ಮಹಿಳೆಯರ ದಿನನಿತ್ಯದ ಉಡುಪಿನಲ್ಲಿ ಬ್ರಾ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಗಾತ್ರದ ಬ್ರಾ ಧರಿಸುವುದು ದೇಹದ ಆಕಾರವನ್ನ ಕಾಪಾಡಲು ಹಾಗೂ ಆರಾಮ ನೀಡಲು ಸಹಾಯ ಮಾಡುತ್ತದೆ. ಆದರೆ ರಾತ್ರಿ ಮಲಗುವಾಗ ಬ್ರಾ ಧರಿಸಬೇಕೇ, ಬೇಡವೇ ಎಂಬ ಪ್ರಶ್ನೆ ಮಹಿಳೆಯರಲ್ಲಿ ಕಂಡುಬರುತ್ತದೆ. ಈ ಬಗ್ಗೆ ಆರೋಗ್ಯದ ದೃಷ್ಟಿಯಿಂದ ತಜ್ಞರ ಸಲಹೆಗಳನ್ನ ಇಲ್ಲಿ ನೀಡಲಾಗಿದೆ.
ಬಿಗಿಯಾದ ಬ್ರಾ ಮತ್ತು ಆರೋಗ್ಯ ಸಮಸ್ಯೆಗಳು
ತಜ್ಞರ ಅಭಿಪ್ರಾಯದ ಪ್ರಕಾರ, ರಾತ್ರಿಯ ಸಮಯದಲ್ಲಿ ತುಂಬಾ ಬಿಗಿಯಾದ ಬ್ರಾಗಳನ್ನು ಧರಿಸಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯ ಆಯ್ಕೆಯಲ್ಲ. ನಾವು ವಿಶ್ರಾಂತಿ ಪಡೆಯುವ ಸಮಯದಲ್ಲಿ ದೇಹಕ್ಕೆ ಆರಾಮದಾಯಕವಾದ ಗಾಳಿಯಾಡುವ ಬಟ್ಟೆಗಳ ಅವಶ್ಯಕತೆ ಇರುತ್ತದೆ. ಬಿಗಿಯಾದ ಉಡುಪುಗಳು ರಕ್ತಸಂಚಾರಕ್ಕೆ ಅಡ್ಡಿಪಡಿಸಬಹುದು, ಚರ್ಮದ ಮೇಲೆ ಒತ್ತಡವನ್ನು ಉಂಟುಮಾಡಬಹುದು.
ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕುಗಳ ಭಯ
ರಾತ್ರಿ ಮಲಗುವಾಗ ಬಿಗಿಯಾದ ಬ್ರಾ ಧರಿಸುವುದರಿಂದ ಆಗುವ ಪ್ರಮುಖ ತೊಂದರೆಯೆಂದರೆ ಬೆವರಿನ ಸಮಸ್ಯೆ. ದೇಹದ ಈ ಭಾಗವು ತುಂಬಾ ಸೂಕ್ಷ್ಮವಾಗಿರುತ್ತದೆ. ಬಿಗಿಯಾದ ಬಟ್ಟೆಯಿಂದಾಗಿ ಬೆವರು ಹೆಚ್ಚಾಗಿ ಸಂಗ್ರಹವಾಗಬಹುದು, ಇದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕುಗಳು ಹರಡಲು ದಾರಿ ಮಾಡಿಕೊಡುತ್ತದೆ. ತೇವಾಂಶ ಮತ್ತು ಬೆವರಿನಿಂದಾಗಿ ಚರ್ಮದಲ್ಲಿ ತುರಿಕೆ, ಕೆಂಪು ಗುಳ್ಳೆಗಳು ಅಥವಾ ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಚರ್ಮದ ಕಿರಿಕಿರಿ ಮತ್ತು ಅಲರ್ಜಿ
ವಿಶೇಷವಾಗಿ ಸ್ತನಗಳ ಭಾಗದ ಚರ್ಮವು ಬಹಳ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ರಾತ್ರಿಯಿಡೀ ಬಿಗಿಯಾದ ಬ್ರಾ ಧರಿಸುವುದರಿಂದ ಚರ್ಮದ ಮೇಲೆ ಉರಿ ಅಥವಾ ದದ್ದುಗಳು ಉಂಟಾಗಬಹುದು. ದೀರ್ಘಕಾಲದವರೆಗೆ ಇಂತಹ ಅಭ್ಯಾಸವನ್ನ ಮುಂದುವರಿಸುವುದರಿಂದ ಚರ್ಮದ ಬಣ್ಣದಲ್ಲಿ ಬದಲಾವಣೆ ಅಥವಾ ಗಡುಸಾಗುವಿಕೆ ಕಂಡುಬರಬಹುದು. ಆದ್ದರಿಂದ, ರಾತ್ರಿ ಮಲಗುವಾಗ ಚರ್ಮಕ್ಕೆ ಉಸಿರಾಡಲು ಅವಕಾಶ ನೀಡುವಂತೆ ಸಡಿಲವಾದ ಉಡುಪುಗಳನ್ನ ಧರಿಸುವುದು ಉತ್ತಮ.
ತಜ್ಞರ ಸಲಹೆ ಏನು?
ನೀವು ರಾತ್ರಿ ಬ್ರಾ ಧರಿಸಲೇಬೇಕು ಎಂದಿದ್ದರೆ, ಸಡಿಲವಾದ ಅಥವಾ ಸ್ಪೋರ್ಟ್ಸ್ ಬ್ರಾಗಳಂತಹ ಆರಾಮದಾಯಕ ಆಯ್ಕೆಗಳ ಮಾಡಿಕೊಳ್ಳಿ. ಆದರೆ ಸಾಮಾನ್ಯವಾಗಿ, ಆರೋಗ್ಯದ ದೃಷ್ಟಿಯಿಂದ ರಾತ್ರಿ ಮಲಗುವಾಗ ಬ್ರಾ ಧರಿಸದಿರುವುದೇ ಉತ್ತಮ ಎಂದು ತಜ್ಞರು ತಿಳಿಸುತ್ತಾರೆ. ಇದು ಚರ್ಮದ ಆರೋಗ್ಯವನ್ನ ಕಾಪಾಡುವುದಲ್ಲದೆ, ಆಳವಾದ ಮತ್ತು ಸುಖಕರವಾದ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.