Dec 16, 2025 Languages : ಕನ್ನಡ | English

ಸ್ಕೈಡೈವಿಂಗ್ ಸಾಹಸ – ಪ್ಯಾರಾಚೂಟ್ ವಿಮಾನದ ರೆಕ್ಕೆಗೆ ಸಿಕ್ಕಿ ಹಾಕಿಕೊಂಡ ಭಯಂಕರ ಘಟನೆ

ಆಸ್ಟ್ರೇಲಿಯಾದ ಫಾರ್ ನಾರ್ತ್ ಕ್ವೀನ್ಸ್‌ಲ್ಯಾಂಡ್ ಪ್ರದೇಶದಲ್ಲಿ ನಡೆದ ಸ್ಕೈಡೈವಿಂಗ್ ಘಟನೆ ಒಂದು ರೋಮಾಂಚಕ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದೆ. ಸೆಪ್ಟೆಂಬರ್ 20ರಂದು, ಟಲ್ಲಿ ಏರ್‌ಪೋರ್ಟ್ನಿಂದ ಹೊರಟ ಸೆಸ್ನಾ ಕಾರವಾನ್ ವಿಮಾನದಿಂದ 17 ಸ್ಕೈಡೈವರ್‌ಗಳು ಜಿಗಿಯುವ ಯೋಜನೆ ಹೊಂದಿದ್ದರು. ಆದರೆ ಮೊದಲ ಸ್ಕೈಡೈವರ್ ವಿಮಾನದಿಂದ ಹೊರಬಂದ ಕ್ಷಣದಲ್ಲೇ ಅವನ ರಿಸರ್ವ್ ಪ್ಯಾರಾಚೂಟ್ನ ಹ್ಯಾಂಡಲ್ ವಿಮಾನದ ರೆಕ್ಕೆಗೆ ಸಿಕ್ಕಿಹಾಕಿಕೊಂಡು ಅಪಾಯದ ಸ್ಥಿತಿ ಉಂಟಾಯಿತು. 

15 ಸಾವಿರ ಅಡಿಗಳ ಎತ್ತರದಲ್ಲಿ ಸ್ಕೈಡೈವರ್‌ನ ಪ್ಯಾರಾಚೂಟ್ ವಿಮಾನಕ್ಕೆ ಸಿಕ್ಕಿಹಾಕಿಕೊಂಡ ದೃಶ್ಯ
15 ಸಾವಿರ ಅಡಿಗಳ ಎತ್ತರದಲ್ಲಿ ಸ್ಕೈಡೈವರ್‌ನ ಪ್ಯಾರಾಚೂಟ್ ವಿಮಾನಕ್ಕೆ ಸಿಕ್ಕಿಹಾಕಿಕೊಂಡ ದೃಶ್ಯ

ಪ್ಯಾರಾಚೂಟ್ ಸಿಕ್ಕಿಹಾಕಿಕೊಂಡು ವಿಮಾನವೇ ಸ್ಥಗಿತ?

ಪ್ಯಾರಾಚೂಟ್ ವಿಮಾನದ ಹೋರಿಜಾಂಟಲ್ ಸ್ಟೆಬಿಲೈಸರ್ಗೆ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ವಿಮಾನದ ವೇಗ ತೀವ್ರವಾಗಿ ಕುಸಿತಗೊಂಡಿತು. ಪೈಲಟ್‌ಗೆ ವಿಮಾನ ಸ್ಥಗಿತಗೊಂಡಂತಾಗಿದ್ದು, ತಕ್ಷಣವೇ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡರು. ಈ ವೇಳೆ 13 ಸ್ಕೈಡೈವರ್‌ಗಳು ಸುರಕ್ಷಿತವಾಗಿ ಜಿಗಿದಿದ್ದರು. ಆದರೆ ಸಿಕ್ಕಿಹಾಕಿಕೊಂಡ ಸ್ಕೈಡೈವರ್ 11 ರೋಪ್‌ಗಳನ್ನು ಕತ್ತರಿಸಿ, ತನ್ನ ಮೇನ್ ಪ್ಯಾರಾಚೂಟ್ ಬಳಸಿ ಭೂಮಿಗೆ ಸುರಕ್ಷಿತವಾಗಿ ಇಳಿದಿದ್ದಾರೆ. 

ಕ್ಯಾಮೆರಾದಲ್ಲಿ ಸೆರೆಯಾದ ರೋಮಾಂಚ

ಈ ಅಪರೂಪದ ಘಟನೆ ಆಸ್ಟ್ರೇಲಿಯನ್ ಟ್ರಾನ್ಸ್‌ಪೋರ್ಟ್ ಸೆಫ್ಟಿ ಬ್ಯೂರೋ (ATSB) ಬಿಡುಗಡೆ ಮಾಡಿದ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ಯಾರಾಚೂಟ್ ವಿಮಾನದ ರೆಕ್ಕೆಗೆ ಸಿಕ್ಕಿಹಾಕಿಕೊಳ್ಳುವ ದೃಶ್ಯ, ಸ್ಕೈಡೈವರ್‌ನ ಕಾಲುಗಳು ವಿಮಾನಕ್ಕೆ ಢಿಕ್ಕಿ ಹೊಡೆದು, ನಂತರ ಪ್ಯಾರಾಚೂಟ್ ರೆಕ್ಕೆಗೆ ಸುತ್ತಿಕೊಳ್ಳುವ ದೃಶ್ಯಗಳು ಜನರನ್ನು ಬೆಚ್ಚಿಬೀಳುವಂತೆ ಮಾಡಿವೆ.

ಪೈಲಟ್ ಮತ್ತು ಸ್ಕೈಡೈವರ್‌ನ ಚುರುಕಿನ ಪ್ರತಿಕ್ರಿಯೆ

ಪೈಲಟ್ ತಕ್ಷಣವೇ ವಿಮಾನವನ್ನು ಸಮತಟ್ಟಾಗಿ ಹಾರಿಸಲು ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡರು. ಸ್ಕೈಡೈವರ್ ಕೂಡ ಹುಕ್ ನೈಫ್ ಬಳಸಿ ಪ್ಯಾರಾಚೂಟ್ ಕತ್ತರಿಸಿ ತನ್ನನ್ನು ವಿಮಾನದಿಂದ ಮುಕ್ತಗೊಳಿಸಿದರು. ಈ ಚುರುಕಿನ ಪ್ರತಿಕ್ರಿಯೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಸ್ಕೈಡೈವರ್‌ಗೆ ಸಣ್ಣ ಗಾಯಗಳು ಮಾತ್ರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.