಶಯವೇ ಇಲ್ಲ. ಇದೇ ಕಾರಣಕ್ಕೆ ಇಡೀ ಜಗತ್ತು ಈ ಬೆಳವಣಿಗೆಯನ್ನ ಉಸಿರು ಬಿಗಿಹಿಡಿದು ನೋಡ್ತಿದೆ.

Latest News