Dec 16, 2025 Languages : ಕನ್ನಡ | English

ಆಂತರಿಕ ಶಾಂತಿ ಮತ್ತು ನೆಮ್ಮದಿಗಾಗಿ 2026 ರ ಬೆಸ್ಟ್ ಸ್ಥಳಗಳು!!

ಪ್ರತಿಯೊಬ್ಬರೂ ಜೀವನದಲ್ಲಿ ಎಲ್ಲವನ್ನು ಸವಿಯಬೇಕು. ದುಡಿದು ದುಡಿದು ಬರಿ ಆಯಾಸದಲ್ಲೇ ಜೀವನ ಕಳೆಯಬಾರದು, ಕೆಲಸದ ಒತ್ತಡದಲ್ಲಿ ನೆಮ್ಮದಿಯ ಹುಡುಕಾಟ ಕೆಲವರು ಮರೆತುಬಿಡುತ್ತಾರೆ. ಆಂತರಿಕ ಶಾಂತಿ ಹಾಗು ನೆಮ್ಮದಿ ಹುಡುಕಾಟ ನಡೆಸುವವರಿಗೆ ಈ ಲೇಖನ ತುಂಬಾನೇ  ಉಪಯೋಗಕ್ಕೆ ಬರುತ್ತದೆ. ಯಾವ ತಾಣಕ್ಕೆ ಹೋದರೆ ನೆಮ್ಮದಿ ಸಿಗುತ್ತದೆ ಎಂದು ಹಲವರಿಗೆ ಮಾಹಿತಿ ಇರುವುದಿಲ್ಲ. ನಮ್ಮ ಭಾರತ ದೇಶದಲ್ಲೇ ಧಾರ್ಮಿಕ ತಾಣಗಳಾಗಿ ಪ್ರಸಿದ್ದಿ ಹೊಂದಿದ ಹಾಗು ಹೆಚ್ಚು ಪ್ರಖ್ಯಾತಿ ಪಡೆದಿರುವ ಕೆಲವು ತಾಣಗಳು ಈ ಕೆಳಗಿನಂತಿವೆ ನೋಡಿ. 

Top Spiritual Places to Visit in India in 2026
Top Spiritual Places to Visit in India in 2026

1. ವಾರಾಣಸಿ, ಉತ್ತರ ಪ್ರದೇಶ

ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ವಾರಾಣಸಿ ಕೂಡ ಆಗಿದ್ದು, ಗಂಗೆಯ ದಡದಲ್ಲಿ ನೆಲೆಸಿರುವ ಆಧ್ಯಾತ್ಮಿಕ ಕೇಂದ್ರವಾಗಿದೆ. ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ಗಂಗಾ ಆರತಿ ಹಾಗೂ ಕಾಶಿ ವಿಶ್ವನಾಥ ದೇವಾಲಯ ಇಲ್ಲಿ ಅಧಿಕ ಆಕರ್ಷಣೆ ಆಗುತ್ತವೆ. ಈ ಸ್ಥಳಕ್ಕೆ ನೀವು ಭೇಟಿ ನೀಡಲು ಉತ್ತಮ ಸಮಯ ಅಂದರೆ ಅದು ಚಳಿಗಾಲ ಎನ್ನಬಹುದು. ತಂಪಾದ ಹವಾಮಾನ ಮತ್ತು ಕಡಿಮೆ ಜನಸಂದಣಿಯಿಂದ ಭೇಟಿ ನೀಡಲು ಉತ್ತಮ ಸಮಯ.

2. ತಿರುಪತಿ, ಆಂಧ್ರ ಪ್ರದೇಶ 

ಶ್ರೀ ವೆಂಕಟೇಶ್ವರ ದೇವಸ್ಥಾನವು ತಿರುಪತಿ ತಿರುಮಲಾ ಬೆಟ್ಟದ ಮೇಲೆ ಇದೆ. ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಯಾತ್ರಾ ತಾಣಗಳಲ್ಲಿ ಇದು ಕೂಡ ಒಂದು. ಲಕ್ಷಾಂತರ ಭಕ್ತರು ಈ ಸ್ಥಳಕ್ಕೆ ಆಧ್ಯತ್ಮಿಕ ತೃಪ್ತಿ ಹಾಗೂ ಆಶೀರ್ವಾದ ಪಡೆಯಲು ಭೇಟಿ ಕೊಡುತ್ತಾರೆ. ಈ ದೇವಸ್ಥಾನಕ್ಕೆ ಚಳಿಗಾಲದಲ್ಲಿ ಭೇಟಿ ನೀಡುವುದು ಹೆಚ್ಚು ಅನುಕೂಲಕರ.

