ರಾಮಾಯಣ ಚಿತ್ರಕ್ಕೆ ಯಶ್ ಬರೀ ಹೀರೋ ಅಲ್ಲ, ರಿಯಲ್ ಬಾಸ್ - ನಮಿತ್ ಮಲ್ಹೋತ್ರಾ ಓಪನ್ ಟಾಕ್!!

ನಮ್ಮ ಸ್ಯಾಂಡಲ್‌ವುಡ್‌ನ ಹೆಮ್ಮೆ, ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಪ್ಯಾನ್ ಇಂಡಿಯಾ ದಾಟಿ ಗ್ಲೋಬಲ್ ಲೆವೆಲ್‌ನಲ್ಲಿ ಸಖತ್ ಸೌಂಡ್ ಮಾಡ್ತಾ ಇದ್ದಾರೆ. ಒಂದು ಕಡೆ ಗೀತು ಮೋಹನ್‌ದಾಸ್ ಡೈರೆಕ್ಷನ್‌ನ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿ ಇರೋ ಯಶ್, ಇನ್ನೊಂದು ಕಡೆ ಬಾಲಿವುಡ್‌ನ ಬಿಗ್ ಬಜೆಟ್ ಮೂವಿ ‘ರಾಮಾಯಣ’ದಲ್ಲಿ ರಾವಣನ ಕ್ಯಾರೆಕ್ಟರ್ ಮಾಡ್ತಾ ಇರೋದು ನಿಮಗೆಲ್ಲಾ ಗೊತ್ತೇ ಇದೆ.

ಕಾಟಾಚಾರಕ್ಕೆ ಪ್ರೊಡ್ಯೂಸರ್ ಆಗಿಲ್ಲ ಯಶ್ | Photo Credit: www.dneg.com
ಕಾಟಾಚಾರಕ್ಕೆ ಪ್ರೊಡ್ಯೂಸರ್ ಆಗಿಲ್ಲ ಯಶ್ | Photo Credit: www.dneg.com

ಆದರೆ ವಿಷಯ ಇಲ್ಲಿಗೆ ಮುಗಿಯಲ್ಲ! ಯಶ್ ಈ ಸಿನಿಮಾದಲ್ಲಿ ಬರೀ ಆಕ್ಟಿಂಗ್ ಮಾತ್ರ ಮಾಡ್ತಾ ಇಲ್ಲ, ಬದಲಿಗೆ ಕೋ-ಪ್ರೊಡ್ಯೂಸರ್ (ಸಹ-ನಿರ್ಮಾಪಕ) ಆಗಿ ಸಿನಿಮಾ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಕನ್ನಡದ ಹೀರೋ ಒಬ್ಬರು ಬಾಲಿವುಡ್‌ನ ಇಷ್ಟು ದೊಡ್ಡ ಸಿನಿಮಾವನ್ನು ಪ್ರೊಡ್ಯೂಸ್ ಮಾಡ್ತಿದ್ದಾರೆ ಅಂದ್ರೆ ಅದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತಹ ವಿಷಯ. ಇನ್ನು ಯಶ್ ಅವರ ಈ ಹೊಸ ಅವತಾರ ಮತ್ತು ಅವರ ವರ್ಕಿಂಗ್ ಸ್ಟೈಲ್ ನೋಡಿ ಚಿತ್ರದ ಮೇನ್ ಪ್ರೊಡ್ಯೂಸರ್ ಆಗಿರೋ ನಮಿತ್ ಮಲ್ಹೋತ್ರಾ ಫುಲ್ ಫಿದಾ ಆಗಿದ್ದಾರೆ.

ಕಾಟಾಚಾರಕ್ಕೆ ಪ್ರೊಡ್ಯೂಸರ್ ಆಗಿಲ್ಲ ಯಶ್: ನಮಿತ್ ಮಲ್ಹೋತ್ರಾ ಓಪನ್ ಟಾಕ್

‘ರಾಮಾಯಣ’ ಸಿನಿಮಾದ ಪ್ರಮುಖ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ ಅವರು ಇತ್ತೀಚೆಗೆ ಕೊಟ್ಟ ಇಂಟರ್‌ವ್ಯೂನಲ್ಲಿ ಯಶ್ ಅವರ ಕೆಲಸದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ಯಶ್ ಕೇವಲ ಹೆಸರಿಗಾಗಲಿ ಅಥವಾ ಕಾಟಾಚಾರಕ್ಕಾಗಲಿ ಸಿನಿಮಾ ನಿರ್ಮಾಣಕ್ಕೆ ಇಳಿದಿಲ್ಲ. ಅವರಲ್ಲಿರೋ ಅತಿ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ, ಅವರು ಬರೀ ಒಬ್ಬ ಗ್ರೇಟ್ ಆಕ್ಟರ್ ಮಾತ್ರ ಅಲ್ಲ, ಅವರಿಗೊಂದು ಅದ್ಭುತವಾದ ವಿಷನ್ (ದೂರದೃಷ್ಟಿ) ಇದೆ" ಅಂತ ಹೊಗಳಿದ್ದಾರೆ.

