ರಾಮ್ ಚರಣ್ ಪಕ್ಕ ನಿಂತಿರೋ ಈ ಬೃಹತ್ ಕಟೌಟ್ ಯಾರು? ದಿನಕ್ಕೆ ₹2 ಲಕ್ಷ ಸಂಬಳ.. ಸತ್ಯ ಇಲ್ಲಿದೆ ನೋಡಿ!!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಸದ್ಯ ತಮ್ಮ ಮೋಸ್ಟ್ ಅವೈಟೆಡ್ ಸಿನಿಮಾ ‘ಪೆಡ್ಡಿ’ (Peddi) ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಜೂನ್ 04 ರಂದು ರಿಲೀಸ್ ಆಗ್ತಿರೋ ಈ ಹಳ್ಳಿ ಕ್ರೀಡಾ ಆಧಾರಿತ ಸಿನಿಮಾದ ಪ್ರಚಾರ ಸದ್ಯ ದೇಶದಾದ್ಯಂತ ಭರ್ಜರಿಯಾಗಿ ನಡೀತಿದೆ. ಮುಂಬೈ, ಭೋಪಾಲ್, ಬೆಂಗಳೂರು ಅಂತ ಚಿತ್ರತಂಡ ಸಖತ್ ರೌಂಡ್ಸ್ ಹಾಕ್ತಿದೆ. ಆದರೆ, ಈ ಎಲ್ಲಾ ಇವೆಂಟ್‌ಗಳಲ್ಲಿ ರಾಮ್ ಚರಣ್ ಅವರಿಗಿಂತ ಹೆಚ್ಚಾಗಿ ಎಲ್ಲರ ಕಣ್ಣು ಬಿದ್ದಿರೋದು ಅವರ ಪಕ್ಕದಲ್ಲೇ ಕಟೌಟ್ ತರಹ ನಿಂತಿರೋ ಒಬ್ಬ ಹೊಸ ಬಾಡಿಗಾರ್ಡ್ ಮೇಲೆ!

ಸಿನಿಮಾ ಪ್ರಚಾರದ ನಡುವೆ ಗ್ಲೋಬಲ್ ಸ್ಟಾರ್ ಬಾಡಿಗಾರ್ಡ್ ಹವಾ | Photo Credit: https://x.com/Cinee_Worldd
ಸಿನಿಮಾ ಪ್ರಚಾರದ ನಡುವೆ ಗ್ಲೋಬಲ್ ಸ್ಟಾರ್ ಬಾಡಿಗಾರ್ಡ್ ಹವಾ | Photo Credit: https://x.com/Cinee_Worldd

ಹೌದು, ರಾಮ್ ಚರಣ್ ಹಿಂದೆ ಬೆಂಗಾವಲಾಗಿ, ರಕ್ಷಣಾತ್ಮಕ ಗುರಾಣಿಯಂತೆ ನಿಂತಿರೋ ಈ ಬೃಹತ್ ಮೈಕಟ್ಟಿನ ವ್ಯಕ್ತಿಯ ಫೋಟೋ ಮತ್ತು ವೀಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ನೆಟ್ಟಿಗರು ಇವನ್ಯಾರು ಅಂತ ಇಂಟರ್ನೆಟ್‌ನಲ್ಲಿ ಜಾಲಾಡಿದಾಗ ಶಾಕಿಂಗ್ ವಿಚಾರಗಳು ಹೊರಬಂದಿವೆ.

ಯಾರು ಈ ಹೊಸ ಬಾಡಿಗಾರ್ಡ್?

ರಾಮ್ ಚರಣ್ ಅವರ ಪಕ್ಕದಲ್ಲಿ ಹಾಲಿವುಡ್ ಆಕ್ಷನ್ ಹೀರೊ ತರಹ ನಡೆದುಕೊಂಡು ಬರ್ತಿರೋ ಈ ಹೊಸ ಬಾಡಿಗಾರ್ಡ್ ಹೆಸರು ಕೆವಿನ್ ಕೌಂಟಾ (Kevin Counta). ಇವರ ಹಿನ್ನೆಲೆ ಸಾಮಾನ್ಯದ್ದಲ್ಲ:

ಮೂಲ: ಕೆವಿನ್ ಮೂಲತಃ ಆಫ್ರಿಕಾದ ಗ್ಯಾಂಬಿಯಾ ದೇಶದವರು. ಆದರೆ ಸದ್ಯ ಇವರು ಇಟಲಿಯಲ್ಲಿ ಸೆಟಲ್ ಆಗಿದ್ದಾರೆ.

MMA ಚಾಂಪಿಯನ್: ಬರೀ ಬಾಡಿ ಬಿಲ್ಡರ್ ಅಷ್ಟೇ ಅನ್ಕೋಬೇಡಿ, ಕೆವಿನ್ ಇಟಲಿಯ ವೃತ್ತಿಪರ ಮಿಶ್ರ ಸಮರ ಕಲೆಗಳ (MMA) ಹೋರಾಟಗಾರ. ಅಷ್ಟೇ ಅಲ್ಲ, ಅಲ್ಲಿನ ರಾಷ್ಟ್ರೀಯ ಮಿಡಲ್‌ವೇಟ್ ಎಂಎಂಎ ಚಾಂಪಿಯನ್ ಕೂಡ ಹೌದು!

ಅಂತರರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು, ಗ್ಲೋಬಲ್ ಸ್ಟಾರ್ಸ್ ಹಾಗೂ ವಿವಿಐಪಿಗಳಿಗೆ (VVIP) ಅತ್ಯುನ್ನತ ಮಟ್ಟದ ಕ್ಲೋಸ್ ಪ್ರೊಟೆಕ್ಷನ್ ಭದ್ರತೆ ಒದಗಿಸುವುದರಲ್ಲಿ ಕೆವಿನ್ ಇಡೀ ವಿಶ್ವದಲ್ಲೇ ಭಾರಿ ಬೇಡಿಕೆ ಹೊಂದಿದ್ದಾರೆ.

ಮುಂಬೈ ಇವೆಂಟ್‌ನಲ್ಲಿ ಕೆವಿನ್ ಹವಾ!

ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಪೆಡ್ಡಿ’ ಸಿನಿಮಾದ ಅದ್ಧೂರಿ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಹಾಗೂ ಮಾಧ್ಯಮದವರು ಮುಗಿಬಿದ್ದಿದ್ದರು. ಆ ಸಮಯದಲ್ಲಿ ರಾಮ್ ಚರಣ್‌ಗೆ ಒಂದು ಸಣ್ಣ ತರಚು ಗಾಯವೂ ಆಗದಂತೆ, ಇಡೀ ಜನಸಂದಣಿಯನ್ನು ಕೆವಿನ್ ಕೌಂಟಾ ಒಬ್ಬರೇ ಕಂಟ್ರೋಲ್ ಮಾಡಿದ ರೀತಿ ಸಿನಿರಂಗದವರನ್ನೇ ಹುಬ್ಬೇರಿಸುವಂತೆ ಮಾಡಿದೆ. ಇವರ ವೃತ್ತಿಪರ ಭದ್ರತಾ ವೈಖರಿ ಕಂಡು ಟಾಲಿವುಡ್ ಮಂದಿ ಫುಲ್ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ರಾಮ್ ಚರಣ್ ಪಕ್ಕದಲ್ಲಿ ಇವರು ನಡೆದು ಬರ್ತಿದ್ರೆ, ಯಾವುದೋ ತೆಲುಗು ಸಿನಿಮಾ ಸೀನ್ ತರಹ ಇಲ್ಲ, ಬದಲಿಗೆ ರಿಯಲ್ ಆಗಿ ಹಾಲಿವುಡ್ ಆಕ್ಷನ್ ಸಿನಿಮಾದ ಫೀಲ್ ಬರ್ತಿದೆ ಅಂತ ಸಿನಿರಸಿಕರು ಕಮೆಂಟ್ ಮಾಡ್ತಿದ್ದಾರೆ.

ದಿನದ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ!

ಇಷ್ಟೊಂದು ಹೈ-ಪ್ರೊಫೈಲ್ ಇಂಟರ್ನ್ಯಾಷನಲ್ ಬಾಡಿಗಾರ್ಡ್‌ನ ಇಟ್ಟುಕೊಂಡ ಮೇಲೆ ಅವರಿಗೆ ಕೊಡೋ ಸಂಬಳ ಕೂಡ ಅಷ್ಟೇ ಭಾರಿ ಪ್ರಮಾಣದಲ್ಲಿ ಇರಬೇಕಲ್ವಾ? ಹೌದು, ಸದ್ಯ ಫಿಲ್ಮ್ ನಗರ್‌ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ರಕ್ಷಣೆಗಾಗಿ ಕೆವಿನ್ ಕೌಂಟಾಗೆ ದಿನಕ್ಕೆ ಬರೋಬ್ಬರಿ 2 ಲಕ್ಷ ರೂಪಾಯಿ ಸಂಭಾವನೆ ನೀಡಲಾಗ್ತಿದೆ ಎನ್ನಲಾಗಿದೆ!

ಅಂದರೆ ತಿಂಗಳಿಗೆ ಲೆಕ್ಕ ಹಾಕಿದರೆ ಬರೋಬ್ಬರಿ 60 ಲಕ್ಷ ರೂಪಾಯಿ ಆಗುತ್ತೆ. ಒಬ್ಬ ಸಾಮಾನ್ಯ ಮನುಷ್ಯ ವರ್ಷ ಇಡೀ ಕಷ್ಟಪಟ್ಟರೂ ದುಡಿಯಲಾಗದ ಹಣವನ್ನು ಕೆವಿನ್ ಇಲ್ಲಿ ದಿನದ ಸಂಬಳವಾಗಿ ಪಡೀತಿದ್ದಾರೆ.

ಜೂನ್ 4 ಕ್ಕೆ 'ಪೆಡ್ಡಿ' ಧಮಾಕಾ!

ಬುಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬಂದಿರೋ 'ಪೆಡ್ಡಿ' ಸಿನಿಮಾದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಟಿಸಿದ್ದಾರೆ. ಚಿತ್ರದ ಮೇಲಿರೋ ಹೈಪ್ ನಡುವೆ, ಈ ಇಂಟರ್ನ್ಯಾಷನಲ್ ಬಾಡಿಗಾರ್ಡ್ ಕೆವಿನ್ ಎಂಟ್ರಿ ಪ್ರಚಾರ ಕಾರ್ಯಕ್ರಮಗಳಿಗೆ ಮತ್ತಷ್ಟು ಕಳೆ ತಂದಿದೆ.

Latest News