3. ಋಷಿಕೇಶ, ಉತ್ತರಾಖಂಡ

ಹಿಮಾಲಯದ ಅಡಿವಾರದಲ್ಲಿಇರುವ ಋಷಿಕೇಶ ಯೋಗದ ಜಾಗತಿಕ ರಾಜಧಾನಿ ಎಂದು ಪರಿಗಣನೆ ಮಾಡಲಾಗಿದೆ. ಇಲ್ಲಿ ಯೋಗ ಶಿಬಿರಗಳು, ಧ್ಯಾನ ಕೇಂದ್ರಗಳು ಮತ್ತು ಪಾರ್ಮಾರ್ಥ ನಿಕೇತನದ ಗಂಗಾ ಆರತಿ ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತವೆ. ಈ ಪ್ರಸಿದ್ದ ಜಾಗಕ್ಕೆ ಚಳಿಗಾಲದಲ್ಲಿ ಹವಾಮಾನದ ಸಂತಸ, ನೆಮ್ಮದಿ ಪ್ರಯಾಣ ನಿಮ್ಮದಾಗಲಿದ್ದು ಪ್ರಯಾಣ ಸುಖಕರವಾಗಿರಲಿದೆ. ಯೋಗ ಹಾಗೂ ಪ್ರಕೃತಿ ಅನುಭವಕ್ಕೆ ಸೂಕ್ತ ತಾಣವಾಗಲಿದೆ. 

4. ಅಮೃತಸರ, ಪಂಜಾಬ್

ಸಿಖ್ ಧರ್ಮದ ಪವಿತ್ರ ತಾಣವಾದ ಅಮೃತಸರದಲ್ಲಿ ಪ್ರಸಿದ್ಧ ಗೋಲ್ಡನ್ ಟೆಂಪಲ್ (ಹರ್ಮಂದಿರ್ ಸಾಹಿಬ್) ಇದೆ. ಇಲ್ಲಿ ಲಂಗರ್ ಸೇವೆ, ಕೀರ್ತನೆಗಳು ಹಾಗೂ ಶಾಂತಿಯ ವಾತಾವರಣ ಪ್ರತಿ ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುತ್ತದೆ. ಚಳಿಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ಟೈಮ್. 

5. ಬೋಧ್ ಗಯಾ, ಬಿಹಾರ

ಬೋಧ್ ಗಯಾ ಬೌದ್ಧ ಧರ್ಮದ ಪವಿತ್ರ ತಾಣವಾಗಿದೆ. ಇಲ್ಲಿ ಬೋಧಿ ವೃಕ್ಷದ ಕೆಳಗೆ ಗೌತಮ ಬುದ್ಧರಿಗೆ ಬೋಧನೆ ಸಿಕ್ಕಿತ್ತು. ಮಹಾಬೋಧಿ ದೇವಸ್ಥಾನ ಯುನೆಸ್ಕೋ ವಿಶ್ವ ಹೇರಿಟೇಜ್ ತಾಣವಾಗಿದೆ. ಧ್ಯಾನ, ಬೌದ್ಧ ಮಠಗಳ ಭೇಟಿ ಹಾಗೂ ಇಲ್ಲಿನ ವಿಶೇಷತೆ ಶಾಂತಾ ವಾತಾವರಣಕ್ಕೆ ಹೆಚ್ಚು ಹೆಸರುವಾಸಿ. 

6. ಪುರಿ, ಒಡಿಶಾ

ಚಾರ್ ಧಾಮಗಳಲ್ಲಿ ಒಂದಾದ ಪುರಿಯ ಜಗನ್ನಾಥ ದೇವಾಲಯವೂ ಹೆಚ್ಚು ಸುಪ್ರಸ್ಸಿದ್ದವಾಗಿದ್ದು ಆಧ್ಯಾತ್ಮಿಕ ಅನುಭವ ಪಡೆಯಬಹುದು.. ರಥಯಾತ್ರೆ, ಸಮುದ್ರ ತೀರದ ನಲ್ಮೆಯ ಶಾಂತಿ ಹಾಗೂ ಕೊನಾರ್ಕ ಸೂರ್ಯ ದೇವಾಲಯದ ಭೇಟಿ ಸಹ ಹೆಚ್ಚು ನಿಮ್ಮನ್ನು ವಿಶಿಷ್ಟಗೊಳಿಸುತ್ತವೆ. ಚಳಿಗಾಲದಲ್ಲಿಯ ಪ್ರಯಾಣ ಸುಖಕರವಾಗಿರುತ್ತದೆ.

