ಬಿಗ್‌ಬಾಸ್ ಕನ್ನಡ ಸೀಸನ್ 12 ತನ್ನ ಕೊನೆಯ ಹಂತಕ್ಕೆ ತಲುಪಿದೆ. ಪ್ರತಿ ವಾರವೂ ಪ್ರೇಕ್ಷಕರಿಗೆ ಹೊಸ ತಿರುವು ನೀಡಿದ ಈ ಶೋ, ಫಿನಾಲೆ ವಾರದಲ್ಲಿ ಮಧ್ಯರಾತ್ರಿ ಎಲಿಮಿನೇಷನ್ ಮೂಲಕ ದೊಡ್ಡ ಶಾಕ್ ನೀಡಿದೆ. ತಾನೇ ವಿನ್ನರ್ ಎಂದು ಅಬ್ಬರಿಸಿದ್ದ ಧ್ರುವಂತ್, ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಬಂದಿದ್ದಾರೆ ಎಂದು ಕೇಳಿ ಬಂದಿದೆ. ನಿಜಕ್ಕೂ ಈ ಸುದ್ದಿ ಅಭಿಮಾನಿಗಳಿಗೆ ಅಚ್ಚರಿಯಾಗಿದೆ ಎನ್ನಬಹುದು.
ಹೌದು ಧ್ರುವಂತ್ ಹೊರಬಂದ ನಂತರ, ಗಿಲ್ಲಿ, ರಘು, ಕಾವ್ಯ, ರಕ್ಷಿತಾ, ಅಶ್ವಿನಿ ಮತ್ತು ಧನುಷ್ ಫಿನಾಲೆ ಹಂತಕ್ಕೆ ಪ್ರವೇಶಿಸಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿ, ಆಟದ ತಂತ್ರ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗಿಲ್ಲಿ ತನ್ನ ಹಾಸ್ಯಭರಿತ ಶೈಲಿಯಿಂದ ಗಮನ ಸೆಳೆದಿದ್ದಾನೆ. ರಘು ತನ್ನ ಸರಳತೆ ಮತ್ತು ನೇರ ಮಾತಿನಿಂದ ಪ್ರೇಕ್ಷಕರ ಮನ ಗೆದ್ದಿದ್ದಾನೆ. ಕಾವ್ಯ ಭಾವನಾತ್ಮಕ ಆಟದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾಳೆ. ರಕ್ಷಿತಾ ತನ್ನ ಧೈರ್ಯಶಾಲಿ ನಿಲುವಿನಿಂದ ಸದಾ ಚರ್ಚೆಯಲ್ಲಿದ್ದಾಳೆ. ಅಶ್ವಿನಿ ನಿರಂತರವಾಗಿ ಟಾಸ್ಕ್‌ಗಳಲ್ಲಿ ತೊಡಗಿಸಿಕೊಂಡು ತನ್ನ ಶಕ್ತಿ ತೋರಿಸಿದ್ದಾರೆ. ಧನುಷ್ ಟಿಕೆಟ್ ಟು ಫಿನಾಲೆ ಗೆದ್ದು ನೇರವಾಗಿ ಫಿನಾಲೆ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ಪ್ರೇಕ್ಷಕರ ಅಭಿಪ್ರಾಯದ ಪ್ರಕಾರ, ಗಿಲ್ಲಿ ಮತ್ತು ರಘು ಕೆಲವೊಮ್ಮೆ ಆಟದಲ್ಲಿ ದುರ್ಬಲವಾಗಿ ಕಾಣಿಸಿಕೊಂಡಿದ್ದಾರೆ. ಕಾವ್ಯ ಮತ್ತು ರಕ್ಷಿತಾ ತಮ್ಮ ಭಾವನಾತ್ಮಕ ಆಟದಿಂದ ಗಮನ ಸೆಳೆದಿದ್ದಾರೆ. ಅಶ್ವಿನಿ ನಿರಂತರವಾಗಿ ಚರ್ಚೆಯಲ್ಲಿರುವ ಸ್ಪರ್ಧಿ. ಆದರೆ ಧನುಷ್ ಟಾಸ್ಕ್‌ಗಳಲ್ಲಿ ತೋರಿದ ಶಕ್ತಿ ಮತ್ತು ಫಿನಾಲೆ ಟಿಕೆಟ್ ಸಾಧನೆಯಿಂದ ಸುರಕ್ಷಿತ ಸ್ಥಾನದಲ್ಲಿದ್ದಾರೆ. ಹೌದು ಈ ಸೀಸನ್‌ನಲ್ಲಿ ಧನುಷ್ ಅತ್ಯಂತ ಬಲಿಷ್ಠ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾನೆ. ಟಾಸ್ಕ್‌ಗಳಲ್ಲಿ ತೋರಿದ ಶಕ್ತಿ, ಅಭಿಮಾನಿಗಳ ಬೆಂಬಲ ಮತ್ತು ಫಿನಾಲೆ ಟಿಕೆಟ್ ಗೆದ್ದ ಸಾಧನೆ ಅವರ ಬಲವನ್ನು ತೋರಿಸುತ್ತದೆ. ಜೊತೆಗೆ ಕಾವ್ಯ ಮತ್ತು ರಕ್ಷಿತಾ ಕೂಡಾ ತಮ್ಮ ಭಾವನಾತ್ಮಕ ಆಟದಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12 ತನ್ನ ಕೊನೆಯ ಹಂತದಲ್ಲಿ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ. ಧ್ರುವಂತ್ ಹೊರಬಂದಿರುವುದು ಅಚ್ಚರಿಯ ಸಂಗತಿ. ಉಳಿದ ಸ್ಪರ್ಧಿಗಳಲ್ಲಿ ಯಾರು ಫಿನಾಲೆಗೂ ತಲುಪುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಧನುಷ್ ಸ್ಟ್ರಾಂಗ್ ಸ್ಪರ್ಧಿಯಾಗಿ ಹೊರಹೊಮ್ಮಿರುವುದು ಸ್ಪಷ್ಟ. ಗಿಲ್ಲಿ, ರಘು, ಕಾವ್ಯ, ರಕ್ಷಿತಾ ಮತ್ತು ಅಶ್ವಿನಿ ತಮ್ಮದೇ ಆದ ಶೈಲಿಯಲ್ಲಿ ಅಭಿಮಾನಿಗಳ ಬೆಂಬಲ ಪಡೆಯುತ್ತಿದ್ದಾರೆ. ಮುಂದೇನಾಗುತ್ತದೆಯೋ ಕಾದು ನೋಡೋಣ. ಈಗ ಹೊರ ಬಂದಿರುವ ಧ್ರುವಂತ್ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು..