ಸೀರಿಯಲ್ ಪ್ರೇಕ್ಷಕರಿಗೆ ಈ ಸ್ಟೋರಿಯಲ್ಲಿ ಎರಡು ಗುಡ್ ನ್ಯೂಸ್ ಇದೆ. ಮೊದಲನೆಯದಾಗಿ ಒಂದು ಹೊಸ ಧಾರವಾಹಿ ಆರಂಭವಾಗುತ್ತಿದೆ. ಎರಡನೆಯದಾಗಿ, ನೀವು ಮೆಚ್ಚಿಕೊಂಡಿರುವ ಹೀರೋಯಿನ್ ಆ ಸೀರಿಯಲ್‌ನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಖುಷಿಯ ವಿಚಾರ ಇನ್ನೇನು ಬೇಕು ಹೇಳಿ? ಇದಕ್ಕೆ ಜೊತೆಗೆ ಇನ್ನಷ್ಟು ರೋಚಕ ಸಂಗತಿಗಳೂ ಈ ಸ್ಟೋರಿಯಲ್ಲಿ ಅಡಗಿವೆ.
ಇತ್ತೀಚೆಗೆ ‘ಕೃಷ್ಣ–ರುಕ್ಕು’ ಧಾರವಾಹಿಯ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ, ಬಹುತೇಕ ಜನರು ಇದು ಹೊಸ ಸೀರಿಯಲ್ ಅಂತಲೇ ಅಂದ್ಕೊಂಡಿದ್ದಾರೆ. ಹೌದು, ಇದು ಸಂಪೂರ್ಣ ಹೊಸ ಧಾರವಾಹಿಯೇ. ಆದರೆ ಈ ಸೀರಿಯಲ್‌ಗೆ ಒಂದು ದೊಡ್ಡ ಸ್ಪೆಷಾಲಿಟಿ ಇದೆ. ಅದೇನು ಅಂದ್ರೆ, ಈ ಧಾರವಾಹಿಯ ನಾಯಕಿಯಾಗಿ ಮೌನ ಗುಡ್ಡಮನೆ ಅವರು ಆಯ್ಕೆಯಾಗಿದ್ದಾರೆ. ಇಲ್ಲಿ ಆಶ್ಚರ್ಯ ಪಡುವಂತಹ ವಿಷಯ ಏನಂದ್ರೆ, ಸಾಮಾನ್ಯವಾಗಿ ಒಂದು ಹಿಟ್ ಸೀರಿಯಲ್ ಕೊಟ್ಟ ನಂತರ ನಟ ಅಥವಾ ನಟಿಗೆ ತಕ್ಷಣವೇ ಮತ್ತೊಂದು ಲೀಡ್ ರೋಲ್ ಸಿಗೋದಿಲ್ಲ. ಇದಕ್ಕೆ ಕಾರಣ ಟಿವಿ ಇಂಡಸ್ಟ್ರಿಯಲ್ಲಿರುವ ಅಘೋಷಿತ ನಿಯಮಗಳು. ಒಂದು ಪಾತ್ರ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟರೆ, ಆ ಪಾತ್ರದಿಂದ ಹೊರಬರಲು ಸಮಯ ಬೇಕಾಗುತ್ತದೆ ಎಂಬ ನಂಬಿಕೆ ಇದೆ.
‘ರಾಮಾಚಾರಿ’ ಎಂಬ ಸೂಪರ್ ಡೂಪರ್ ಹಿಟ್ ಧಾರವಾಹಿಯಲ್ಲಿ ಚಾರು ಪಾತ್ರದ ಮೂಲಕ ಮೌನ ಗುಡ್ಡಮನೆ ಮನೆಮಾತಾಗಿದ್ದರು. ಆ ಪಾತ್ರ ಅಷ್ಟು ಜನಪ್ರಿಯವಾಗಿತ್ತು ಅಂದ್ರೆ, ಜನರು ಇನ್ನೂ ಆ ಪಾತ್ರವನ್ನೇ ನೆನಪಿಸಿಕೊಳ್ಳುತ್ತಾರೆ. ಇಂಥ ಸಂದರ್ಭಗಳಲ್ಲಿ ನಟಿಯರು ಹೊಸ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ರೇಕ್ಷಕರಿಗೆ ಗೊಂದಲವಾಗಬಹುದು ಅನ್ನೋದು ಇಂಡಸ್ಟ್ರಿಯ ಅಭಿಪ್ರಾಯ. ಹಿಂದೆ ನೋಡಿದ್ರೆ, ಹಲವಾರು ಹಿಟ್ ಸೀರಿಯಲ್ ನಟ–ನಟಿಯರು ಹೊಸ ಅವಕಾಶಕ್ಕಾಗಿ ಸಾಕಷ್ಟು ಸಮಯ ಕಾದ ಉದಾಹರಣೆಗಳಿವೆ. ಕೆಲವರು ವರ್ಷಗಟ್ಟಲೆ ಬ್ರೇಕ್ ತೆಗೆದುಕೊಂಡಿರುವುದೂ ಇದೆ. ಆದರೆ ಈ ವಿಚಾರದಲ್ಲಿ ಮೌನ ಗುಡ್ಡಮನೆ ತುಂಬಾ ಲಕ್ಕಿ ಅನ್ನಬಹುದು.
ಹಿಟ್ ಪಾತ್ರದ ನಂತರವೂ ಮತ್ತೆ ಲೀಡ್ ರೋಲ್ ಸಿಕ್ಕಿರೋದು ಅವರ ಟ್ಯಾಲೆಂಟ್‌ಗೆ ಸಿಕ್ಕ ಪ್ರಶಂಸೆಯೇ. ‘ಕೃಷ್ಣ–ರುಕ್ಕು’ ಧಾರವಾಹಿಯಲ್ಲೂ ಮೌನ ಗುಡ್ಡಮನೆ ಚಾರು ತರಹ ಮಿಂಚಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.