Feb 16, 2026 Languages : ಕನ್ನಡ | English

3 ಕೋಟಿ ಆಸ್ತಿ ನಿತ್ಯಾ ಹೆಸರಿಗೆ? ಲುಕ್ ನೋಡಿದ್ರೆ ಫ್ಯಾನ್ಸ್ ಶಾಕ್!!

ಕನ್ನಡದ ಜನಪ್ರಿಯ ಕರ್ಣ ಸೀರಿಯಲ್ನಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುವ ಟ್ವಿಸ್ಟ್‌ಗಳು ಬರುತ್ತಿವೆ. ಇತ್ತೀಚಿನ ಎಪಿಸೋಡ್‌ನಲ್ಲಿ ಕರ್ಣ ನೀಡಿದ ತಿರುಗೇಟು ಪ್ರೇಕ್ಷಕರನ್ನು ಅಚ್ಚರಿ ಮೂಡಿಸಿದೆ. ನಿತ್ಯಾ ಮತ್ತು ಕರ್ಣನ ಜೀವನದಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದ ರಮೇಶ್‌ನ ಪ್ಲ್ಯಾನ್‌ನ್ನೇ ಕರ್ಣ ಉಲ್ಟಾ ಮಾಡಿದ್ದಾನೆ.

ಕರ್ಣ ಸೀರಿಯಲ್ ಟ್ವಿಸ್ಟ್ ಜೊತೆಗೆ ನಮ್ರತಾ ಗೌಡ ಮಾಡರ್ನ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹಿಟ್
ಕರ್ಣ ಸೀರಿಯಲ್ ಟ್ವಿಸ್ಟ್ ಜೊತೆಗೆ ನಮ್ರತಾ ಗೌಡ ಮಾಡರ್ನ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹಿಟ್

ರಮೇಶ್‌ನ ಯೋಜನೆಯಂತೆ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿದರೆ ನಿತ್ಯಾ ಮತ್ತು ಕರ್ಣ ಗಂಡ-ಹೆಂಡತಿ ಎಂದು ಕಾನೂನಾತ್ಮಕವಾಗಿ ಒಪ್ಪಿಕೊಂಡಂತಾಗುತ್ತದೆ ಎಂದುಕೊಂಡಿದ್ದ. ಇದೇ ಕಾರಣಕ್ಕೆ ಆಸ್ತಿ ವರ್ಗಾವಣೆ ಮಾಡಲು ಸರ್ಟಿಫಿಕೇಟ್ ಬೇಕು ಎಂದು ಹೇಳಿದ್ದ. ಆದರೆ ರಮೇಶ್ ಯೋಚನೆಗೆ ಶಾಕ್ ನೀಡಿದ ಕರ್ಣ, ನಿತ್ಯಾಳ ನಕಲಿ ಸಹಿ ಹಾಕಿಸಿ, 3 ಕೋಟಿ ರೂಪಾಯಿ ಆಸ್ತಿಯನ್ನು ನಿತ್ಯಾಳ ಹೆಸರಿಗೆ ಬರೆಯಲು ಹೇಳಿದ್ದಾನೆ. ಇದರಿಂದ ರಮೇಶ್ ಸಂಪೂರ್ಣ ಗಾಬರಿಗೊಂಡಿದ್ದಾನೆ.

ಸೀರಿಯಲ್‌ನಲ್ಲಿ ಇಂತಹ ದೊಡ್ಡ ಟ್ವಿಸ್ಟ್ ನಡೆಯುತ್ತಿರುವಾಗಲೇ, ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ರಿಯಲ್ ಲೈಫ್‌ನಲ್ಲಿ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಯ ಬದಲು ಮಾಡರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ನಮ್ರತಾ ಗೌಡ ಮದುಮಗಳಂತೆ ಕಂಗೊಳಿಸುತ್ತಿದ್ದಾರೆ.

ಈ ಲುಕ್ ನೋಡಿದ ಅಭಿಮಾನಿಗಳು ಸೀರಿಯಲ್ ಕಥೆಯ ಜೊತೆಗೆ ಇದನ್ನು ಜೋಡಿಸಿ ತಮಾಷೆ ಮಾಡಿದ್ದಾರೆ.
“3 ಕೋಟಿ ಆಸ್ತಿ ಬರ್ತಿದ್ದಂತೆಯೇ ಲುಕ್‌ನೇ ಚೇಂಜಾಯ್ತು” ಎಂದು ಕಾಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ. ಸೀರಿಯಲ್ ಕಥೆಗೆ ಮತ್ತು ಫೋಟೋಶೂಟ್‌ಗೆ ಯಾವುದೇ ಸಂಬಂಧ ಇಲ್ಲದಿದ್ದರೂ, ಫ್ಯಾನ್ಸ್ ಈ ರೀತಿ ಕನೆಕ್ಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ನಮ್ರತಾ ಗೌಡ, ಆಗಾಗಾ ಹೊಸ ಫೋಟೋಶೂಟ್‌ಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಈ ಬಾರಿ ಅವರ ಮಾಡರ್ನ್ ಲುಕ್ ಅಭಿಮಾನಿಗಳನ್ನು ಇನ್ನಷ್ಟು ಆಕರ್ಷಿಸಿದೆ. ಕರ್ಣ ಸೀರಿಯಲ್‌ನ ಟ್ವಿಸ್ಟ್ ಜೊತೆಗೆ, ನಿತ್ಯಾ ಲುಕ್ ಈಗ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದೆ.

Latest News