ನಮ್ಮ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಗೆ ಇಂದು 41ನೇ ಜನ್ಮದಿನದ ಸಂಭ್ರಮ. ಈ ಖುಷಿಯ ಸುಸಮಯದಲ್ಲಿ ಅವರ ಅಭಿಮಾನಿಗಳಿಗೆ ಒಂದು ಭರ್ಜರಿ ಗಿಫ್ಟ್ ಸಿಕ್ಕಿದೆ. ನಿರ್ದೇಶಕ ಬುಚ್ಚಿ ಬಾಬು ಸನಾ ಮತ್ತು ರಾಮ್ ಚರಣ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ 'ಪೆಡ್ಡಿ' (Peddi) ಚಿತ್ರದ 'ಪೆಡ್ಡಿ ಪೈಲ್ವಾನ್ ಗ್ಲಿಂಪ್ಸ್' ಇಂದು ಬಿಡುಗಡೆಯಾಗಿದೆ. ವಿಡಿಯೋ ನೋಡಿದ ಮೇಲೆ ಫ್ಯಾನ್ಸ್ ಅಂತೂ ಫುಲ್ ಖುಷಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಸಣ್ಣ ಕ್ಲಿಪ್‌ನಲ್ಲಿ ರಾಮ್ ಚರಣ್ ಕ್ರಿಕೆಟ್ ಬ್ಯಾಟ್ ಹಿಡಿದು ಕಾಣಿಸಿಕೊಂಡಿದ್ದರು. ಅದನ್ನು ನೋಡಿ ಎಲ್ಲರೂ ಚರಣ್ ಈ ಸಿನಿಮಾದಲ್ಲಿ ಕ್ರಿಕೆಟರ್ ಪಾತ್ರ ಮಾಡ್ತಿದ್ದಾರೆ ಅಂದುಕೊಂಡಿದ್ದರು. ಆದರೆ, ಈ ಹೊಸ ಗ್ಲಿಂಪ್ಸ್‌ನಲ್ಲಿ ಅಸಲಿ ಕಿಕ್ ಇದೆ. ರಾಮ್ ಚರಣ್ ಇಲ್ಲಿ ಒಬ್ಬ ಖಡಕ್ 'ಕುಸ್ತಿ ಪಟು' ಅಥವಾ 'ಪೈಲ್ವಾನ್' ಆಗಿ ಮಿಂಚಿದ್ದಾರೆ.
ವಿಡಿಯೋದ ಆರಂಭದಲ್ಲೇ ಒಂದು ಪವರ್‌ಫುಲ್ ಮಾತು ಬರುತ್ತೆ: "ಕುಸ್ತಿ ಅಂದ್ರೆ ಬ್ಯಾಟ್ ಹಿಡಿದು ಬಾಲ್ ಎದುರಿಸುವ ಆಟವಲ್ಲ, ಇದು ಜೀವವನ್ನೇ ಪಣಕ್ಕಿಟ್ಟು ಸಾವಿನ ಎದುರು ನಿಲ್ಲುವ ಆಟ. ಈಗ ಹೇಳು, ನೀನು ಅಖಾಡಕ್ಕೆ ಇಳಿತೀಯಾ ಅಥವಾ ಹಿಂದೆ ಸರೀತೀಯಾ?" ಇದಕ್ಕೆ ರಾಮ್ ಚರಣ್ ಅವರು "ಈ ಆಟವೇ ನನ್ನ ಹೆಮ್ಮೆ" ಅಂತ ಸಖತ್ ಮಾಸ್ ಆಗಿ ಉತ್ತರ ಕೊಟ್ಟಿದ್ದಾರೆ.
