ಸದ್ಯಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲೇ ನೋಡಿದ್ರೂ ಬರೀ 'ಧುರಂಧರ್'ದ್ದೇ ಸೌಂಡ್. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಕೇವಲ 11 ದಿನಗಳಲ್ಲಿ ವಿಶ್ವಾದ್ಯಂತ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರೋ ಈ ಸಿನಿಮಾ ಈಗ ಗಡಿ ದಾಟಿ ಪಾಕಿಸ್ತಾನದಲ್ಲೂ ಸಖತ್ ಚರ್ಚೆ ಆಗ್ತಿದೆ. ವಿಶೇಷ ಅಂದ್ರೆ, ಈ ಸಿನಿಮಾ ಪಾಕಿಸ್ತಾನದಲ್ಲಿ ಅಫೀಶಿಯಲ್ ಆಗಿ ರಿಲೀಸ್ ಆಗೇ ಇಲ್ಲ. ಆದ್ರೂ ಅಲ್ಲಿನ ಲಿಯಾರಿ ಏರಿಯಾದ ಜನ ಈಗ ಈ ಸಿನಿಮಾದ ಲಾಭದಲ್ಲಿ ನಮಗೂ ಪಾಲು ಕೊಡಿ ಅಂತ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ.
ಅಸಲಿ ಮ್ಯಾಟರ್ ಏನಪ್ಪಾ ಅಂದ್ರೆ, ಈ 'ಧುರಂಧರ್' ಸಿನಿಮಾದ ಕಥೆ ನಡೆಯೋದು ಕರಾಚಿಯ ಲಿಯಾರಿ ಅನ್ನೋ ಸ್ಲಮ್ ಏರಿಯಾದಲ್ಲಿ. ಅಲ್ಲಿನ ಗ್ಯಾಂಗ್‌ವಾರ್‌ಗಳು, ಕ್ರಿಮಿನಲ್‌ಗಳು ಮತ್ತು ಸರ್ಕಾರದ ನಡುವಿನ ಸಂಬಂಧದ ಬಗ್ಗೆ ಈ ಸಿನಿಮಾ ಮಾಡಲಾಗಿದೆ. ಈ ಕಥೆ ತಮ್ಮ ಏರಿಯಾದ್ದು ಅಲ್ವಾ, ಹಾಗಾಗಿ ಸಿನಿಮಾ ಗಳಿಸಿರೋ 1000 ಕೋಟಿ ಹಣದಲ್ಲಿ ನಮಗೆ ಕನಿಷ್ಠ 500 ಕೋಟಿ ರೂ. ಕೊಡಿ ಅಂತ ಅಲ್ಲಿನ ಜನ ಡಿಮ್ಯಾಂಡ್ ಮಾಡ್ತಿದ್ದಾರೆ. ಕಾಳಸಂತೆಯಲ್ಲಿ (ಪೈರಸಿ) ಸಿನಿಮಾ ನೋಡಿರೋ ಲಿಯಾರಿ ಜನ, "ನಮ್ಮ ಏರಿಯಾ ಕಥೆ ಇಟ್ಕೊಂಡು ಇಷ್ಟೊಂದು ದುಡ್ಡು ಮಾಡಿದ್ದೀರಾ, ನಮಗೆ ಸ್ವಲ್ಪ ಸಹಾಯ ಮಾಡಿ" ಅಂತ ವಿಡಿಯೋ ಮಾಡಿ ರಿಕ್ವೆಸ್ಟ್ ಮಾಡ್ತಿದ್ದಾರೆ.
ಲಿಯಾರಿ ಏರಿಯಾದ ಜನ ಈ ಹಣವನ್ನ ಯಾಕೆ ಕೇಳ್ತಿದ್ದಾರೆ ಗೊತ್ತಾ? ಅವರ ಪ್ರಕಾರ ಆ ಏರಿಯಾದಲ್ಲಿ ರಸ್ತೆಗಳು ಸರಿ ಇಲ್ಲವಂತೆ, ಮಕ್ಕಳಿಗೆ ಓಡಾಡಲು ಜಾಗ ಇಲ್ಲವಂತೆ. "ನಮಗೆ ಒಂದು 500 ಕೋಟಿ ಕೊಟ್ಟುಬಿಡಿ, ನಾವು ಚೆನ್ನಾಗಿರೋ ರಸ್ತೆ ಮಾಡ್ಕೊತೀವಿ, ಮೂಲಸೌಕರ್ಯ ಅಭಿವೃದ್ಧಿ ಮಾಡ್ತೀವಿ" ಅಂತ ಸಿನಿಮಾ ಟೀಮ್‌ಗೆ ಕೇಳಿಕೊಂಡಿದ್ದಾರೆ. ಇದನ್ನ ನೋಡಿರೋ ನಮ್ಮ ನೆಟ್ಟಿಗರು, "ಮ್ಯಾಟರ್ ನಿಮ್ಮ ಏರಿಯಾದ್ದು ಇರಬಹುದು, ಆದ್ರೆ ಶೂಟಿಂಗ್ ಮಾಡಿದ್ದು ಥೈಲ್ಯಾಂಡ್‌ನಲ್ಲಿ. ಅದಕ್ಕೂ ನಿಮಗೂ ಏನ್ ಸಂಬಂಧ?" ಅಂತ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು, "ಸಿನಿಮಾ ನೋಡಿರೋದೇ ಪೈರಸಿಯಲ್ಲಿ, ಈಗ ಪಾಲು ಕೇಳ್ತಿದ್ದಾರಲ್ಲಾ" ಅಂತ ಫನ್ನಿ ಕಾಮೆಂಟ್ ಮಾಡ್ತಿದ್ದಾರೆ.
