ರಾಕಿಂಗ್ ಸ್ಟಾರ್ ಯಶ್ ಅವರ ಮಗಳು ಆಯ್ರ ಹುಟ್ಟುಹಬ್ಬವನ್ನು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕುಟುಂಬದವರ ಜೊತೆಗೆ ಹತ್ತಿರದ ಸ್ನೇಹಿತರು, ಅಭಿಮಾನಿಗಳು ಹಾಗೂ ಹೋಟೆಲ್ ಸಿಬ್ಬಂದಿ ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. ಹೂವಿನ ಅಲಂಕಾರ, ಬಣ್ಣ ಬಣ್ಣದ ಬಲೂನುಗಳು, ಕೇಕ್ ಕಟಿಂಗ್ ಖುಷಿ ಕ್ಷಣಕ್ಕೆ ಸಾಕ್ಷಿಯಾದವು.
ಆಯ್ರ ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಮಗಳೊಂದಿಗೆ ವಿಶೇಷ ಕ್ಷಣಗಳನ್ನು ಹಂಚಿಕೊಂಡರು. ಮುದ್ದಾದ ಆಯ್ರ ತನ್ನ ಹುಟ್ಟುಹಬ್ಬದ ಉಡುಪಿನಲ್ಲಿ ಕಂಗೊಳಿಸುತ್ತಿದ್ದಳು. ಕುಟುಂಬದವರ ನಗು, ಮಕ್ಕಳ ಆಟ, ಹಾಡು-ಹಬ್ಬ ಎಲ್ಲವೂ ಈ ವೇಳೆ ಕಂಡು ಬಂದಿವೆ. ಹೋಟೆಲ್ನಿಂದ ಹೊರಬರುವ ವೇಳೆ ಯಶ್ ತಮ್ಮ ಮಾನವೀಯತೆಯನ್ನು ಮತ್ತೊಮ್ಮೆ ತೋರಿಸಿದರು. ಸೆಕ್ಯೂರಿಟಿ ಗಾರ್ಡ್ ಹಾಗೂ ಹೋಟೆಲ್ ಸಿಬ್ಬಂದಿಗೆ ಹಣ ಹಂಚಿ ಅವರ ಸೇವೆಗೆ ಗೌರವ ಸಲ್ಲಿಸಿದರು. ಈ ನಡೆ ಅಭಿಮಾನಿಗಳ ಹೃದಯವನ್ನು ಮುಟ್ಟಿದ್ದು, "ರಾಕಿಂಗ್ ಸ್ಟಾರ್ ಮಾತ್ರವಲ್ಲ, ಹೃದಯವಂತ ಸ್ಟಾರ್" ಎಂಬ ಪ್ರಶಂಸೆಯನ್ನು ತಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆಯ್ರ ಹುಟ್ಟುಹಬ್ಬದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿ ಹರಡುತ್ತಿವೆ. ಅಭಿಮಾನಿಗಳು "ಹ್ಯಾಪಿ ಬರ್ತ್ ಡೇ ಆಯ್ರ" ಎಂದು ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ಯಶ್ ಅವರ ಸರಳತೆ ಹಾಗೂ ಮಾನವೀಯತೆ ಅಭಿಮಾನಿಗಳಲ್ಲಿ ಮತ್ತಷ್ಟು ಪ್ರೀತಿಯನ್ನು ಹೆಚ್ಚಿಸಿದೆ ಎನ್ನಬಹುದು. ಈ ಸಂಭ್ರಮವು ಯಶ್ ಕುಟುಂಬಕ್ಕೆ ಮಾತ್ರವಲ್ಲ, ಕನ್ನಡಿಗರಿಗೂ ಹರ್ಷವನ್ನು ತಂದಿದೆ. ಆಯ್ರ ಹುಟ್ಟುಹಬ್ಬದ ಸಂಭ್ರಮವು ನೆನಪಿನ ಕ್ಷಣವಾಗಿ ಉಳಿಯಲಿದ್ದು, ಯಶ್ ಅವರ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹಬ್ಬದ ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ. ನೀವು ಕೂಡ ಯಶ್ ಅವರ ಮಗಳಿಗೆ ಹುಟ್ಟು ಹಬ್ಬದ ಶುಭಾಶಯ ವಿಶೇಸ್ ತಿಳ್ಸಿ ಧನ್ಯವಾದಗಳು.