ನಿತೇಶ್ ತಿವಾರಿ ಡೈರೆಕ್ಷನ್ ಮಾಡ್ತಿರೋ 'ರಾಮಾಯಣ' ಸಿನಿಮಾದಲ್ಲಿ ನಮ್ಮ ಕನ್ನಡಿಗರ ಹೆಮ್ಮೆ ಯಶ್ 'ರಾವಣ'ನಾಗಿ ಅಬ್ಬರಿಸಲಿದ್ದಾರೆ ಅನ್ನೋದು ಈಗ ಹಳೆಯ ನ್ಯೂಸ್. ಆದ್ರೆ, ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ಸ್ಪೆಷಲ್ ಈವೆಂಟ್‌ನಲ್ಲಿ ಯಶ್ ಅವರು ತಾವು ಯಾಕೆ ಈ ಪಾತ್ರ ಒಪ್ಪಿಕೊಂಡೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ. ಆ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗ್ತಿವೆ.
ಯಶ್ ಹೇಳೋ ಪ್ರಕಾರ, ರಾಮಾಯಣದಲ್ಲಿ ರಾವಣ ಅಂದ್ರೆ ಬರಿ ಒಬ್ಬ ವ್ಯಕ್ತಿಯ ಹೆಸರಲ್ಲ, ಅದೊಂದು ಸಂಕೀರ್ಣವಾದ ಸ್ವಭಾವವಂತೆ. "ರಾವಣ ಪಕ್ಕಾ ಕೆಟ್ಟವನು, ಅದರಲ್ಲಿ ಎರಡು ಮಾತಿಲ್ಲ. ಅವನು ಅದೆಷ್ಟು ಕೆಟ್ಟವನಾಗಿದ್ದ ಅಂದ್ರೆ, ಅವನನ್ನ ಮುಗಿಸೋಕೆ ಸಾಕ್ಷಾತ್ ಮಹಾವಿಷ್ಣುವೇ ರಾಮನ ಅವತಾರ ಎತ್ತಿ ಬರಬೇಕಾಯ್ತು" ಅಂತ ಯಶ್ ಹೇಳಿದ್ದಾರೆ. ಅಷ್ಟೇ ಅಲ್ಲ, ರಾವಣನಿಗೆ ಅದೆಷ್ಟು ಅಹಂಕಾರ ಇತ್ತಪ್ಪ ಅಂದ್ರೆ, ಆ ಗತ್ತಿನಲ್ಲೇ ಅವನು ಎಷ್ಟೋ ರಾಜ್ಯಗಳನ್ನ ನಾಶ ಮಾಡಿದ್ದನಂತೆ.
"ಯಾವುದೇ ಆದ್ರೂ ಅತಿಯಾದ್ರೆ ಡೇಂಜರ್!"
ಸಿನಿಮಾ ಬಗ್ಗೆ ಮಾತಾಡ್ತಾ ಯಶ್ ಒಂದು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. "ಸಿನಿಮಾ ರಿಲೀಸ್ ಆಗೋ ಮುಂಚೆ ಎಲ್ಲಾ ಗುಟ್ಟನ್ನ ಬಿಟ್ಟುಕೊಡೋಕೆ ಆಗಲ್ಲ. ಆದ್ರೆ ರಾವಣನ ಪಾತ್ರದ ಮೂಲಕ ನಾವು ಹೇಳೋಕೆ ಹೊರಟಿರೋ ಮೆಸೇಜ್ ಇಷ್ಟೇ— 'ಎನಿಥಿಂಗ್ ಟೂ ಮಚ್ ಈಸ್ ಟೂ ಬ್ಯಾಡ್' (ಯಾವುದೇ ವಿಷಯ ಅತಿಯಾದ್ರೆ ಅದು ಕೆಟ್ಟದ್ದೇ)". ಅಂದ್ರೆ ಅತಿಯಾದ ಅಹಂಕಾರ ಮನುಷ್ಯನ್ನ ಹೇಗೆ ಪಾತಾಳಕ್ಕೆ ತಳ್ಳುತ್ತೆ ಅನ್ನೋದನ್ನ ಯಶ್ ತಮ್ಮ ರಾವಣನ ಪಾತ್ರದ ಮೂಲಕ ತೋರಿಸಲಿದ್ದಾರಂತೆ.
ಸಿನಿಮಾಕಾನ್‌ನಲ್ಲಿ ಬರಿ 20 ನಿಮಿಷದ ವಿಡಿಯೋ ನೋಡಿದ ವಿದೇಶಿ ಪ್ರೇಕ್ಷಕರು ಅಕ್ಷರಶಃ ದಂಗಾಗಿದ್ದಾರೆ! "ಇದು ಬರಿ ಪುರಾಣದ ಕಥೆಯಲ್ಲ, ಇದೊಂದು ಅದ್ಭುತ ಫ್ಯಾಂಟಸಿ ಲೋಕ" ಅಂತ ಉದ್ಗರಿಸಿದ್ದಾರೆ. ಈ ಸಿನಿಮಾ ಎಷ್ಟು ಭವ್ಯವಾಗಿ ಬಂದಿದೆ ಅಂದ್ರೆ, ಇದು ಆಸ್ಕರ್ ಪ್ರಶಸ್ತಿಯನ್ನೇ ಟಾರ್ಗೆಟ್ ಮಾಡಿದೆ ಅನ್ನೋ ಟಾಕ್ ಶುರುವಾಗಿದೆ. ವಾರ್ನರ್ ಬ್ರದರ್ಸ್ ಸಂಸ್ಥೆ ಈ ಸಿನಿಮಾದ ಡಿಸ್ಟ್ರಿಬ್ಯೂಷನ್ ತಗೊಂಡ್ರೆ, ರಾಮನ ಕಥೆ ಜಗತ್ತಿನ ಮೂಲೆ ಮೂಲೆಗೂ ತಲುಪೋದ್ರಲ್ಲಿ ಡೌಟೇ ಇಲ್ಲ.
4,000 ಕೋಟಿ ಬಜೆಟ್! ಸ್ಟಾರ್‌ಗಳ ದಂಡು!
ಈ ಸಿನಿಮಾ ಇಂಡಿಯನ್ ಹಿಸ್ಟರಿಯಲ್ಲೇ ಅತಿ ದೊಡ್ಡ ಬಜೆಟ್‌ನ ಸಿನಿಮಾ.
ರಾಮ: ರಣಬೀರ್ ಕಪೂರ್
ಸೀತೆ: ಸಾಯಿ ಪಲ್ಲವಿ
ಹನುಮಂತ: ಸನ್ನಿ ಡಿಯೋಲ್
ರಾವಣ: ನಮ್ಮ ರಾಕಿಂಗ್ ಸ್ಟಾರ್ ಯಶ್!
ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗ್ತಿರೋ ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗೋ ಚಾನ್ಸಸ್ ಇದೆ.