Jan 25, 2026 Languages : ಕನ್ನಡ | English

ಚಿಕ್ಕಬಳ್ಳಾಪುರದಲ್ಲಿ ನಟ ಚಿರಂಜೀವಿ ಅಭಿಮಾನಿಗಳ ಹುಚ್ಚು ಸಂಭ್ರಮ!!

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಹೊಸ ಚಲನಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಅಭಿಮಾನಿಗಳ ಸಂಭ್ರಮ ತೀವ್ರಗೊಂಡಿದೆ. ನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಬೆಳಿಗ್ಗೆಯಿಂದಲೇ ಅಭಿಮಾನಿಗಳ ಕಿಕ್ಕಿರಿದು ಜನಸಂದಣಿ ಕಂಡುಬಂದಿದೆ.  ಹೌದು ಬಿಬಿ ರಸ್ತೆಯಲ್ಲಿರುವ ಬಾಲಾಜಿ ಚಿತ್ರಮಂದಿರದಲ್ಲಿ ಬೆಳಿಗ್ಗೆ ಮೊದಲ ಶೋದಿಂದಲೇ ಹೌಸ್‌ಫುಲ್ ಬೋರ್ಡ್ ಹಾಕಲಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಲು ಮುಗಿಬಿದ್ದು, ಟಿಕೆಟ್‌ಗಾಗಿ ಉದ್ದ ಸಾಲುಗಳಲ್ಲಿ ನಿಂತು ನಿರೀಕ್ಷಿಸಿದರು. ಚಿತ್ರಮಂದಿರದ ಒಳಗೆ ಪ್ರವೇಶಿಸಿದ ನಂತರ, ಶಿಳ್ಳೆ ಹಾಕಿ, ರಾಶಿ ರಾಶಿ ಕಲರ್ ಪೇಪರ್‌ಗಳನ್ನು ಮೇಲೆಸೆದು ಸಂಭ್ರಮ ವ್ಯಕ್ತಪಡಿಸಿದರು.

ಬಾಲಾಜಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ: ಶಿಳ್ಳೆ, ಕಲರ್ ಪೇಪರ್ ಮಳೆ
ಬಾಲಾಜಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ: ಶಿಳ್ಳೆ, ಕಲರ್ ಪೇಪರ್ ಮಳೆ

ಮನಶಂಕರ ವರಪ್ರಸಾದ್ ಗಾರು ನಿರ್ದೇಶನದ ಈ ಚಿತ್ರಕ್ಕೆ ಅಭಿಮಾನಿಗಳ ಪ್ರತಿಕ್ರಿಯೆ ಉತ್ಸಾಹಭರಿತವಾಗಿತ್ತು. ಚಿರಂಜೀವಿ ಅವರ ಅಭಿನಯವನ್ನು ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಚಿತ್ರ ಆರಂಭವಾದ ಕ್ಷಣದಿಂದಲೇ ಹಾಲ್‌ನಲ್ಲಿ ಘೋಷಣೆಗಳು, ಚಪ್ಪಾಳೆಗಳು, ಶಿಳ್ಳೆಗಳು ಮೊಳಗಿದವು. ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಬೆಳಿಗ್ಗೆಯಿಂದಲೇ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದ್ದು, ಅಭಿಮಾನಿಗಳ ಉತ್ಸಾಹವನ್ನು ತೋರಿಸುತ್ತದೆ. ಕೆಲವರು ಮುಂಜಾನೆ 5 ಗಂಟೆಯಿಂದಲೇ ಚಿತ್ರಮಂದಿರದ ಮುಂದೆ ಸೇರಿ ತಮ್ಮ ನೆಚ್ಚಿನ ನಟನ ಚಿತ್ರವನ್ನು ಮೊದಲ ಶೋದಲ್ಲೇ ನೋಡಲು ನಿರೀಕ್ಷಿಸಿದರು.

ಚಿತ್ರಮಂದಿರದ ಹೊರಗೆ ಅಭಿಮಾನಿಗಳು ಬ್ಯಾನರ್‌ಗಳು, ಪೋಸ್ಟರ್‌ಗಳು ಹಿಡಿದು ಸಂಭ್ರಮಿಸಿದರು. ಕೆಲವರು ಚಿರಂಜೀವಿ ಅವರ ಫೋಟೋಗಳಿಗೆ ಹಾಲು ಹಾಯಿಸಿ ತಮ್ಮ ಅಭಿಮಾನವನ್ನು ತೋರಿಸಿದರು. ಈ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಚಿಕ್ಕಬಳ್ಳಾಪುರದ ಅಭಿಮಾನಿಗಳ ಉತ್ಸಾಹವನ್ನು ಎಲ್ಲೆಡೆ ತಲುಪಿಸಿವೆ. ನಗರದ ಬೀದಿಗಳಲ್ಲಿ ಅಭಿಮಾನಿಗಳ ಮೆರವಣಿಗೆ, ಘೋಷಣೆ ಕೂಗು, ಡ್ರಮ್‌ಗಳ ಸದ್ದು, ಒಟ್ಟಾಗಿ ಹೇಳಬೇಕು ಅಂದರೆ, ಒಂದು ಹಬ್ಬದ ವಾತಾವರಣವನ್ನು ನಿರ್ಮಿಸಿತು ಎನ್ನಬಹುದು. ನಟ ಚಿರಂಜೀವಿ ಅವರ ಚಿತ್ರದ ಬಿಡುಗಡೆಯ ದಿನವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದರು.

Latest News