ಈ ಗ್ಲಿಂಪ್ಸ್‌ನಲ್ಲಿ ರಾಮ್ ಚರಣ್ ಅವರ ಮೈಕಟ್ಟು ಮತ್ತು ಲುಕ್ ನಿಜಕ್ಕೂ ಸೂಪರ್ ಆಗಿದೆ. ಗದೆಯನ್ನು ಹಿಡಿದು ಬೆವರಿಳಿಸುತ್ತಾ ಪ್ರಾಕ್ಟೀಸ್ ಮಾಡುವ ದೃಶ್ಯಗಳಲ್ಲಿ ಅವರ ಪರಿಶ್ರಮ ಎದ್ದು ಕಾಣುತ್ತಿದೆ. ಈ ಪಾತ್ರಕ್ಕಾಗಿ ರಾಮ್ ಚರಣ್ ತಮ್ಮ ಬಾಡಿಯನ್ನು ಕಂಪ್ಲೀಟ್ ಆಗಿ ಬದಲಿಸಿಕೊಂಡಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಕಥೆಯಲ್ಲಿ ಒಂದು ಎಮೋಷನಲ್ ಟಚ್ ಕೂಡ ಇರಲಿದೆ ಅನ್ನೋದು ಈ ಟೀಸರ್ ನೋಡಿದ್ರೆ ಗೊತ್ತಾಗುತ್ತೆ.
ಬಲಿಷ್ಠ ತಾರಾಬಳಗ ಮತ್ತು ರಿಲೀಸ್ ಡೇಟ್
'ಪೆಡ್ಡಿ' ಸಿನಿಮಾದಲ್ಲಿ ಬರಿ ರಾಮ್ ಚರಣ್ ಮಾತ್ರವಲ್ಲ, ದೊಡ್ಡ ಕಲಾವಿದರ ದಂಡೇ ಇದೆ. ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಈ ಚಿತ್ರದ ನಾಯಕಿ. ಕನ್ನಡದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಜಗಪತಿ ಬಾಬು, ದಿವ್ಯೇಂದು ಮತ್ತು ಬೋಮನ್ ಇರಾನಿ ಅಂತಹ ಘಟಾನುಘಟಿ ನಟರು ಈ ಸಿನಿಮಾದಲ್ಲಿದ್ದಾರೆ.
ವೃದ್ಧಿ ಸಿನಿಮಾಸ್ ನಿರ್ಮಾಣದ ಈ ಚಿತ್ರದ ಶೂಟಿಂಗ್ ಈಗ ಕೊನೆಯ ಹಂತದಲ್ಲಿದೆ. 'ಪೆಡ್ಡಿ' ಸಿನಿಮಾ ಮುಂದಿನ ತಿಂಗಳು ಅಂದರೆ ಏಪ್ರಿಲ್ 30, 2026 ರಂದು ವರ್ಲ್ಡ್ ವೈಡ್ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಕ್ರಿಕೆಟರ್ ತಿಲಕ್ ವರ್ಮಾ ಅವರು 'ಪೆಡ್ಡಿ' ಸೆಟ್‌ಗೆ ಭೇಟಿ ನೀಡಿದ್ದು ಸುದ್ದಿಯಾಗಿತ್ತು. ಅಂದಿನಿಂದಲೇ ಈ ಚಿತ್ರದ ಬಗ್ಗೆ ಕ್ರೇಜ್ ಡಬಲ್ ಆಗಿದೆ.
His GRIT. His GAME. His PRIDE.
— PEDDI (@PeddiMovieOffl) March 27, 2026
Happy Birthday, PEDDI PEHELWAN, aka Mega Power Star @AlwaysRamCharan 💥#PeddiPehelwanGlimpse out now 🔥
▶️ https://t.co/J8nkqVxpCj#HBDRamCharan#PEDDI WORLDWIDE RELEASE ON 30th APRIL, 2026 pic.twitter.com/ImMf3bZQyz
'ರಂಗಸ್ಥಲಂ' ನಂತರ ರಾಮ್ ಚರಣ್ ಅವರ ಕೆರಿಯರ್‌ನಲ್ಲಿ ಇದು ಮತ್ತೊಂದು ಮೈಲಿಗಲ್ಲು ಆಗೋದು ಗ್ಯಾರಂಟಿ ಅಂತಿದ್ದಾರೆ ಸಿನಿಮಾ ಪಂಡಿತರು. ಕುಸ್ತಿ ಅಖಾಡದಲ್ಲಿ ಚರಣ್ ಅವರ ಅಬ್ಬರ ನೋಡಲು ನೀವು ಕಾಯ್ತಾ ಇದ್ದೀರಾ?