ಸಿನಿಮಾ ರಂಗದಲ್ಲಿ ಆಗಾಗ ಕೆಲವೊಂದಿಷ್ಟು ವಿಚಾರಗಳು ಹೆಚ್ಚು ಚರ್ಚೆ ಆಗುತ್ತವೆ ಜೊತೆಗೆ ಅಷ್ಟೇ ದೊಡ್ಡ ಮಟ್ಟದಲ್ಲಿ ಬಹು ಬೇಗ ಎಲ್ಲರಿಗು ಮುಟ್ಟುತ್ತವೆ. ತಮಿಳು ನಟ ಧನುಷ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ಡೇಟಿಂಗ್‌ನಲ್ಲಿ ಇದ್ದಾರೆ ಎಂಬ ಸುದ್ದಿ ಇದೀಗ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಇಬ್ಬರೂ ಒಟ್ಟಿಗೆ ಹಲವಾರು ವೇದಿಕೆ ಹಾಗೂ ಫಂಕ್ಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಟ ಧನುಷ್ ಅವರು ಹಂಚಿಕೊಂಡ ಫೋಟೋಗೆ ನಟಿ ಮೃಣಾಲ್ ಠಾಕೂರ್ ಭಾರಿ ಉತ್ಸಾಹದಲ್ಲಿ ಕಮೆಂಟ್ ಮಾಡಿದ್ದು, “ಸರ್.. ಎಂಥ ಅದ್ಭುತ ಪಯಣ. ಬ್ಲಾಕ್‌ಬಸ್ಟರ್, ಕಲ್ಟ್, ಲೆಗೆಸಿ” ಎಂದು ಬರೆದಿದ್ದಾರೆ ಎನ್ನಲಾಗಿ ತಿಳಿದುಬಂದಿದೆ. ಅದಕ್ಕೆ ಧನುಷ್ ಅವರು ಅಪ್ಪುಗೆ ಮತ್ತು ಬಿಳಿ ಹೃದಯದ ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದು, ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಸೌತ್‌ನಿಂದ ಹಿಡಿದು ಬಾಲಿವುಡ್ ವರೆಗೂ ಈ ಸುದ್ದಿ ಚರ್ಚೆಗೆ ಕಾರಣವಾಗಿದೆ.
ಸನ್ ಆಫ್ ಸರ್ದಾರ್-2′ ಚಿತ್ರದ ಪ್ರೀಮಿಯರ್ ವೇಳೆ ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಮಸ್ತ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೆ,ತೇರೆ ಇಷ್ಕ್ ಮೇ’ ಚಿತ್ರದ ಶೂಟಿಂಗ್ ಮುಗಿದಾಗಲೂ ಇಬ್ಬರೂ ಒಟ್ಟಿಗೆ ಇದ್ದರು. ಧನುಷ್ ಅವರ ಸಹೋದರಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಮೃಣಾಲ್ ಫಾಲೋ ಮಾಡಿರುವುದು ಕೂಡ ಗಾಸಿಪ್‌ಗೆ ಮತ್ತಷ್ಟು ಬಣ್ಣ ಹಚ್ಚಿದೆ. ಈ ಎಲ್ಲ ಕಾರಣಗಳಿಂದ ಧನುಷ್ ಮತ್ತು ಮೃಣಾಲ್ ನಡುವೆ ಡೇಟಿಂಗ್ ಗಾಸಿಪ್ ಹಬ್ಬಿದೆ. ಅಭಿಮಾನಿಗಳು ಹಾಗೂ ಮಾಧ್ಯಮ ವಲಯದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ. ಇವರಿಬ್ಬರ ವಿಚಾರವಾಗಿ ಮುಂದಿನ ಹಂತದ ಬದಲಾವಣೆ ಏನಿರಬಹುದು ಎಂದು ಅವರ ಅಭಿಮಾನಿಗಳು ಅವರ ಉತ್ತರಕ್ಕೆ ಎದುರು ನೋಡುತ್ತಿದ್ದಾರೆ.
ಧನುಷ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿಗೆ ವಿಚ್ಛೇದನ ನೀಡಿದ ಬಳಿಕ ಮೃಣಾಲ್ ಜೊತೆ ಡೇಟಿಂಗ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ನಟ ಧನುಷ್ ಅವರಿಗೆ 42 ವರ್ಷವಾಗಿದ್ದು, ಮೃಣಾಲ್‌ಗೆ 33 ವರ್ಷ. ಈ ವಯೋಮಾನದ ಅಂತರದ ಬಗ್ಗೆ ಕೂಡ ಭಾರಿ ಚರ್ಚೆ ನಡೆಯುತ್ತಿದೆ. ಮುಂದೆ ಏನಾಗುತ್ತದೆಯೋ ಕಾದು ನೋಡೋಣ ಧನ್ಯವಾದಗಳು.