ಅಸಲಿಗೆ ಚರಿತ್ ಬಾಳಪ್ಪ ಧ್ರುವಂತ್ ಆಗಿದ್ದು ಹೇಗೆ? ಯಾರಿಗೂ ಗೊತ್ತಿರದ ಧ್ರುವಂತ್ ಕಥೆ!!

ಕನ್ನಡ  ಕಿರುತೆರೆಯಲ್ಲಿ ಧ್ರುವಂತ್ ಎಂಬ ಹೆಸರು ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿದೆ. ಮೂಲ ಹೆಸರು ಚರಿತ್ ಬಾಳಪ್ಪ. ಆದರೆ, ಪ್ರೇಕ್ಷಕರಿಗೆ ಅವರು ಧ್ರುವಂತ್ ಎಂಬ ಹೆಸರಿನಿಂದಲೇ ಪರಿಚಿತರಾಗಿದ್ದಾರೆ. ಈ ಹೆಸರಿನ ಹಿಂದೆ ಅವರ ಹೋರಾಟ, ಕನಸು ಮತ್ತು ಕಲಾತ್ಮಕ ಪಯಣ ಅಡಗಿದೆ.

ಮುದ್ದುಲಕ್ಷ್ಮಿಯಿಂದ ಬಿಗ್ ಬಾಸ್ ಕನ್ನಡದವರೆಗೆ ಹೋರಾಟದ ಪಯಣ
ಮುದ್ದುಲಕ್ಷ್ಮಿಯಿಂದ ಬಿಗ್ ಬಾಸ್ ಕನ್ನಡದವರೆಗೆ ಹೋರಾಟದ ಪಯಣ

ಬಂಟ್ವಾಳ ಮೂಲದ ಚರಿತ್ ಬಾಳಪ್ಪ ಬಾಲ್ಯದಿಂದಲೇ ಕಲೆಗೆ ಆಸಕ್ತಿ ಹೊಂದಿದ್ದರು. ರಂಗಭೂಮಿ, ಸಣ್ಣಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ ಪ್ರತಿಭೆಯನ್ನು ತೋರಿಸಿದರು. ಆದರೆ, ಕನ್ನಡ ಕಿರುತೆರೆ ಲೋಕಕ್ಕೆ ಪ್ರವೇಶಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅನೇಕ ಬಾರಿ ತಿರಸ್ಕಾರ ಎದುರಿಸಿದರೂ, ತಮ್ಮ ಕನಸನ್ನು ಕೈಬಿಡದೆ ಹೋರಾಟ ಮುಂದುವರಿಸಿದರು ಧ್ರುವಂತ್. 

ಅವರ ಜೀವನದಲ್ಲಿ ದೊಡ್ಡ ತಿರುವು ತಂದದ್ದು ಮುದ್ದುಲಕ್ಷ್ಮಿ ಧಾರಾವಾಹಿ. ಈ ಧಾರಾವಾಹಿಯಲ್ಲಿ ಅವರು ಡಾ. ಧ್ರುವಂತ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರವೇ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಪ್ರೇಕ್ಷಕರು ಅವರನ್ನು ಪಾತ್ರದ ಹೆಸರಿನಿಂದಲೇ ಗುರುತಿಸಲು ಆರಂಭಿಸಿದರು. ಧ್ರುವಂತ್ ಎಂಬ ಹೆಸರೇ ಅವರ ಕಲಾತ್ಮಕ ಗುರುತಾಗಿ ಪರಿಣಮಿಸಿತು. ಆದರೆ, ಈ ಪಯಣ ಸುಗಮವಾಗಿರಲಿಲ್ಲ. ಕೋವಿಡ್ ಸಮಯದಲ್ಲಿ ಧಾರಾವಾಹಿಯಿಂದ ಇವರನ್ನು ಬದಲಾಯಿಸಲಾಯಿತು. 

ಇದು ಅವರ ಜೀವನದಲ್ಲಿ ದೊಡ್ಡ ಆಘಾತವಾಗಿತ್ತು. ಪಾತ್ರ ಕಳೆದುಕೊಂಡರೂ, ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದೆ ಮತ್ತೆ ಅವಕಾಶಗಳಿಗಾಗಿ ಹೋರಾಟ ಮುಂದುವರಿಸಿದರು. ಅವರ ಮೇಲೆ ಕೆಲವು ವಿವಾದಗಳು, ಆರೋಪಗಳು ಬಂದರೂ, ಧ್ರುವಂತ್ ತಮ್ಮನ್ನು ತಾವು ಸಾಬೀತುಪಡಿಸಲು ಪ್ರಯತ್ನಿಸಿದರು. “ನನ್ನನ್ನು ಜನರು ಪಾತ್ರದ ಹೆಸರಿನಿಂದ ಗುರುತಿಸುತ್ತಾರೆ. ಅದು ನನಗೆ ಸಂತೋಷ, ಆದರೆ ಅದೇ ಹೊಣೆಗಾರಿಕೆಯೂ ಆಗಿದೆ” ಎಂದು ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅವರು ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಮ್ಮ ವ್ಯಕ್ತಿತ್ವವನ್ನು ನೇರವಾಗಿ ಜನರಿಗೆ ತೋರಿಸುವ ಅವಕಾಶ ಪಡೆದುಕೊಂಡರು. ಧಾರಾವಾಹಿಗಳಲ್ಲಿ ನಟನೆಯನ್ನು ತೋರಿಸಿದ್ದ ಧ್ರುವಂತ್, ರಿಯಾಲಿಟಿ ಶೋ ಮೂಲಕ ತಮ್ಮ ನಿಜವಾದ ಬದುಕಿನ ಹೋರಾಟ, ಧೈರ್ಯ ಮತ್ತು ಕನಸುಗಳನ್ನು ಎಲ್ಲರಿಗೂ ತಲುಪಿಸಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರ ಬಂದಮೇಲೆ ನಮ್ಮ ಸಪ್ತಾಶ್ವ ಕನ್ನಡ ಟಿವಿ ಚಾನೆಲ್ ಗೆ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಅವರ ಜೀವನದ ಕೆಲವು ಅಂಶಗಳನ್ನ, ಗೊತ್ತಿಲ್ಲದ ಕೆಲವು ವಿಚಾರಗಳನ್ನು ಹಂಚಿಕೊಂಡರು.

 

ಒಟ್ಟಾರೆ, ಚರಿತ್ ಬಾಳಪ್ಪ ಎಂಬ ಸಾಮಾನ್ಯ ಯುವಕ, ಧ್ರುವಂತ್ ಎಂಬ ಕಲಾವಿದನಾಗಿ ಬೆಳಕಿಗೆ ಬಂದ ಕಥೆ, ಹೋರಾಟ ಮತ್ತು ಸಾಧನೆಯ ಪಯಣವಾಗಿದೆ. ಅವರು ಏನೆಲ್ಲಾ ಹೇಳಿದರು ಎಂದು ಈ ವಿಡಿಯೋ ಮೂಲಕ ತಿಳಿದುಕೊಳ್ಳಿ. ಅವರ ಜೀವನವು ಕನ್ನಡದ ಅನೇಕ ಯುವ ಕಲಾವಿದರಿಗೆ ಪ್ರೇರಣೆಯಾಗಿದ್ದು, ಧೈರ್ಯದಿಂದ ಹೋರಾಡಿದರೆ ಕನಸುಗಳು ನಿಜವಾಗುತ್ತವೆ ಎಂಬ ಸಂದೇಶ ನೀಡಿದ್ದಾರೆ.  

Latest News