"ನಾವು ರಾಮಾಯಣ ಸಿನಿಮಾ ಮಾಡಬೇಕು ಅಂತ ಅಂದುಕೊಂಡಾಗ ನಮ್ಮ ಆಲೋಚನೆ ಮತ್ತು ಗುರಿ ಏನಿದೆ ಅನ್ನೋದನ್ನು ಯಶ್ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡರು. ನಮ್ಮ ಐಡಿಯಾ ಕೇಳಿದ ತಕ್ಷಣವೇ ಕೈಜೋಡಿಸಿದ ಅವರು, 'ನಮಿತ್, ನಾವಿಬ್ಬರೂ ಸೇರಿ ಇದನ್ನು ಮಾಡೋಣ. ಈ ಸಿನಿಮಾವನ್ನು ಸಾಧ್ಯವಾದಷ್ಟು ಬೆಸ್ಟ್ ಕ್ವಾಲಿಟಿಯಲ್ಲಿ ವರ್ಲ್ಡ್ ಕ್ಲಾಸ್ ಲೆವೆಲ್ ತಗೊಂಡು ಹೋಗಬೇಕು' ಅಂತ ಧೈರ್ಯ ತುಂಬಿದರು" ಎಂದು ನಮಿತ್ ನೆನಪಿಸಿಕೊಂಡಿದ್ದಾರೆ.

ಯಶ್ ಸಾಥ್ ಕೊಟ್ಟಿದ್ದಕ್ಕೆ ಸಿನಿಮಾ ನೆಕ್ಸ್ಟ್ ಲೆವೆಲ್‌ಗೆ ಹೋಯ್ತು!

ಯಶ್ ಕೊಟ್ಟ ಬೆಂಬಲದ ಬಗ್ಗೆ ನಮಿತ್ ಅವರಿಗೆ ತುಂಬಾ ಹೆಮ್ಮೆ ಇದೆ. "ಯಶ್ ಹೇಳಿದ ಆ ಮಾತುಗಳು ನನಗೆ ತುಂಬಾ ಸ್ಪೆಷಲ್ ಮತ್ತು ಅಮೂಲ್ಯವಾದದ್ದು. ಯಾಕಂದ್ರೆ, ಯಶ್ ಅವರಂತಹ ಒಬ್ಬ ಬಿಗ್ ಸ್ಟಾರ್ ಬರೀ ನಟನಾಗಿ ಇರದೆ, ನಮ್ಮ ಜೊತೆ ಪ್ರೊಡ್ಯೂಸರ್ ಆಗಿ ನಿಂತಾಗ ನಮಗೆ ಆನೆ ಬಲ ಬಂದ ಹಾಗೆ ಆಗುತ್ತೆ. ಅವರು ತಮ್ಮ ಸಂಪೂರ್ಣ ಶಕ್ತಿಯನ್ನು ಈ ಪ್ರಾಜೆಕ್ಟ್‌ಗಾಗಿ ಧಾರೆ ಎರೆದಿದ್ದಾರೆ. ಅವರ ಆ ಡೆಡಿಕೇಷನ್ ಮತ್ತು ಧೃಢ ಸಂಕಲ್ಪವೇ ಇವತ್ತು ಈ ಸಿನಿಮಾ ಇಷ್ಟು ದೊಡ್ಡದಾಗಿ ಮೂಡಿಬರಲು ಕಾರಣ" ಅಂದಿದ್ದಾರೆ.

ಅಷ್ಟೇ ಅಲ್ಲ, "ನಾವು ಭಾರತೀಯ ಚಿತ್ರರಂಗದಿಂದ ಇಡೀ ಜಗತ್ತಿಗೆ ಒಂದು ಅಲ್ಟಿಮೇಟ್ ಸಿನಿಮಾ ಕೊಡೋಕೆ ಟ್ರೈ ಮಾಡ್ತಾ ಇದ್ದೀವಿ. ಇದುವರೆಗೆ ಇಂಡಿಯನ್ ಸಿನಿಮಾದಲ್ಲಿ ಯಾರೂ ಮಾಡಿರದಂತಹ ಒಂದು ಹೊಸ ಹಿಸ್ಟರಿ ಕ್ರಿಯೇಟ್ ಮಾಡೋದು ನಮ್ಮ ಪ್ಲಾನ್" ಅಂತ ನಮಿತ್ ಕಾನ್ಫಿಡೆಂಟ್ ಆಗಿ ಹೇಳಿದ್ದಾರೆ.

ಎರಡು ಪಾರ್ಟ್‌ಗಳಲ್ಲಿ ಬರ್ತಿದೆ ರಾಮಾಯಣ:

ಹೌದು, ಈ ಭರ್ಜರಿ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗ್ತಾ ಇದೆ. ಪ್ಲಾನ್ ಪ್ರಕಾರ ಸಿನಿಮಾದ ಮೊದಲನೇ ಭಾಗ ಈ ವರ್ಷದ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವರ್ಲ್ಡ್ ವೈಡ್ ರಿಲೀಸ್ ಆದ್ರೆ, ಎರಡನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ಥಿಯೇಟರ್‌ಗಳಿಗೆ ಬರಲಿದೆ.

Latest News