ಇನ್ನು ಈ ಸಿನಿಮಾದ ಮೇಕಿಂಗ್ ಬಗ್ಗೆ ಹೇಳೋದಾದ್ರೆ, ಕರಾಚಿಯ ಆ ಲಿಯಾರಿ ಸ್ಲಮ್ ಅನ್ನೇ ಹೋಲುವ ಬೃಹತ್ ಸೆಟ್ ಅನ್ನು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಿರ್ಮಿಸಲಾಗಿತ್ತು. ಸುಮಾರು 6 ಎಕರೆ ಜಾಗದಲ್ಲಿ ಡಿಸೈನರ್ ಸೈನಿ ಎಸ್ ಜೋಹ್ರೇ ಕೇವಲ 20 ದಿನಗಳಲ್ಲಿ ಈ ಸೆಟ್ ರೆಡಿ ಮಾಡಿದ್ದರಂತೆ. ಚಿತ್ರದ ರಿಯಾಲಿಟಿ ಎಷ್ಟಿದೆ ಅಂದ್ರೆ, ಲಿಯಾರಿ ಜನರು ಇದು ನಮ್ಮೂರೇ ಅನ್ಕೊಂಡು ನಂಬುವಷ್ಟು ನ್ಯಾಚುರಲ್ ಆಗಿ ಮೂಡಿಬಂದಿದೆ. ಬಹುಶಃ ಇದೇ ಕಾರಣಕ್ಕೆ ಅಲ್ಲಿನ ಜನ ಈಗ ಲಾಭದಲ್ಲಿ ಪಾಲು ಕೇಳೋಕೆ ಧೈರ್ಯ ಮಾಡಿದ್ದಾರೆ ಅನ್ಸುತ್ತೆ.
"Aditya Dhar ji, attention please..." 🤣🤣
— Suraj Kumar Bauddh (@SurajKrBauddh) March 27, 2026
Dhurandhar 2 has earned over ₹1000 crore
so far. Now, people of LYARI are demanding a 50% share for their development. 🤣
Pakistan govt is not developing Lyari despite getting billions in loans from US and IMF. pic.twitter.com/gVaHP3R39W
ಸದ್ಯದ ಬಾಕ್ಸ್ ಆಫೀಸ್ ರಿಪೋರ್ಟ್ ನೋಡಿದ್ರೆ ಧುರಂಧರ್ ನಾಗಾಲೋಟ ನಿಲ್ಲೋ ಹಾಗೆ ಕಾಣ್ತಿಲ್ಲ. ಭಾರತದಲ್ಲೇ ಸುಮಾರು 770 ಕೋಟಿ ಗಳಿಸಿರೋ ಈ ಚಿತ್ರ, ಓವರ್‌ಆಲ್ ಆಗಿ 1226 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಇಷ್ಟೊಂದು ಹಣ ಗಳಿಸಿರೋ ಸಿನಿಮಾ ತಂಡಕ್ಕೆ ಪಾಕಿಸ್ತಾನದ ಈ ವಿಚಿತ್ರ ಬೇಡಿಕೆ ಮಾತ್ರ ದೊಡ್ಡ ಕಾಮಿಡಿಯಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಸಿನಿಮಾದ ಕ್ರೇಜ್ ಗಡಿ ದಾಟಿ, ಈಗ ರಸ್ತೆ ಮಾಡಿಸೋ ಹಂತಕ್ಕೆ ಹೋಗಿರೋದು ಮಾತ್ರ ಐಪಿಎಲ್‌ಗಿಂತಲೂ ಇಂಟರೆಸ್ಟಿಂಗ್ ಆಗಿದೆ.