7. ಔರೋವಿಲ್ಲೆ, ತಮಿಳುನಾಡು

ಪಾಂಡಿಚೇರಿಯ ಬಳಿ ಇರುವ ಔರೋವಿಲ್ಲೆ ಮಾನವನ ಏಕತೆ ಮತ್ತು ಆಂತರಿಕ ಬೆಳವಣಿಗೆಗೆ ಸಮರ್ಪಿತವಾದ ಆಧ್ಯಾತ್ಮಿಕ ನಗರ ಎಂದು ಪ್ರಸಿದ್ದಿ ಪಡೆದಿದೆ. ಇಲ್ಲಿ ಮಧ್ಯಭಾಗದಲ್ಲಿ ಮತ್ರಿಮಂದಿರ ಎಂಬ ಧ್ಯಾನ ಗೋಪುರವಿದೆ. ಶಾಂತಿ, ಧ್ಯಾನ, ಶಿಬಿರಗಳು ಮತ್ತು ಸಮುದಾಯ ಜೀವನದ ಅನುಭವಕ್ಕೆ ಇದು ಸೂಕ್ತ ತಾಣ.

8. ಮದುರೈ, ತಮಿಳುನಾಡು

ಮದುರೈ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಮೀನಾಕ್ಷಿ ಅಮ್ಮನ್ ದೇವಸ್ಥಾನದಿಂದ ಪ್ರಸಿದ್ಧವಾಗಿದೆ. ಇಲ್ಲಿ ದೇವಾಲಯದ ಶಿಲ್ಪಕಲೆ, ಉತ್ಸವಗಳು ಮತ್ತು ಸಂಸ್ಕೃತಿಯ ಅನುಭವ ದೊರೆಯುತ್ತದೆ. ಚಳಿಗಾಲದಲ್ಲಿ ಹವಾಮಾನ ಅನುಕೂಲವಾಗಿದ್ದು ಪ್ರವಾಸಕ್ಕೆ ಉತ್ತಮ.

9. ಹೇಮಿಸ್ ಮಠ, ಲಡಾಖ್

ಲಡಾಖ್‌ನ ಹೇಮಿಸ್ ಮಠವು ಅತಿದೊಡ್ಡ ಬೌದ್ಧ ಮಠವಾಗಿದ್ದು, ಹಿಮಾಲಯದ ಶಾಂತ ಪರಿಸರದಲ್ಲಿ ನೆಲೆಸಿದೆ. ಇಲ್ಲಿ ವರ್ಷಾವಧಿಯ ಹೇಮಿಸ್ ಉತ್ಸವ, ಧ್ಯಾನ, ಪಾಠಶಾಲೆಗಳು ಮತ್ತು ಹಿಮಪರ್ವತಗಳ ನೋಟಗಳಿವೆ. ಚಳಿಗಾಲ ಅತೀವವಾಗಿ ತೀವ್ರವಾದರೂ, ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಲು ಉತ್ತಮ.

10. ಶಿರಡಿ, ಮಹಾರಾಷ್ಟ್ರ

ಶಿರಡಿ ಸಾಯಿ ಬಾಬಾ ಇದು ಸಹ ಅತಿ ಹೆಚ್ಚು ಪವಿತ್ರ ತಾಣವಾಗಿದೆ. ಪ್ರೀತಿ, ದಯೆ ಮತ್ತು ಏಕತೆಯ ಸಂದೇಶ ಇಲ್ಲಿ ಹೆಚ್ಚು ಸಾರುತ್ತದೆ. ಸಾಯಿ ಬಾಬಾ ಸಮಾಧಿ ಮಂದಿರ, ದ್ವಾರಕಾಮಾಯಿ, ಚಾವಡಿ ಹಾಗೂ ಸಾಯಿ ಹೆರಿಟೇಜ್ ವಿಲೇಜ್ ಇಲ್ಲಿನ ಪ್ರಮುಖ ತಾಣಗಳಾಗಿದ್ದು ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ. ಚಳಿಗಾಲದಲ್ಲಿ ಮಾತ್ರವೇ ಈ ತಾಣಕ್ಕೆ ಪ್ರಯಾಣ ಅತಿ ಸುಖಕರವಾಗಿದ್ದು, ಶಾಂತಿ ಅನುಭವ ನೀಡುತ್ತದೆ.