Dec 16, 2025 Languages : ಕನ್ನಡ | English

ಚಳಿಗಾಲದಲ್ಲಿ ಪ್ರವಾಸಿ ತಾಣ ನೋಡಬೇಕಾ? !! ಇಲ್ಲಿಗೆ ಹೋಗಿ ಬನ್ನಿ ಕಳೆದೋಗ್ತೀರಾ!

ಇನ್ನೇನು ಹೊಸ ವರ್ಷ ಬರುತ್ತಿದೆ. ೨೦೨೫ ಕಳೆದು ಇನ್ನೇನು ೨೦೨೬ ರ ಹೊಸ್ತಿಲಲ್ಲಿ ನಾವೆಲ್ಲರೂ ಇದ್ದೇವೆ . ಹೀಗಿರುವಾಗ ಸತತ ಕೆಲಸದ ಒತ್ತಡ ನಡುವೆ ಕುಟುಂಬದ ಜೊತೆ ಸಮಯ ಕಳೆಯಲು ಸಾಕಷ್ಟು ಜನರಿಗೆ ಅವಕಾಶ ಇರುವುದೇ ಇಲ್ಲ. ಹೀಗಿರುವಾಗ ಒತ್ತಡದ ಜೀವನ ನಡುವೆ ಹೊಸ ವರ್ಷಕ್ಕೆ ಚಳಿಗಾಲದ ಸಮಯದಲ್ಲಿ ಕೆಲವು ಪ್ರವಾಸಿ ತಾಣಗಳು ನಿಮ್ಮನ್ನು ಕರೆದುಕೊಂಡು ಹೋಗಲಿವೆ. ನಮ್ಮ ಭಾರತದಲ್ಲಿ ಈ ಅದ್ಭುತವಾದ ಪ್ರವಾಸಿ ತಾಣಗಳು ಚಳಿಗಾಲಕ್ಕೆ ಹೇಳಿ ಮಾಡಿಸಿದ ಜಾಗಗಳು ಎನ್ನಬಹುದು'. ಅವುಗಳ ಪೈಕಿ ನಾವು ಕೆಲವು ಧಾರ್ಮಿಕ ಸ್ಥಳಗಳನ್ನು ಜೊತೆಗೆ ಖುಷಿ ಕ್ಷಣಗಳಿಗೆ ಪ್ರಸಿದ್ದವಾದ ಸ್ಥಳಗಳ ಪಟ್ಟಿ ಸಿದ್ಧತೆ ಮಾಡಿದ್ದೇವೆ. ಗೋವಾ ಪ್ರವಾಸಿಗರು ಸಹ ಈ ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳಬಹುದು. ಈ ಎಲ್ಲವು ಚಳಿಗಾಲದಲ್ಲಿ ಭಾರತವನ್ನು ಅತ್ಯಂತ ಆಕರ್ಷಕವಾಗಿ ತೋರಿಸುತ್ತವೆ.

ಚಳಿಗಾಲದಲ್ಲಿ ಪ್ರವಾಸಿ ತಾಣ ನೋಡಬೇಕಾ? !! ಇಲ್ಲಿಗೆ ಹೋಗಿ ಬನ್ನಿ ಕಳೆದೋಗ್ತೀರಾ!
ಚಳಿಗಾಲದಲ್ಲಿ ಪ್ರವಾಸಿ ತಾಣ ನೋಡಬೇಕಾ? !! ಇಲ್ಲಿಗೆ ಹೋಗಿ ಬನ್ನಿ ಕಳೆದೋಗ್ತೀರಾ!

1. ಅೌಲಿ, ಉತ್ತರಾಖಂಡ

ಅೌಲಿ ಚಳಿಗಾಲದಲ್ಲಿ ಹಿಮಪಾತದಿಂದ ಆವೃತವಾದ ಸ್ಕೀಯಿಂಗ್ ಸ್ಥಳವಾಗಿ ಪರಿವರ್ತಿತವಾಗುತ್ತದೆ. ನಂದಾದೇವಿ ಹಾಗೂ ತ್ರಿಶೂಲ ಶಿಖರಗಳ ನೋಟ ಒಂದು ಕ್ಷಣ ಮೈ ಜುಮ್ ಎನ್ನುವಂತಿದೆ, ಜೋಶಿಮಠದಿಂದ ಕೇಬಲ್ ಕಾರ್, ಹಿಮಚಾಲನ ಮತ್ತು ಹಿಮ ಉತ್ಸವಗಳು ಇಲ್ಲಿ ಹೆಚ್ಚು  ಆಕರ್ಷಣೆ ಆಗುತ್ತವೆ.  ಡಿಸೆಂಬರ್–ಫೆಬ್ರವರಿ ನಡುವೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಆಗಿದೆ. 

2. ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರ

ಪಿರ್ ಪಂಜಾಲ್ ಶ್ರೇಣಿಯಲ್ಲಿ ಇರುವ ಗುಲ್ಮಾರ್ಗ್ ಹಿಮಪಾತದ ಸಾಹಸ ಕ್ರೀಡೆಗಳಿಗೆ ತುಂಬಾನೇ ಪ್ರಸಿದ್ದಿ ಪಡೆದಿದೆ  ಹಾಗೂ  . ವಿಶ್ವದ ಅತ್ಯುನ್ನತ ಗೊಂಡೋಲಾ ರೈಡ್, ಹಿಮಚ್ಛಾದಿತ ಅರಣ್ಯಗಳು ಹಾಗೂ ಹಿಮ ಸ್ಕೇಟಿಂಗ್ ಮತ್ತು ಕಾಶ್ಮೀರದ ಆತಿಥ್ಯ. ಡಿಸೆಂಬರ್ ಅಂತ್ಯದಿಂದ ಮಾರ್ಚ್ ವರೆಗೆ ಪ್ರವಾಸಕ್ಕೆ ಉತ್ತಮ ಸಮಯ.

3. ಗೋವಾ

ಗೋವಾದಲ್ಲಿನ ಬೀಚ್ ಗಳು ಚಳಿಗಾಲಕ್ಕೆ ಅದ್ಬುತ ಅನುಭವ ನೀಡುತ್ತವೆ. ಇಲ್ಲಿ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಹಬ್ಬಗಳು, ಜಲಕ್ರೀಡೆ, ಸಂಗೀತ ಉತ್ಸವಗಳು ಹಾಗೂ ಪಾರ್ಟಿಗಳಿಂದ ತುಂಬಿರುತ್ತದೆ. ನವೆಂಬರ್–ಫೆಬ್ರವರಿ ನಡುವೆ ಗೋವಾಕ್ಕೆ ಭೇಟಿ ನೀಡಲು ಸೂಕ್ತವಾಗಿದೆ. 

4. ಜೈಪುರ, ರಾಜಸ್ಥಾನ

ಪಿಂಕ್ ಸಿಟಿ ಜೈಪುರ ಚಳಿಗಾಲದಲ್ಲಿ ತಂಪಾದ ಹವಾಮಾನದಲ್ಲಿ ಅಮೇರ್ ಕೋಟೆ, ಹವಾಮಹಲ್, ಸಿಟಿ ಪ್ಯಾಲೆಸ್ ಮತ್ತು ಜೈಪುರ ಸಾಹಿತ್ಯ ಉತ್ಸವದೊಂದಿಗೆ ಸಂಸ್ಕೃತಿಯ ಉತ್ಸವ. ಅಕ್ಟೋಬರ್–ಫೆಬ್ರವರಿ ನಡುವೆ ರಾಜಸ್ತಾನದ ಜೈಪುರಕ್ಕೆ ಭೇಟಿ ನೀಡಲು ಉತ್ತಮ.

5. ವಾರಾಣಸಿ, ಉತ್ತರಪ್ರದೇಶ

ಜಗತ್ತಿನ ಅತ್ಯಂತ ಹಳೆಯ ನಗರಗಳಲ್ಲಿ ಇದು ಕೂಡ ಒಂದು.  ವಾರಾಣಸಿ ಚಳಿಗಾಲದಲ್ಲಿ ಧಾರ್ಮಿಕ ಶಾಂತಿ, ಗಂಗಾ ಆರತಿ, ಸರ್ಣಾಥ ಮತ್ತು ಸಂಗೀತ ಉತ್ಸವಗಳೊಂದಿಗೆ ಆಧ್ಯಾತ್ಮಿಕ ಅನುಭವ. ನವೆಂಬರ್–ಫೆಬ್ರವರಿ ನಡುವೆ ಭೇಟಿ ನೀಡಲು ಸೂಕ್ತ.

6. ಟವಾಂಗ್, ಅರುಣಾಚಲ ಪ್ರದೇಶ

10,000 ಅಡಿ ಎತ್ತರದಲ್ಲಿರುವ ಟವಾಂಗ್ ಬೌದ್ಧ ಪರಂಪರೆ ಮತ್ತು ಹಿಮಪಾತದ ನೋಟಗಳಿಂದ ತುಂಬಿರುತ್ತದೆ. ಟವಾಂಗ್ ಮಠ, ಸೆಲಾ ಪಾಸ್, ಹಿಮ ಸರೋವರಗಳು ಮತ್ತು ಸ್ಥಳೀಯ ಉತ್ಸವಗಳು. ನವೆಂಬರ್–ಮಾರ್ಚ್ ನಡುವೆ ಭೇಟಿ ನೀಡಲು ಉತ್ತಮ ಎನ್ನಬಹುದು. 

