ನಮ್ಮ ಕನ್ನಡದ ಹೆಮ್ಮೆ, ರಾಕಿಂಗ್ ಸ್ಟಾರ್ ಯಶ್ ಹವಾ ಈಗ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಾದ್ಯಂತ ಜೋರಾಗಿದೆ. ಅವರು ನಟಿಸುತ್ತಿರುವ 'ರಾಮಾಯಣ' ಸಿನಿಮಾ ಬಗ್ಗೆ ಇಡೀ ಇಂಡಿಯಾದ ಸಿನಿ ಪ್ರೇಮಿಗಳು ಸಖತ್ ಎಕ್ಸೈಟ್ ಆಗಿದ್ದಾರೆ. ಈ ಸಿನಿಮಾವನ್ನು ಡೈರೆಕ್ಟರ್ ನಿತೀಶ್ ತಿವಾರಿ ಅವರು ಮೂರು ಪಾರ್ಟ್‌ಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿದ್ದಾರೆ. ಅಸಲಿಗೆ ಇದು ನಮ್ಮ ಭಾರತದ ಪುರಾಣ ಕಥೆ 'ರಾಮಾಯಣ'ದ ಆಧರಿತ ಸಿನಿಮಾವಾಗಿದ್ದು, ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಇದೊಂದು ತುಂಬಾನೇ ದೊಡ್ಡ ಪ್ರಾಜೆಕ್ಟ್ ಆಗಲಿದೆ.
ಈ ಸಿನಿಮಾದಲ್ಲಿ ಇಂಡಿಯಾದ ಬೇರೆ ಬೇರೆ ಭಾಷೆಯ ದೊಡ್ಡ ದೊಡ್ಡ ಸ್ಟಾರ್‌ಗಳೇ ನಟಿಸುತ್ತಿದ್ದಾರೆ. ಬಾಲಿವುಡ್‌ನ ಚಾಕ್ಲೇಟ್ ಬಾಯ್ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಕ್ಯೂಟ್ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡ್ತಿದ್ದಾರೆ. ಇನ್ನು ನಮ್ಮ ಹೆಮ್ಮೆಯ ಯಶ್, ರಾವಣನ ಪಾತ್ರದಲ್ಲಿ ಮಿಂಚುತ್ತಿರುವುದು ಈ ಸಿನಿಮಾದ ಹೈಲೈಟ್ ಇಷ್ಟೇ ಅಲ್ದೆ, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಶೂರ್ಪಣಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ. ಇಷ್ಟೊಂದು ಜನ ನಟರು ಒಂದೇ ಸಿನಿಮಾದಲ್ಲಿ ಇರೋದ್ರಿಂದ, ಫ್ಯಾನ್ಸ್ ಎಕ್ಸೈಟ್‌ಮೆಂಟ್ ಅಂತೂ ಆಕಾಶ ಮುಟ್ಟಿದೆ.
ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ನಡೆದ 'ಸಿನಿಮಾಕಾನ್ 2026'ರಲ್ಲಿ ಯಶ್ ಮಿಂಚಿದ್ದು ಎಲ್ಲರಿಗೂ ಗೊತ್ತೇ ಇದೆ. ಅಲ್ಲಿನ ಹಾಲಿವುಡ್ ಮಂದಿ ಕೂಡ ನಮ್ಮ ರಾಕಿಂಗ್ ಸ್ಟಾರ್ ನೋಡಿ ಫಿದಾ ಆಗಿದ್ದಾರೆ. ಆ ಟೈಮ್‌ನಲ್ಲೇ ಯಶ್ ತಮ್ಮ ಗ್ಲೋಬಲ್ ಕನಸುಗಳ ಬಗ್ಗೆ ಮಾತಾಡಿದ್ದಾರೆ. ಮಜಾ ಅಂದ್ರೆ, ಬರೀ ಹಾಲಿವುಡ್ ಸ್ಟಾರ್‌ಗಳೇ ಕಾಣಿಸಿಕೊಳ್ಳುವ 'ಫ್ಯಾಂಡ್ಯಾಂಗೊ' ಅನ್ನೋ ಫೇಮಸ್ ಯೂಟ್ಯೂಬ್ ಚಾನೆಲ್‌ಗೆ ಯಶ್ ಇಂಟರ್‌ವ್ಯೂ ಕೊಟ್ಟಿದ್ದಾರೆ.
Actor #Yash CONFIRMS the makers are eyeing a last week October release for #Ramayana to capitalize on the festival of Diwali 💯🧨🔥 #CinemaCon
— The Climax India (@TheClimaxIndia) April 15, 2026
We were the first media portal to break this, follow us for the most reliable news across all the platforms! https://t.co/pNpWuKczkZ pic.twitter.com/6h9VQx3uFN
ಈ ಸಂದರ್ಶನದಲ್ಲಿ ಯಶ್ ಅವರು ರಣಬೀರ್ ಕಪೂರ್ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ರಾಮಾಯಣದಂತ ಪುರಾಣ ಕಥೆಯನ್ನ ಇವತ್ತಿನ ಕಾಲಕ್ಕೆ ತಕ್ಕಂತೆ ತುಂಬಾ ಗ್ರಾಂಡ್ ಆಗಿ ಸ್ಕ್ರೀನ್ ಮೇಲೆ ತೋರಿಸೋದು ಅಷ್ಟು ಸುಲಭವಲ್ಲ, ಅದೊಂಥರಾ ದೊಡ್ಡ ಸವಾಲು ಅಂತ ಯಶ್ ಹೇಳಿದ್ದಾರೆ. ಆದ್ರೆ ಇಡೀ ಟೀಮ್ ಒಂದೇ ಗುರಿ ಇಟ್ಟುಕೊಂಡು ಕೆಲಸ ಮಾಡ್ತಿರೋದ್ರಿಂದ ಸಿನಿಮಾ ಮಾತ್ರ ಸಖತ್ ಆಗಿ ಮೂಡಿಬಂದಿದೆ ಅನ್ನೋ ನಂಬಿಕೆ ಅವರಿಗಿದೆ. ಅಂದಹಾಗೆ, ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಇದೇ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಗುಡ್ ನ್ಯೂಸ್ ಅಭಿಮಾನಿಗಳಿಗೆ ಕೂಡ ಕೊಟ್ಟಿದ್ದಾರೆ.
ಯಶ್ ಈ ಜಾಗತಿಕ ಪಯಣ ಕನ್ನಡಿಗರಿಗೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಸ್ಫೂರ್ತಿಯಾಗಿದೆ. ಒಬ್ಬ ಕನ್ನಡ ನಟ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರುವುದು ಒಂದು ದೊಡ್ಡ ಮೈಲುಗಲ್ಲು. ರಾಮಾಯಣ ಚಿತ್ರವು ಯಶ್ ಅವರ ವೃತ್ತಿಜೀವನಕ್ಕೆ ಮತ್ತೊಂದು ಭದ್ರ ಬುನಾದಿ ಹಾಕಿಕೊಡುವುದರಲ್ಲಿ ಸಂಶಯವಿಲ್ಲ. ಯಶ್ ಈ ಹಾದಿ ಇನ್ನೂ ಹೆಚ್ಚಿನ ಎತ್ತರಕ್ಕೆ ತಲುಪಲಿ ಎಂಬುದು ಎಲ್ಲರ ಆಶಯವಾಗಿದೆ.