ಪೆದ್ದಿ ಸಿನಿಮಾಗೆ ರಾಮ್ ಚರಣ್ ಪಡೆದ ಸಂಭಾವನೆ ಬರೋಬ್ಬರಿ 100 ಕೋಟಿಯಂತೆ - ಶಿವಣ್ಣನಿಗೆ ಎಷ್ಟು ಗೊತ್ತಾ?

ಚಿತ್ರರಂಗದಲ್ಲಿ ಸದ್ಯ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾಗಳಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ (Peddi) ಸಿನಿಮಾ ಕೂಡ ಒಂದು. ಜೂನ್ 4 ರಂದು ತೆರೆಗೆ ಬರಲು ಸಜ್ಜಾಗಿರುವ ಈ ಕ್ರೀಡಾ ಆಧಾರಿತ ಆಕ್ಷನ್ ಡ್ರಾಮಾ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ. ಇದೀಗ ಸಿನಿಮಾ ರಿಲೀಸ್ ಬೆನ್ನಲ್ಲೇ, ಈ ಚಿತ್ರದಲ್ಲಿ ನಟಿಸಿರುವ ಕಲಾವಿದರ ಸಂಭಾವನೆ ಎಷ್ಟಿರಬಹುದು ಎಂಬ ಬಿಸಿಬಿಸಿ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

‘ಪೆದ್ದಿ’ ಸಿನಿಮಾ ಸಂಭಾವನೆ ಲಿಸ್ಟ್ ವೈರಲ್; | Photo Credit: https://www.instagram.com/dr_shivarajkumar_updates/
‘ಪೆದ್ದಿ’ ಸಿನಿಮಾ ಸಂಭಾವನೆ ಲಿಸ್ಟ್ ವೈರಲ್; | Photo Credit: https://www.instagram.com/dr_shivarajkumar_updates/

ಹಾಗಾದರೆ, ಈ ಬಿಗ್ ಬಜೆಟ್ ಸಿನಿಮಾಗೆ ರಾಮ್ ಚರಣ್ ಪಡೆದ ಸಂಭಾವನೆ ಎಷ್ಟು? ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಮತ್ತು ನಮ್ಮ ಹೆಮ್ಮೆಯ ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ ನಟನೆಯ ಈ ಚಿತ್ರದ ಉಳಿದ ಸ್ಟಾರ್ಸ್ ಎಷ್ಟು ಕೋಟಿ ಜೇಬಿಗೆ ಇಳಿಸಿಕೊಂಡಿದ್ದಾರೆ? ಮೀಡಿಯಾ ರಿಪೋರ್ಟ್‌ಗಳ ಪ್ರಕಾರ ಸಖತ್ ವೈರಲ್ ಆಗ್ತಿರೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದ ರಾಮ್ ಚರಣ್!

‘ಆರ್‌ಆರ್‌ಆರ್‌’ ಸಿನಿಮಾದ ಗ್ಲೋಬಲ್ ಸಕ್ಸಸ್ ನಂತರ ರಾಮ್ ಚರಣ್ ಮಾರ್ಕೆಟ್ ವ್ಯಾಲ್ಯೂ ಎಲ್ಲಿಗೋ ಹೋಗಿದೆ. ‘ಪೆದ್ದಿ’ ಸಿನಿಮಾದಲ್ಲಿ ಟೈಟಲ್ ರೋಲ್ ಪ್ಲೇ ಮಾಡಿರುವ ರಾಮ್ ಚರಣ್, ಈ ಒಂದೇ ಚಿತ್ರಕ್ಕಾಗಿ ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸಿನಿಮಾದಲ್ಲಿ ಅವರ ಲುಕ್ ಮತ್ತು ಕ್ಯಾರೆಕ್ಟರ್ ಅತ್ಯಂತ ಪವರ್‌ಫುಲ್ ಆಗಿ ಮೂಡಿಬಂದಿದ್ದು, ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದಿರುವುದು ಟಾಲಿವುಡ್ ಅಂಗಳದಲ್ಲಿ ದೊಡ್ಡ ಟಾಕ್ ಆಗಿದೆ.

ಗ್ಲಾಮರ್ ಗೊಂಬೆ ಜಾನ್ವಿ ಕಪೂರ್ ಚಾರ್ಜ್ ಮಾಡಿದ್ದೆಷ್ಟು?

ಶ್ರೀದೇವಿ ಪುತ್ರಿ, ಬಾಲಿವುಡ್‌ನ ಜಿನ್-ಝಿ ಕ್ರಶ್ ಜಾನ್ವಿ ಕಪೂರ್ ಈ ಚಿತ್ರದಲ್ಲಿ ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಸೌತ್ ಸಿನಿಮಾಗಳಲ್ಲಿ ಸದ್ಯ ಸಖತ್ ಬ್ಯುಸಿಯಾಗಿರುವ ಜಾನ್ವಿ ಕಪೂರ್, ‘ಪೆದ್ದಿ’ ಚಿತ್ರದ ನಾಯಕಿ ಪಾತ್ರಕ್ಕಾಗಿ ಬರೋಬ್ಬರಿ 6 ಕೋಟಿ ರೂಪಾಯಿ ಸಂಭಾವನೆ ತಗೆದುಕೊಂಡಿದ್ದಾರಂತೆ. ಗ್ಲಾಮರ್ ಜೊತೆಗೆ ನಟನೆಗೂ ಸ್ಕೋಪ್ ಇರೋ ಪಾತ್ರ ಇದಾಗಿದ್ದು, ಅವರ ಸಂಭಾವನೆ ಕೂಡ ಸಖತ್ ವರ್ತ್ ಎನ್ನಲಾಗುತ್ತಿದೆ.