7. ಕಚ್ ರಣ್, ಗುಜರಾತ್

ಚಳಿಗಾಲದಲ್ಲಿ ಕಚ್ ರಣ್ ಉತ್ಸವದೊಂದಿಗೆ ಶ್ವೇತ ಉಪ್ಪು ಮರುಭೂಮಿಯಲ್ಲಿ ಸಂಗೀತ, ನೃತ್ಯ, ಉಡುಪುಗಳು, ಕ್ಯಾಮಲ್ ರೈಡ್ ಮತ್ತು ಚಂದ್ರನ ಬೆಳಕಿನಲ್ಲಿ ವಿಶಿಷ್ಟ ಅನುಭವ. ಡಿಸೆಂಬರ್–ಫೆಬ್ರವರಿ ನಡುವೆ ಭೇಟಿ ನೀಡಲು ಸೂಕ್ತ.

8. ಉದಯಪುರ, ರಾಜಸ್ಥಾನ

ಸರೋವರಗಳ ನಗರ ಉದಯಪುರ ಚಳಿಗಾಲದಲ್ಲಿ ಅರಮನೆಗಳು, ಲೇಕ್ ಪಿಚೋಲಾ ಬೋಟ್ ರೈಡ್, ಕಲಾ ಗ್ಯಾಲರಿಗಳು ಮತ್ತು ಸಂಸ್ಕೃತಿಯ ಉತ್ಸವಗಳೊಂದಿಗೆ ರೋಮ್ಯಾಂಟಿಕ್ ಸ್ಥಳ. ಅಕ್ಟೋಬರ್–ಫೆಬ್ರವರಿ ನಡುವೆ ಭೇಟಿ ನೀಡಲು ಉತ್ತಮ.

9. ಪಾಂಡಿಚೇರಿ

ಫ್ರೆಂಚ್ ಕಾಲೋನಿಯ ಶೈಲಿ, ಔರೋವಿಲ್ಲೆ, ಶ್ರೀ ಅರವಿಂದ ಆಶ್ರಮ, ಸಮುದ್ರ ತೀರ ಮತ್ತು ಯೋಗ ಶಿಬಿರಗಳೊಂದಿಗೆ ಪಾಂಡಿಚೇರಿ ಚಳಿಗಾಲದಲ್ಲಿ ಶಾಂತ ಪ್ರವಾಸಿ ಸ್ಥಳ. ನವೆಂಬರ್–ಫೆಬ್ರವರಿ ನಡುವೆ ಭೇಟಿ ನೀಡಲು ಸೂಕ್ತ.

10. ಕೂರ್ಗ್, ಕರ್ನಾಟಕ

ಕಾಫಿ ತೋಟಗಳು, ಅಬ್ಬಿ ಜಲಪಾತ, ರಾಜಾ’ಸ್ ಸೀಟ್, ಡುಬಾರೆ ಆನೆ ಶಿಬಿರ ಮತ್ತು ಪ್ರಕೃತಿಯ ಮಧ್ಯೆ ಶಾಂತತೆಯ ಅನುಭವ ನೀಡುವ ಹಿಲ್ ಸ್ಟೇಷನ್. ಅಕ್ಟೋಬರ್–ಜನವರಿ ನಡುವೆ ಭೇಟಿ ನೀಡಲು ಉತ್ತಮ. ಈ ಚಳಿಗಾಲದಲ್ಲಿ ಭಾರತವು ಪ್ರವಾಸಿಗರಿಗೆ ಹಿಮಪಾತ, ಬೀಚ್ ರಜಾ, ಧಾರ್ಮಿಕ ಶಾಂತಿ ಮತ್ತು ಸಂಸ್ಕೃತಿಯ ಉತ್ಸವಗಳೊಂದಿಗೆ ವಿಭಿನ್ನ ಅನುಭವಗಳನ್ನು ನೀಡುತ್ತದೆ. ನಿಮ್ಮ ಮುಂದಿನ ರಜಾ ಯೋಜನೆಗೆ ಇದು ಪರಿಪೂರ್ಣ ವೇಳಾಪಟ್ಟಿ ಸಮಯ ಆಗಿದೆ. 



Latest News