ನಿರ್ದೇಶಕ ಬುಚ್ಚಿ ಬಾಬು ಸನಾಗೆ ಸಿಕ್ಕಿದ್ದೆಷ್ಟು?

‘ಉಪ್ಪೇನ’ ಸಿನಿಮಾದ ಭರ್ಜರಿ ಗೆಲುವಿನ ನಂತರ ಸ್ಟಾರ್ ಡೈರೆಕ್ಟರ್ ಲಿಸ್ಟ್ ಸೇರಿದ ಬುಚ್ಚಿ ಬಾಬು ಸನಾ ಈ ಚಿತ್ರವನ್ನು ಅದ್ಧೂರಿಯಾಗಿ ಡೈರೆಕ್ಟ್ ಮಾಡಿದ್ದಾರೆ. ರಾಮ್ ಚರಣ್ ಇಮೇಜ್‌ಗೆ ತಕ್ಕಂತೆ ಕಥೆ ರೆಡಿ ಮಾಡಿರುವ ಇವರು, ಈ ಪ್ರಾಜೆಕ್ಟ್‌ಗಾಗಿ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಒಬ್ಬ ನಿರ್ದೇಶಕನಿಗೆ ಇಷ್ಟು ದೊಡ್ಡ ಮೊತ್ತ ಸಿಕ್ಕಿರುವುದು ಚಿತ್ರದ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ.

ವಿಲನ್ ಮತ್ತು ಪೋಷಕ ನಟರ ಸಂಭಾವನೆ ವಿವರ

ಈ ಚಿತ್ರದಲ್ಲಿ ಟಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಅವರ ಸಂಭಾವನೆ ಕೂಡ ಕೋಟಿಗಳಲ್ಲೇ ಇದೆ:

ದಿವ್ಯೇಂದು ಶರ್ಮಾ (Divyendu Sharma): ‘ಮಿರ್ಜಾಪುರ’ ಖ್ಯಾತಿಯ ಬಾಲಿವುಡ್‌ನ ಪ್ರತಿಭಾವಂತ ನಟ ದಿವ್ಯೇಂದು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದು, ಅವರಿಗೆ 7 ಕೋಟಿ ರೂಪಾಯಿ ನೀಡಲಾಗಿದೆ ಎಂದು ವರದಿಯಾಗಿದೆ.

ಜಗಪತಿ ಬಾಬು (Jagapathi Babu): ಸೌತ್ ಸಿನಿಮಾಗಳ ಫೇಮಸ್ ವಿಲನ್ ಮತ್ತು ಪೋಷಕ ನಟ ಜಗಪತಿ ಬಾಬು ಅವರು ತಮ್ಮ ಕ್ಯಾರೆಕ್ಟರ್‌ಗಾಗಿ 4 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ.

ಬೊಮನ್ ಇರಾನಿ (Boman Irani): ಬಾಲಿವುಡ್‌ನ ಹಿರಿಯ ನಟ ಬೊಮನ್ ಇರಾನಿ ಅವರು ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

(ಗಮನಿಸಿ: ನಮ್ಮ ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ಕೂಡ ಈ ಸಿನಿಮಾದಲ್ಲಿ ಅತಿ ಮುಖ್ಯ ಪಾತ್ರವೊಂದನ್ನು ಮಾಡಿದ್ದಾರೆ. ಆದರೆ ಅವರ ಸಂಭಾವನೆ ವಿವರಗಳು ಸದ್ಯಕ್ಕೆ ಗೌಪ್ಯವಾಗಿದ್ದು, ಭಾರಿ ಮೊತ್ತವನ್ನೇ ಪಡೆದಿರುವ ಸಾಧ್ಯತೆ ಇದೆ.)

ಒಟ್ಟಿನಲ್ಲಿ ಸ್ಟಾರ್ ಕಾಸ್ಟಿಂಗ್ ಮತ್ತು ಬಜೆಟ್ ವಿಚಾರದಲ್ಲಿ ‘ಪೆದ್ದಿ’ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ಕೇವಲ ನಟ-ನಟಿಯರ ಸಂಭಾವನೆಗೇ ಹತ್ತಿರ ಹತ್ತಿರ 150 ಕೋಟಿಗೂ ಅಧಿಕ ಖರ್ಚು ಮಾಡಲಾಗಿದ್ದು, ಸಿನಿಮಾ ರಿಚ್ ಆಗಿ ಮೂಡಿಬಂದಿದೆ. ಜೂನ್ 4 ರಂದು ರಿಲೀಸ್ ಆಗಲಿರುವ ಈ ಸ್ಪೋರ್ಟ್ಸ್ ಆಕ್ಷನ್ ಮೂವಿ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕೋಟಿ ಲೂಟಿ ಮಾಡಲಿದೆ ಎಂಬುದನ್ನು ನೋಡಲು ಇಡೀ ಇಂಡಸ್ಟ್ರಿ ಕಾಯುತ್ತಿದೆ. ಸಿನಿಮಾ ಪ್ರೇಮಿಗಳೇ, ನಿಮ್ಮ ಪ್ರಕಾರ ಈ ಸಿನಿಮಾ ಫಸ್ಟ್ ಡೇ ಎಷ್ಟು ಕಲೆಕ್ಷನ್ ಮಾಡಬಹುದು? ಕಮೆಂಟ್ ಮಾಡಿ ತಿಳಿಸಿ ಮತ್ತು ನಿಮ್ಮ ಫ್ರೆಂಡ್ಸ್ ಗ್ರೂಪ್‌ಗೂ ಈ ಇಂಟರೆಸ್ಟಿಂಗ್ ಅಪ್ಡೇಟ್ ಶೇರ್ ಮಾಡಿ! 

Latest News